-ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಾಗಗೊಂಡನಹಳ್ಳಿ ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಚಳ್ಳಕೆರೆ ತಾಲೂಕು ಪರಶುರಾಂಪುರ ಹೋಬಳಿಯ ನಾಗಗೊಂಡನಹಳ್ಳಿ ಬಳಿ ಹರಿಯುತ್ತಿರುವ ವೇದಾವತಿ ನದಿ ಮತ್ತು ರಾಣಿಕೆರೆ ಗರಣಿ ಹಳ್ಳ ಸಂಗಮ ದೇವಸ್ಥಾನದ ಹತ್ತಿರ ಕೂಡುವುದರಿಂದ ಕೂಡಲಸಂಗಮವೆಂದು ನಾಮಕರಣ ಮಾಡಿದ್ದು, ಈ ಪ್ರದೇಶವನ್ನು ಪ್ರವಾಸೋಧ್ಯಮ ಇಲಾಖೆಗೆ ಸೇರಿಸಿ ಅಭಿವೃದ್ಧಿಪಡಿಸುವಂತೆ ಕೂಡಲಸಂಗಮೇಶ್ವರ ಸೇವಾ ಸಮಿತಿ ಹಾಗೂ ನಾಗಗೊಂಡನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಪ್ರತಿ ಶನಿವಾರ ಹಾಗೂ ಸೋಮವಾರ ಈ ಪುಣ್ಯ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚು ಇದೆ. ಪುರಾತನ ಕಾಲದ ಶಿವಲಿಂಗಗಳಿವೆ. ಚಳ್ಳಕೆರೆ ತಾಲೂಕು ಬುಡಕಟ್ಟು ಜನಾಂಗದ ದೇವರುಗಳು ಕೂಡಲ ಸಂಗಮ ನದಿಯಲ್ಲಿ ಪುಣ್ಯ ಸ್ನಾನ ಮಾಡಿಸಲು ರಂಗವ್ವನಹಳ್ಳಿ, ಕರಿಕೆರೆ, ಕಾಲುವೆಹಳ್ಳಿ, ಯಾದಲಗಟ್ಟೆ, ಕ್ಯಾತಗೊಂಡನಹಳ್ಳಿ, ಗುಡಿಹಳ್ಳಿ, ಬೂದಿಹಳ್ಳಿ, ದೊಡ್ಡುಳ್ಳಾರ್ತಿ, ಚಿತ್ರನಾಯಕನಹಳ್ಳಿ, ಘಟಪರ್ತಿ, ಬೋಗನಹಳ್ಳಿ, ಹೊನ್ನೂರು, ದೇವರೆಡ್ಡಿಹಳ್ಳಿ, ಬುಕ್ಕಾಂಬೂದಿ ಸೇರಿದಂತೆ 25 ಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತಾಧಿಗಳು ನೂರಾರು ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಈ ಪ್ರದೇಶವನ್ನು ಅಭಿವೃದ್ದಿಪಡಿಸುವಂತೆ ಜಿಲ್ಲಾಧಿಕಾರಿಯಲ್ಲಿ ವಿನಂತಿಸಿದರು.
ಆರ್.ರಾಜಣ್ಣ, ಧನಂಜಯ, ಕೆ.ಪಿ.ಭೂತಯ್ಯ, ಎನ್.ಹೆಚ್.ಭೀಮಣ್ಣ, ಬಡೇಶ, ಮಂಜುನಾಥ, ಯರ್ರಿಸ್ವಾಮಿ, ನರಸಿಂಹಮೂರ್ತಿ, ಸಂಜೀವರೆಡ್ಡಿ, ರೇವಣ್ಣ, ಭೂತೇಶ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.----------------
ಪೋಟೋ: ಕೂಡಲ ಸಂಗಮ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.------
ಪೋಟೋ: ಫೈಲ್ ನೇಮ್- 27 ಸಿಟಿಡಿ7