ಕನ್ನಡಪ್ರಭ ವಾರ್ತೆ ಕೆಜಿಎಫ್ ಕೆಜಿಎಫ್‌ನಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಸ್ವಾಭಿಮಾನಿ ಬಣದ ಮೋಹನ್ ಕೃಷ್ಣ ಹಾಗೂ ಕೆಜಿಎಫ್ ತಾಲೂಕು ಅಧ್ಯಕ್ಷ ಪಿ.ದಯಾನಂದ್ ಸಂಸದ ಮಲ್ಲೇಶ್ ಬಾಬು ಅವರಿಗೆ ಮನವಿಪತ್ರ ಸಲ್ಲಿಸಿದ್ದರು. ಸಂಸದ ಮಲ್ಲೇಶ್ ಬಾಬು ಅವರನ್ನು ಸನ್ಮಾನಿಸಿದ ಸಮಾರಂಭದಲ್ಲಿ ಮೋಹನ್ ಕೃಷ್ಣ ಮಾತನಾಡಿ, ಕೆಜಿಎಫ್ ನಗರದಲ್ಲಿ ಚಿನ್ನದ ಗಣಿಗಳನ್ನು ೨೦೦೧ ರಲ್ಲಿ ಮುಚ್ಚಿದ ನಂತರ ಚಿನ್ನದ ಗಣಿಗಳ ಕಾರ್ಮಿಕರ ಕುಟುಂಬಗಳು ಆತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು, ಕಾರ್ಮಿಕರ ಕುಟುಂಬಗಳ ನಿರ್ವಹಣೆಗೆ ಪ್ರತಿ ದಿನ ಬೆಂಗಳೂರು ನಗರಕ್ಕೆ ೩೦ ಸಾವಿರಕ್ಕೂ ಹೆಚ್ಚು ಯುವ, ಯುವತಿಯರು ದುಡಿಮೆ ಮಾಡಿಕೊಂಡು ದಿನನಿತ್ಯದ ಜೀವನ ನಡೆಸುತ್ತಿದ್ದಾರೆ ಎಂದರು.ಕೆಜಿಎಫ್‌ನಲ್ಲೇ ಕೈಗಾರಿಕೆ ಸ್ಥಾಪಿಸಿ
ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿಜಿಲ್ಲೆಯಲ್ಲಿ ಏಕೈಕ ಸಾರ್ವಜನಿಕ ಉದ್ಯಮ ಅಂದರೆ ಬೆಮಲ್ ಕಾರ್ಖಾನೆ, ಈ ಹಿಂದೆ ಬೆಮೆಲ್ ಕಾರ್ಖಾನೆಯಲ್ಲಿ ೭ ಸಾವಿರ ಕಾರ್ಮಿಕರು ದುಡಿಯುತ್ತಿದ್ದು, ಕಳೆದ ೧೫ ವರ್ಷದಿಂದ ಬೆಮೆಲ್ ಕಾರ್ಖಾನೆಯಲ್ಲಿ ಕಾರ್ಮಿಕರ ನೇಮಕಾತಿ ನಿಲ್ಲಿಸಿ, ದಿನಗೂಲಿ ನೌಕರರು ಕಾರ್‍ಯನಿರ್ವಹಿಸುತ್ತಿದ್ದಾರೆ, ಬೆಮೆಲ್ ಕಾರ್ಖಾನೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿ ಸ್ಥಳೀಯರಿಗೆ ಕಾಯಂ ಉದ್ಯೋಗವನ್ನು ಕಲ್ಪಿಸಲು ಮನವಿ ಮಾಡಿದರು. ಕಳೆದ ೧೦ ವರ್ಷದಿಂದ ಮಾರಿಕುಪ್ಪಂ-ಕುಪ್ಪಂನ ೨೫ ಕಿ.ಮೀ ರೈಲ್ವೆ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದ್ದು, ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸರ್ಮಪಿಸಬೇಕೆಂದು ಮೋಹನ್‌ಕೃಷ್ಣ ತಿಳಿಸಿದರು. ಈ ಸಂದರ್ಭದಲ್ಲಿ
ಜೆಡಿಎಸ್‌ನ ಕೆಜಿಎಫ್ ತಾಲೂಕು ಅಧ್ಯಕ್ಷ ಪಿ.ದಯಾನಂದ್ ಇದ್ದರು.