ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆನ್ವೇರಿ ಎಚ್ಚರಿಸಿದ್ದಾರೆ.
ಹಾವೇರಿ: ಜಿಲ್ಲೆಯ ಹಿರಿಯ ಕಾಂಗ್ರೆಸ್ ಶಾಸಕ, ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿರುವ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆನ್ವೇರಿ ಎಚ್ಚರಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂಬ ತೋರಿಕೆಗೆ ಮಾತ್ರ ಸೀಮಿತವಾಗಿದೆ. ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರಿದ್ದರೂ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸ್ಥಾನ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಜಿಲ್ಲೆಯ ಪ್ರಭಾವಿ ಶಾಸಕ ಬಸವರಾಜ ಶಿವಣ್ಣನವರ 1985ರಿಂದ ರಾಜಕಾರಣಕ್ಕೆ ಬಂದು, ಎರಡು ಸಲ ಹಾವೇರಿ, ಎರಡು ಬಾರಿ ಬ್ಯಾಡಗಿ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. 1995ರಲ್ಲಿ ಸಚಿವರಾಗಿಯೂ ಅಧಿಕಾರ ಮಾಡಿದ್ದಾರೆ. ಸುದೀರ್ಘ 40 ವರ್ಷ ರಾಜಕೀಯ ಅನುಭವ ಹೊಂದಿರುವ ಅವರು ಉತ್ತರ ಕರ್ನಾಟಕದ ಭಾಗದಲ್ಲಿ ತಮ್ಮದೇಯಾದ ಪ್ರಾಬಲ್ಯವನ್ನು ಹೊಂದಿ ಚಿರಪರಿಚಿತರಾಗಿದ್ದಾರೆ ಎಂದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿವೃತ್ತ ಎಂಜಿನಿಯರ್ ವಿಜಯಕುಮಾರ ಮುದಕಣ್ಣವರ ಮಾತನಾಡಿ, ಅಶೋಕ ಬಣಕಾರ, ವಿರೂಪಾಕ್ಷಪ್ಪ ಹುಲ್ಲೂರ, ಹನುಮಂತಗೌಡ ಗಾಜಿಗೌಡ್ರ, ಪರಮೇಶ ಮಣ್ಣಮ್ಮನವರ, ನಿಂಗಪ್ಪ ತುಕ್ಕಪ್ಪನವರ, ಬಸವರಾಜ ಕಂಬಳಿ, ಮಾಲತೇಶ ಶಿಡಗನಾಳ, ರಮೇಶ ಚಾವಡಿ, ಪರಶುರಾಮ ಪಾಟೀಲ, ಪ್ರಕಾಶ ಮಜ್ಜಗಿ, ಕಾಂತೇಶ ಅಲ್ಲಾಪುರ, ಫಕ್ಕೀರಪ್ಪ ವೆಂಕಟಾಪುರ, ಸುಭಾಷ್ ಕೆಡಗಣ್ಣನವರ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.