ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ವೇಳೆ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಡಾ.ಸ್ವಾಮಿನಾಥನ್ ವರದಿ ಪ್ರಕಾರ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಎಂಎಸ್‌ಪಿಯನ್ನುಶಾಸನ ಬದ್ಧವಾಗಿ ಜಾರಿಗೊಳಿಸಬೇಕು ಮತ್ತು ಈ ವಿಷಯದ ಬಗ್ಗೆ ರೈತ ನಾಯಕರಾದ ಜಗಜಿತ್ ಸಿಂಗ್ ದೆಹಲಿಯ ಶಂಭುಗಡಿಯಲ್ಲಿ 50 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದು, ಸರ್ಕಾರಗಳು ಅವರ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ರೈತ ವಿರೋಧಿ ಕಾಯ್ದೆಗಳುದೇಶದ ಪ್ರಧಾನ ಮಂತ್ರಿಗಳಾಗಬಹುದು ಮತ್ತು ರಾಜ್ಯದ ಮುಖ್ಯಮಂತ್ರಿಗಳಾಗಬಹುದು ರೈತ ದೇಶದ ಬೆನ್ನೆಲುಬು ಎಂದು ಹೇಳಿ ರೈತನ ಹೆಸರಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿ ರೈತನ ತುಟಿಗೆ ತುಪ್ಪ ಸವರಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿ ರೈತನ ಬೆನ್ನೆಲುಬು ಮುರಿಯುತ್ತಿದ್ದೀರಿ. ಸ್ವಾಮಿನಾಥನ್ ರವರು 24 ವರ್ಷಗಳ ಹಿಂದೆ ರೈತರ ಆತ್ಮಹತ್ಯೆಗೆ ಕಾರಣಗಳನ್ನು ಹುಡುಕಿ ಎಂಎಸ್ ಪಿ ಯನ್ನು ಜಾರಿ ಮಾಡಿದರೆ ರೈತನ ಬದುಕು ಹಸನಾಗುತ್ತದೆ ಎಂದರು.
ಕುಸುಮ್ ಬಿ ಎಲ್ಲರಿಗೂ ಅನ್ವಯಿಸಲಿ
ಕುಸುಮ್ ಬಿ ಯೋಜನೆಯು ಎಲ್ಲಾ ರೈತರಿಗೂ ಸಿಗುವಂತಾಗಬೇಕು, ರೈತರ ಫಲವತ್ತಾದ ಕೃಷಿ ಭೂಮಿಗಳನ್ನು ಕೈಗಾರಿಕಾ ಕರಣಕ್ಕೆ ಸ್ವಾದಿನ ಪಡಿಸಿಕೊಳ್ಳುವುದನ್ನು ಕೈಬಿಡಬೇಕು. ಈಗಾಗಲೇ ಸರ್ಕಾರವು ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿಯ ರೈತರ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಕಾರ್ಯಕ್ಕೆ ಮುಂದಾಗಿದ್ದು ಅದನ್ನು ಕೂಡಲೆ ನಿಲ್ಲಿಸಬೇಕು. ಸರ್ಕಾರವು ಈ ಎಲ್ಲಾ ರೈತ ಪರ ಕಾರ್ಯಗಳನ್ನು ಕೂಡಲೇ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟ ಉಗ್ರ ವಾಗಿರುತ್ತದೆ ಎಂದು ಸರ್ಕಾರಗಳಿಗೆ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮನಾಥ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ವೀರಾಪುರ ಮುನಿ ನಂಜಪ್ಪ, ತಾಲೂಕು ಅಧ್ಯಕ್ಷರುಗಳಾದ ರಾಮಾಂಜನಪ್ಪ, ನೆಲಮಾಕನಹಳ್ಳಿ ಗೋಪಾಲ್, ತಾದೂರು ಮಂಜುನಾಥ್, ರಮಣರೆಡ್ಡಿ, ಸೋಮು, ಲಕ್ಷ್ಮಣ್ ರೆಡ್ಡಿ, ಬಿ.ನಾರಾಯಣ ಸ್ವಾಮಿ, ರಾಮಕೃಷ್ಣಪ್ಪ, ಕುಪ್ಪಳ್ಳಿ ಶ್ರೀನಿವಾಸ್, ಜಾತವರ ಮುನಿರಾಜು, ರಾಮಾಂಜಿನಪ್ಪ,ಅಶ್ವತಪ್ಪ, ಮಹೇಶ, ರಾಮಚಂದ್ರಪ್ಪ, ಸುಂದ್ರಹಳ್ಳಿ ಬೀರಪ್ಪ, ಕನ್ನಮಂಗಲ ನಾಗರಾಜು, ಪಿ.ವಿ.ದೇವರಾಜ್, ಬುಸ್ಸನಹಳ್ಳಿ ದೇವರಾಜ್,ಮತ್ತಿತರರು ಇದ್ದರು.