ಅನಧಿಕೃತ ಟೋಲ್‌ಗಳ ತೆರವಿಗೆ ಆಗ್ರಹ

KannadaprabhaNewsNetwork |  
Published : Sep 03, 2025, 01:02 AM IST
ಮನವಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಹಾಗೂ ಹುನಗುಂದ ಮಾರ್ಗದ ಮುಖ್ಯ ರಸ್ತೆಯ ಮಧ್ಯದಲ್ಲಿ ಅನಧಿಕೃತ ಟೋಲ್‌ಗಳನ್ನು ನಿಷೇಧಿಸುವುದು ಹಾಗೂ ರಸ್ತೆ ಪಕ್ಕದಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಟ್ಟು ರಸ್ತೆ ಅಗಲೀಕರಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಯುವಜನ ಸೇನೆ ಮುಖ್ಯಸ್ಥ ಶಿವಾನಂದ ವಾಲಿ ಹಾಗೂ ಕರವೆ ಸ್ವಾಭಿಮಾನಿ ಬಣದ ಅಧ್ಯಕ್ಷ ಸಂಗಯ್ಯ ಸಾರಂಗಮಠ ನೇತೃತ್ವದಲ್ಲಿ ತಂಗಡಗಿ ಗ್ರಾಮದಲ್ಲಿ ಮಂಗಳವಾರ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಲೂಕಿನ ತಂಗಡಗಿ ಹಾಗೂ ಹುನಗುಂದ ಮಾರ್ಗದ ಮುಖ್ಯ ರಸ್ತೆಯ ಮಧ್ಯದಲ್ಲಿ ಅನಧಿಕೃತ ಟೋಲ್‌ಗಳನ್ನು ನಿಷೇಧಿಸುವುದು ಹಾಗೂ ರಸ್ತೆ ಪಕ್ಕದಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಟ್ಟು ರಸ್ತೆ ಅಗಲೀಕರಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಯುವಜನ ಸೇನೆ ಮುಖ್ಯಸ್ಥ ಶಿವಾನಂದ ವಾಲಿ ಹಾಗೂ ಕರವೆ ಸ್ವಾಭಿಮಾನಿ ಬಣದ ಅಧ್ಯಕ್ಷ ಸಂಗಯ್ಯ ಸಾರಂಗಮಠ ನೇತೃತ್ವದಲ್ಲಿ ತಂಗಡಗಿ ಗ್ರಾಮದಲ್ಲಿ ಮಂಗಳವಾರ ಧರಣಿ ನಡೆಸಿದರು.ಧರಣಿ ನಡೆಸುತ್ತಿರುವ ಮಾಹಿತಿ ತಿಳಿದ ಕೆಆರ್‌ಡಿಸಿಎಲ್‌ನ ಇಇ ಪ್ರವೀಣ ಹುಲಜಿ ಹಾಗೂ ಎಇ ಸುಧೀರ ಮೇತ್ರಿ, ಸಿ.ಯು.ಹರ್ಲಾಪೂರ ಧರಣಿ ಸ್ಥಳಕ್ಕೆ ಆಗಮಿಸಿ ಚರ್ಚೆ ನಡೆಸಿದರು. ಈ ವೇಳೆ ಶಿವಾನಂದ ವಾಲಿ ಮಾತನಾಡಿ, ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ರಸ್ತೆಯನ್ನು ವಿಶ್ವ ಬ್ಯಾಂಕ್‌ ಆರ್ಥಿಕ ನೆರವಿನಡಿಯಲ್ಲಿ ಅಭಿವೃದ್ಧಿಪಡಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ತಂಗಡಗಿ ಗ್ರಾಮದ ಪರಿಮಿತಿಯಲ್ಲಿ ಸುಮಾರು 100ಮೀ. ರಸ್ತೆ ಅಗಲೀಕರಣ ಮಾತ್ರ ಬಾಕಿಯಿದ್ದು, ರಸ್ತೆ ಅಗಲೀಕರಣ ಕಾಮಗಾರಿಗೆ 31 ಮನೆಗಳು ತೊಂದರೆಯನ್ನುಂಟು ಮಾಡುತ್ತಿವೆ. ಸದ್ಯ ಈ ಕಟ್ಟಡಗಳಿಗೆ ಈಗಾಗಲೇ ಸರ್ಕಾರ ₹ 2.39 ಕೋಟಿ ಪರಿಹಾರ ನೀಡುವ ಮೂಲಕ ಪರ್ಯಾಯ ಬಡಾವಣೆ ನಿರ್ಮಿಸಲು ತಂಗಡಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಸ.ನಂ 124/1ನಲ್ಲಿ 2 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ. ಆದರೆ, ಇಲ್ಲಿತನಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರತ್ಯೇಕ ಬಡಾವಣೆ ನಿರ್ಮಿಸಿ, ಆ 31 ಮನೆಗಳನ್ನು ತೆರವುಗೊಳಿಸಲು ಮೀನಮೇಷ ಎಣಿಸುತ್ತಿದ್ದಾರೆ. ಅಲ್ಲದೇ, ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣಗೊಳಿಸದೇ ಟೋಲ್‌ಗಳನ್ನು ಅಳವಡಿಸಿ ವಾಹನ ಸವಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಈ ಟೋಲ್‌ಗಳನ್ನು ತೆರವುಗೊಳಿಸಬೇಕು, ರಸ್ತೆ ಪಕ್ಕದ ಮನೆಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಕೆಆರ್‌ಡಿಸಿಎಲ್‌ನ ಇಇ ಪ್ರವೀಣ ಹುಲಜಿ ಹಾಗೂ ಎಇ ಸುಧೀರ ಮೇತ್ರಿ, ಸಿ.ಯು.ಹರ್ಲಾಪೂರ ಮಾತನಾಡಿ, ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕೆಆರ್‌ಡಿಸಿಎಲ್‌ಗೆ ಎರಡು ಎಕರೆ ಜಮೀನು ಹಸ್ತಾಂತರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಈವರೆಗೆ ಸಾಧ್ಯವಾಗಿಲ್ಲ. ಮುಂದಿನ ಒಂದು ವಾರದಲ್ಲಿ ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿವರೆಗೆ ಕಾಲಾವಕಾಶ ನೀಡಿ ಧರಣಿ ಹಿಂಪಡೆಯುವಂತೆ ಲಿಖಿತ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಮುಖಂಡರು ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದಾರೆ.ಧರಣಿಯಲ್ಲಿ ರಫೀಕ ತೆಗ್ಗಿಮನಿ, ಗಂಗೂ ಗಂಗನಗೌಡರ, ವಿರೇಶ ಆಲಕೊಪ್ಪರ, ಮಹೇಶ ಬಂಡಿವಡ್ಡರ, ಶ್ರೀಶೈಲ ಅಳ್ಳಗಿ, ಸಂಗಣ್ಣ ಪ್ಯಾಟಿ, ಮಹಾಂತೇಶ ವಡಗೇರಿ, ಗುರುರಾಜ ಕುಲಕರ್ಣಿ, ಮಂಜುನಾಥ ಪೂಜಾರಿ, ಪ್ರಕಾಶ ಹಂದ್ರಾಳ, ಹುಲ್ಲಪ್ಪ ಒಡ್ಡರ, ಶಿವಾನಂದ ದೇವರಮನಿ, ಪರುಶುರಾಮ ಒಡ್ಡರ, ಸಿದ್ದಣ್ಣ ಹೊಳಿ, ಸಂಗಪ್ಪ ಹೊಳಿ, ಮಂಜುನಾಥ ದೇವರಮನಿ ಸೇರಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ