ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅರಣ್ಯ ಇಲಾಖೆಯ ಗ್ರೀನ್ ಟೋಲ್‌ಗೇಟ್ ಸೇರಿದಂತೆ ಇತರೆ ಸುಂಕಗಳ ವಸೂಲಿ ಕೇಂದ್ರಗಳು ಪುಣಜನೂರು ಗ್ರಾಮದ ಮಧ್ಯೆದಲ್ಲಿ ಇದ್ದು, ಇದರಿಂದ ಗ್ರಾಮಸ್ಥರು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಪುಣಜನೂರಿನ ರಂಗಸ್ವಾಮಿ ನಾಯಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ಕಳೆದ ಎರಡು ವರ್ಷಗಳಿಂದ ಈಚೆಗೆ ಪುಣಜನೂರು ಗ್ರಾಮದ ಅರಣ್ಯ ತನಿಖಾ ಠಾಣೆಯ ಮುಂಭಾಗದಲ್ಲಿ ಹಸಿರು ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಇದರಿಂದ ಕೇಂದ್ರದ ಮುಂದೆ ಬೆಳಗ್ಗೆಯಿಂದ ಸಂಜೆಯವರಿಗೆ ಒಂದೇ ಸಮನೇ ವಸೂಲಿ ಕೇಂದ್ರದ ಮುಂದೆ ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಲ್ಲುತ್ತಿವೆ. ಸಾರ್ವಜನಿಕರು, ಶಾಲಾ ಮಕ್ಕಳು, ವಯೋವೃದ್ಧರು, ವಿಕಲ ಚೇತನರು ಹಾಗೂ ಆಂಬ್ಯುಲೆನ್ಸ್ ಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಮತ್ತು ವಸೂಲಿ ಕೇಂದ್ರದ ಮುಂದೆ ಅವಸರದಲ್ಲಿ ಸಾಗುವ ವಾಹನಗಳಿಂದ ಅಪಘಾತಗಳುಂಟಾಗುತ್ತಿದೆ. ಸುಂಕ ವಸೂಲಿ ಕೇಂದ್ರದ ಪಕ್ಕದಲ್ಲಿಯೇ ಬಾರ್ ಇದ್ದು, ಮಧ್ಯದಂಗಡಿಗೆ ಬರುವ ನಾಗರೀಕರು ವಾಹನಗಳ ಮಧ್ಯೆ ಸಿಲುಕಿ ಸಾವು ನೋವುಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸೋಲಿಗೆ ಜನಾಂಗದ ಅಮಾಯಕ ವ್ಯಕ್ತಿಯೊಬ್ಬ ಇತ್ತೀಚೆಗೆ ಬಾರಿ ವಾಹನಕ್ಕೆ ಸಿಲುಕಿ ತನಿಖಾ ಠಾಣೆಯ ಮುಂದೆಯೇ ಮರಣ ಮೃತನಾಗಿದ್ದೇನೆ. ಆದ ಕಾರಣ ಈ ಮೇಲ್ಕಂಡ ಶುಲ್ಕ ವಸೂಲಿ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ಹಿತರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.ಸಾಲದಂತೆ ಸದರಿ ತನಿಖಾ ಠಾಣೆಗೆ ಫಾಸ್ಟ್ರಾಕ್ ಶುಲ್ಕ ವಸೂಲಿ ಯಂತ್ರವನ್ನು ಅಳವಡಿಸುತ್ತಿದ್ದು, ಇದು ಮತ್ತೇ ಅವಘಡಗಳಿಗೆ ಕಾರಣವಾಗುತ್ತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವ ಶುಲ್ಕ ವಸೂಲಿ ಕೇಂದ್ರಗಳು ಗ್ರಾಮದ ಮಧ್ಯ ಭಾಗದಲ್ಲಿ ಇಲ್ಲ. ಆದರೆ, ಪುಣಜನೂರು ಗ್ರಾಮದ ಮಧ್ಯೆ ಮಾತ್ರ ಎಲ್ಲ ಶುಲ್ಕ ವಸೂಲಿ ಕೇಂದ್ರಗಳು ಅಳವಡಿಸುತ್ತಿರುವುದು ಸರಿಯಲ್ಲ.
ನಮ್ಮ ಗ್ರಾಮದಲ್ಲಿ ಮಾತ್ರ ಯಾಕೆ? ಈ ರೀತಿ ಗ್ರಾಮದ ಮಧ್ಯ ಭಾಗದಲ್ಲಿ ವಸೂಲಿ ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಈ ಬಗ್ಗೆ ತುರ್ತು ಕ್ರಮ ವಹಿಸಿ, ಹಸಿರು ಶುಲ್ಕ ವಸೂಲಿ ತನಿಖಾ ಠಾಣೆಯನ್ನು ಗ್ರಾಮದ ಹೊರಗಡೆಗೆ ಸ್ಥಳಾಂತರಿಸಬೇಕು.ಒಂದು ವೇಳೆ ಇದನ್ನು ಒಂದು ವಾರದೊಳಗೆ ಸ್ಥಳಾಂತರದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯ ಭಾಗದಲ್ಲಿ ಗಾಂಧೀಜಿ ಫೋಟೋ ಇಟ್ಟುಕೊಂಡು ಏಕ ವ್ಯಕ್ತಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ರಂಗಸ್ವಾಮಿ ನಾಯಕ ಒತ್ತಾಯಿಸಿದ್ದಾರೆ.