ನಾಡಗೌಡರಿಗೆ ಸಚಿವ ಸ್ಥಾನಕ್ಕೆ ಆಗ್ರಹ: ನಾಡಿದ್ದು ಮುದ್ದೇಬಿಹಾಳ ಬಂದ್‌

KannadaprabhaNewsNetwork |  
Published : Jun 17, 2026, 03:00 AM IST
ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ ಮಾತನಾಡಿದರು. | Kannada Prabha

ಸಾರಾಂಶ

ಮುದ್ದೇಬಿಹಾಳ ಮತಕ್ಷೇತ್ರದ ಶಾಸಕಾದ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರನ್ನು ಈ ಬಾರಿ 2ನೇ ಅವಧಿಯ ಸರ್ಕಾರ ರಚನೆಯ ಮಂತ್ರಿಮಂಡದಲ್ಲಿ ಕ್ಯಾಬಿನೇಟ್‌ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಜೂ.19 ರಂದು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಮುದ್ದೇಬಿಹಾಳ ಬಂದ್‌ ಕರೆ ನೀಡಲಾಗಿದೆ ಎಂದು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮುದ್ದೇಬಿಹಾಳ ಮತಕ್ಷೇತ್ರದ ಶಾಸಕಾದ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರನ್ನು ಈ ಬಾರಿ 2ನೇ ಅವಧಿಯ ಸರ್ಕಾರ ರಚನೆಯ ಮಂತ್ರಿಮಂಡದಲ್ಲಿ ಕ್ಯಾಬಿನೇಟ್‌ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಜೂ.19 ರಂದು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಮುದ್ದೇಬಿಹಾಳ ಬಂದ್‌ ಕರೆ ನೀಡಲಾಗಿದೆ. ಪಟ್ಟಣದ ಎಲ್ಲ ಸಂಘ-ಸಂಸ್ಥೆಯ ಮುಖ್ಯಸ್ಥರು, ಕಾರ್ಯಕರ್ತರು, ಸಾಹಿತಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ ಮನವಿ ಮಾಡಿದರು.

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಗೃಹಕಚೇರಿಯಲ್ಲಿ ಮಂಗಳವಾರ ನಡೆದ ವಿವಿಧ ಸಂಘ- ಸಂಸ್ಥೆಗಳ ಹಾಗೂ ವಿವಿಧ ವ್ಯಾಪಾರಸ್ಥರ, ಗಣ್ಯರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಸಿ.ಎಸ್.ನಾಡಗೌಡರು ಕಳೆದ 45 ವರ್ಷಗಳ ಸುದೀರ್ಘ ಪಕ್ಷ ನಿಷ್ಟರಾಗಿ 6 ಬಾರಿ ಶಾಸಕರಾಗಿ ಶರಣತ್ವ ಸಿದ್ಧಾಂತದಲ್ಲಿ ಉತ್ತಮ ಸನ್ನಡತೆ ಹೊಂದಿದ ಹಿರಿಯರಾಜಕಾರಣಿಯಾಗಿ ಬೆಳೆದು ಬಂದವರು. ಕಾಂಗ್ರೆಸ್‌ ಸರ್ಕಾರದ ರಚನೆಯಲ್ಲಿ ಪ್ರತಿ ಬಾರಿಯೂ ಹಿರಿಯರ ಸಾಲಿನ ಸಚಿವ ಸ್ಥಾನದಲ್ಲಿ ಅಪ್ಪಾಜಿ ನಾಡಗೌಡರ ಹೆಸರು ಮುಂಚುಣಿಗೆ ಬರುತ್ತದೆ. ಇನ್ನೇನು ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿಯಿಂದ ಕೈಬಿಟ್ಟು ಬೇರೆಯವರನ್ನು ಆಯ್ಕೆ ಮಾಡುತ್ತಲೇ ಅಪಮಾನಿಸಲಾಗುತ್ತಿದೆ. ಅದರಂತೆ ಕಳೆದ 2023ರ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಕೂಡ ನಾಡಗೌಡರನ್ನು ಮಂತ್ರಿಯನ್ನಾಗಿ ಮಾಡದೇ ಅಪಮಾನಿಸಲಾಯಿತು. ಇದು ಬರಿ ಶಾಸಕ ಅಪ್ಪಾಜಿ ನಾಡಗೌಡರಿಗೆ ಅಪಮಾನವಲ್ಲ, ಈಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ, ಜನತೆಗೆ ಅಪಮಾನಿಸಿದಂತಾಗಿದೆ ಎಂದು ಕಿಡಿಕಾರಿದರು.

ಬೀಜ ಹಾಗೂ ರಸಗೊಬ್ಬರ ಅಗ್ರೋ ಫರ್ಟಿಲೈಜರ್ ಸಂಘದ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಅಪ್ಪಾಜಿ ನಾಡಗೌಡರು ಒಬ್ಬ ಸಭ್ಯಸ್ಥ ತಮ್ಮ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆಯಿಲ್ಲದೇ ಮಾದರಿಯಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡವರು. ಇವರನ್ನು ಪಕ್ಷಯಾವಾಗಲೋ ಗುರ್ತಿಸಬೇಕಾಗಿತ್ತು. ಇವರ ಸೌಮ್ಯ ಸ್ವಭಾವಕ್ಕೋ ಅಥವಾ ಪಕ್ಷ ನಿಷ್ಠೆ ತೊರಿದ್ದಕ್ಕೋ ಇವರನ್ನು ಸ್ಥಾನ, ಮಾನ ನೀಡುವಲ್ಲಿ ಹಿಂದೇಟು ಹಾಕುತ್ತಿದೆಯೋ ಏನೋ ಗೊತ್ತಿಲ್ಲ. ಕಾಂಗ್ರೆಸ್ ವರಿಷ್ಠರು ಈ ಬಾರಿ ಅಪ್ಪಾಜಿ ನಾಡಗೌಡರನ್ನು ಸಚಿವ ಸ್ಥಾನ ನೀಡಿ ಗೌರವಿಸಲೇ ಬೇಕು ಎಂದು ಆಗ್ರಹಿಸಿದರು.

ಎಪಿಎಂಸಿ ಸಿ.ಎಲ್.ಬಿರಾದಾರ ಹಾಗೂ ಬಿ.ಪಿ.ಮೂರಾಳ ಮಾತನಾಡಿ, ಸೌಮ್ಯರಾಜಕಾರಣಿ ಶಾಸಕ ಅಪ್ಪಾಜಿ ನಾಡಗೌಡ ಅವರನ್ನು ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಎಲ್ಲ ಮುಖಂಡರು ನಡೆಸುತ್ತಿರುವ ಮುದ್ದೇಬಿಹಾಳ ಬಂದ್‌ ಕರೆ ಹಾಗೂ ಪ್ರತಿಭಟನೆ ಮುದ್ದೇಬಿಹಾಳ ಎಪಿಎಂಸಿ ವರ್ತಕರ ಸಂಘವೂ ಸಂಪೂರ್ಣ ಬೆಂಬಲವಿದೆ ಎಂದರು.

ಈ ವೇಳೆ ಪಟ್ಟಣದ ಗಣ್ಯ ವ್ಯಾಪಾರಸ್ಥರಾದ ರಮೇಶ ಓಸ್ವಾಲ್‌, ಎಂ.ಬಿ.ನಾವದಗಿ, ಗಫೂರಸಾಬ್‌ ಮಕಾಂದಾರ, ಬಿ.ಕೆ.ಬಿರಾದಾರ, ಎಚ್.ಟಿ.ಬಿರಾದಾರ, ಪ್ರಭುರಾಜ ಕಲಬುರ್ಗಿ, ಅಮರೇಶ ಗೂಳಿ, ಸಂಗಣ್ಣ ಮೇಲಿಮನಮನಿ, ಸದು ಮಠ, ಗಣೇಶ ಅನ್ನಗೋನಿ, ಬಾಪುಗೌಡ ಪಿರಾಪೂರ, ಸುರೇಶ ಪಾಟೀಲ, ಸಂಗನಗೌಡ ಪಾಟೀಲ, ತಿಪ್ಪಣ್ಣ ದೊಡಮನಿ, ನೇತಾಜಿ ನಲವಡೆ, ರವಿ ಗೂಳಿ, ವಿರುಪಾಕ್ಷಿ ಪತ್ತಾರ, ಜಗದೀಶ ಕಂಠಿ, ಅಪ್ಪು ದೇಗಿನಾಳ, ಸಂಗನಗೌಡ ಬಿರಾದಾರ(ಜಿಟಿಸಿ), ಸಿಕಂದರ ಜಾನ್ವೇಕರ, ಪಿಂಟು ಸಾಲಿಮನಿ, ವೈ.ಎಚ್.ವಿಜಯಕರ, ಲಕ್ಷ್ಮಣ ಲಮಾಣಿ, ಹಣಮಂತ ಕುರಿ, ಬಸವರಾಜ ಚಿನಿವಾರ, ಅಶೋಕ ಚೇಟ್ಟೆರ, ವೆಂಕನಗೌಡ ಪಾಟೀಲ, ಅಕ್ಷತಾ ಚಲವಾದಿ, ಸರಸ್ವತಿ ಪಿರಾಪೂರ, ಸುಜಾತಾ ಶಿಂಧೆ, ನೀಲಮ್ಮ ಚಲವಾದಿ, ಮಾಬೂಬಿ ಬಾಗವಾನ ಸೇರಿದಂತೆ ಹಲವರು ಇದ್ದರು.

2ನೇ ಅವಧಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಕೇಂದ್ರದ ಹಾಗೂ ರಾಜ್ಯದ ವರಿಷ್ಠರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅಪ್ಪಾಜಿ ನಾಡಗೌಡರನ್ನು ಉತ್ತಮ ದರ್ಜೆಯ ಸಚಿವಸ್ಥಾನ ನೀಡಿ ಗೌರವಿಸಬೇಕು. ಇಲ್ಲವಾದರೇ ಮತಕ್ಷೇತ್ರದ ಎಲ್ಲ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂಬುವುದು ಹಕ್ಕೋತ್ತಯದ ಮೂಲಕ ಒಂದು ದಿನದ ಸಾಂಕೇತಿಕ ಮುದ್ದೇಬಿಹಾಳ ಬಂದ್‌ ಕರೆ ನೀಡುವುದರ ಜತೆಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗುವುದು.

-ಅಧ್ಯಕ್ಷ ಗುರು ತಾರನಾಳ, ತಾಲೂಕು ಬ್ಲಾಕ್‌ ಕಾಂಗ್ರೆಸ್‌.

ಮತಕ್ಷೇತ್ರದ ಎಲ್ಲ ಜನರ ಪರವಾಗಿ ಅಪ್ಪಾಜಿ ನಾಡಗೌಡರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸುತ್ತೇನೆ. ಈ ನಿಟ್ಟಿನಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಮುದ್ದೇಬಿಹಾಳ ಬಂದ್‌ ಕರೆ ಹಾಗೂ ಪ್ರತಿಭಟನೆಗೆ ತಾಲೂಕಿನ ಎಲ್ಲ ಬೀಜ ಹಾಗೂ ರಸಗೊಬ್ಬರ, ಅಗ್ರೋ ಫರ್ಟಿಲೈಜರ್ ಸಂಘವು ಸಂಪೂರ್ಣ ಬೆಂಬಲಿಸಬೇಕು.

-ಶಿವಶಂಕರಗೌಡ ಹಿರೇಗೌಡರ, ಅಧ್ಯಕ್ಷರು, ಬೀಜ ಹಾಗೂ ರಸಗೊಬ್ಬರ ಅಗ್ರೋ ಫರ್ಟಿಲೈಜರ್ ಸಂಘ ಮುದ್ದೇಬಿಹಾಳ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಬ್ಯಾಕಸ್ ಶಿಕ್ಷಣದಿಂದ ಏಕಾಗ್ರತೆ, ಸ್ಮರಣಶಕ್ತಿ ಹೆಚ್ಚಳ: ಸ್ನೇಹಾ ಬಿಲವಡಿ
ವಿಕಸಿತ ಭಾರತದ ಸಂಕಲ್ಪ ಸಾಕಾರಕ್ಕೆ ಎಲ್ಲರ ಸಹಕಾರ ಅಗತ್ಯ