ಶಿಗ್ಗಾವಿ: ಬೆಂಬಲ ಬೆಲೆಯಲ್ಲಿ ಜೋಳ ಖರೀದಿ ಮಾಡುವಂತೆ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಗ್ಗಾವಿ ತಾಲೂಕು ಘಟಕದ ವತಿಯಿಂದ ಮನವಿ ಅರ್ಪಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶಿಗ್ಗಾವಿ ತಾಲೂಕು ಘಟಕದ ಅಧ್ಯಕ್ಷ ಆನಂದ ಕೆಳಗಿನಮನಿ ನೇತೃತ್ವದಲ್ಲಿ ಮನವಿ ಅರ್ಪಿಸಿದ ರೈತ ಮುಖಂಡರು, ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಜನತಾ ದರ್ಶನದ ಸಂದರ್ಭದಲ್ಲಿ ಜೋಳ ಖರೀದಿ ಕೇಂದ್ರ ತೆರೆಯುವ ಕುರಿತು ಮನವಿಯನ್ನ ಅರ್ಪಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಕೂಡ ತಾಲೂಕು ಆಡಳಿತದ ಅಧಿಕಾರಿಗಳು ಬೆಂಬಲ ಬೆಲೆಗೆ ಜೋಳ ಖರೀದಿ ಮಾಡುತ್ತಿಲ್ಲ ಎಂದರು.ಸಾಕಷ್ಟು ಬಾರಿ ಆಹಾರ ವಿಭಾಗಾಧಿಕಾರಿಗಳ ಗಮನಕ್ಕೂ ಕೂಡ ತರಲಾಗಿತ್ತು, ಎಲ್ಲ ರೈತರು ಸಹಿತ ಆಧಾರ್ ಕಾರ್ಡ್ ಮತ್ತು ಹೆಬ್ಬಟ್ಟು ತೆಗೆದುಕೊಳ್ಳುವುದು ಮಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಜೋಳ ಖರೀದಿ ಮಾಡದೆ ಇರುವುದು ರೈತರ ಸಂಕಷ್ಟ್ಟಕ್ಕೆ ಕಾರಣವಾಗಿದೆ. ದಲ್ಲಾಳಿಗಳಿಗೆ ಕಡಿಮೆ ದರದಲ್ಲಿ ಜೋಳ ಮಾರುವ ಪರಿಸ್ಥಿತಿ ತಾಲೂಕಿನ ರೈತರಿಗೆ ಬಂದು ಒದಗಿದೆ. ಇದಕ್ಕೆಲ್ಲ ತಾಲೂಕು ಆಡಳಿತ ನಿರ್ಲಕ್ಷ್ಯ ಹಾಗೂ ಆಹಾರ ವಿಭಾಗ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ರೈತರ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದಂತಾಗಿದ್ದು ಒಂದು ವಾರದೊಳಗೆ ಜೋಳ ಖರೀದಿ ಕೇಂದ್ರ ತೆರೆಯದಿದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ಇದೇ ಸಂದರ್ಭದಲ್ಲಿ ರೈತರು ನೀಡಿದರು.
ತಾಲೂಕು ಅಧ್ಯಕ್ಷ ಆನಂದ್ ಕೆಳಗಿನಮನಿ, ಉಪಾಧ್ಯಕ್ಷ ಶಂಕರ್‌ಗೌಡ ಪಾಟೀಲ್, ಕಾರ್ಯದರ್ಶಿ ಗಿರಿಧರ್‌ಗೌಡ ಪಾಟೀಲ್, ಚಂದ್ರಶೇಖರ್ ನೆರ್ತಿ, ರಾಜು ಸಂಶಿ, ಮಂಜುನಾಥ್ ಕಂಕಣವಾಡ, ದಯಾನಂದ ಮೆಣಸಿನಕಾಯಿ, ದೇವರಾಜ್ ಗೊಟಗೋಡಿ, ಮಾರುತಿ ವಾಲ್ಮೀಕಿ, ಸುರೇಶ್ ಕಲ್ಲಾಪುರ, ಬಸನಗೌಡ್ರು ಹೇಗನ್‌ಗೌಡ್ರು ಶಂಭು ಹರಿಜನ್ ಸೇರಿದಂತೆ ರೈತ ಮುಖಂಡರು ರೈತರು ಉಪಸ್ಥಿತರಿದ್ದರು.