
-ನೀರು ಬಿಡುಗಡೆಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ ನಾಲ್ಕನೇ ದಿನಕ್ಕೆ
ಕನ್ನಡಪ್ರಭ ವಾರ್ತೆ ಅಫಜಲಪುರ
ಭೀಮಾನದಿಗೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ವೃತ್ತದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಸೋಮವಾರ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ರಮೇಶ ಶೆಟ್ಟಿ, ಭೀಮರಾವ ಗೌರ, ಶ್ರೀಮಂತ ಬಿರಾದಾರ, ರಮೇಶ ಪಾಟೀಲ, ಶಾಂತು ಅಂಜುಟಗಿ, ಗುರು ಚಾಂದಕವಟೆ ಮಾತನಾಡಿ, ನಾರಾಯಣಪುರ, ಜಲಾಶಯದಿಂದ 1.5 ಟಿಎಂಸಿ ನೀರು ಬಿಡುಗಡೆ ಮಾಡಿದರೂ ಅದು ಭೀಮಾನದಿಗೆ ತಲುಪುವ ಭರವಸೆ ಇಲ್ಲ. ಕಾವೇರಿ ನದಿಗೆ ನೀಡುವಷ್ಟೇ ಆದ್ಯತೆಯನ್ನು ಭೀಮಾನದಿಗೂ ನೀಡಬೇಕು. ಅಭಿವೃದ್ಧಿ ಎಂದರೆ ನೀರು, ವಿದ್ಯುತ್ ಹಾಗೂ ರೈತರಿಗೆ ನ್ಯಾಯಯುತ ಬೆಂಬಲ ಬೆಲೆ ಒದಗಿಸುವುದಾಗಿದೆ. ಉಜನಿ ಅಣೆಕಟ್ಟಿನಿಂದ ಭೀಮಾನದಿಗೆ ನೀರು ಬಿಡುಗಡೆ ಕುರಿತು ಸರ್ಕಾರ ತಕ್ಷಣ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ದೇವಲ
ಸುದ್ದಿಗೋಷ್ಠಿಯಲ್ಲಿ ಅಣ್ಣರಾವ್ ಪಾಟೀಲ, ರಮೇಶ ಶೆಟ್ಟಿ, ಭೀಮರಾವ ಗೌರ, ಶ್ರೀಮಂತ ಬಿರಾದಾರ, ರಮೇಶ ಪಾಟೀಲ, ಶಾಂತು ಅಂಜುಟಗಿ ಗುರು ಚಾಂದಕವಟೆ ಗುರು ಹುಲ್ಲೂರ, ನೂರಅಹ್ಮದ್ ಭಾಗವಾನ, ಅರ್ಜುನ ಸೋಮಜಾಳ, ಶ್ರೀಕಾಂತ ದಿವಾಣಜಿ,ಮಹಾಂತೇಶ ಪಾಟೀಲ, ಚಂದು ಬನ್ನೆಟ್ಟಿ, ಮಹಿಬೂಬ ಸಿಧನೂರ ಇದ್ದರು
ಅಫ್ಜಲಪುರದಲ್ಲಿ ರೈತ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಅಣ್ಣರಾವ್ ಪಾಟೀಲ, ರಮೇಶ ಶೆಟ್ಟಿ, ಭೀಮರಾವ ಗೌರ, ಶ್ರೀಮಂತ ಬಿರಾದಾರ ಮುಂತಾದವರು ಇದ್ದರು.