ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸುವಂತೆ ಆಗ್ರಹಿಸಿ ಹೊಸ ಬಸ್ ನಿಲ್ದಾಣ ಎದುರು ರಾಜ್ಯ ಹೆದ್ದಾರಿ ತಡೆದು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ. ಧನಂಜಯ ಅವರಿಗೆ ಮನವಿ ಸಲ್ಲಿಸಿದರು.
ಸಂಚಾಲಕ ವಿನಾಯಕ ಕುಂಬಾರ, ಸಾಗರ, ಮೆಹರವಾಡೆ, ಪ್ರೀತಮ್ ರಾಜೋಳಿ, ವಿನಯ ಸಪ್ಪಡ್ಲ, ರತ್ನಾ ಕಮತದ, ಸವಿತಾ ಕರೆಯತ್ತಿನ, ಚೈತ್ರಾ ಕೊರಕೇರಿ, ತೇಜಶ್ವಿನಿ ಅರಳಿ, ಭಾಗ್ಯ ವಡವಿ, ಅಪೇಕ್ಷಾ ಶೇರಸೂರಿ, ಅಪೂರ್ವ ಹವಳದ, ಜ್ಯೋತಿ ಬಾಡಗಿ, ರಮ್ಯಾ ಮಹೇಂದ್ರಕರ, ರಾಜೇಶ್ವರಿ ಪಟ್ಟೆದ ಸೇರಿದಂತೆ ಅನೇಕರು ಇದ್ದರು.ಪ್ರೊ. ಸಿ.ಡಿ. ಪಾಟೀಲರ ಬದುಕು- ಬರಹ ಕುರಿತು ಉಪನ್ಯಾಸ
ಮುಂಡರಗಿ: 30 ವರ್ಷ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ರಾಯಚೂರಿನಲ್ಲಿ ಸೇವೆ ಸಲ್ಲಿಸುವ ಮೂಲಕ ರಾಯಚೂರು ವಿಜ್ಞಾನ ಕೇಂದ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ವಿಜ್ಞಾನ ಲೇಖಕ ಸಿ.ಡಿ. ಪಾಟೀಲ ಅವರದಾಗಿದೆ ಎಂದು ವಿಶ್ರಾಂತ ಪ್ರಾ. ಸಿ.ಎಸ್. ಅರಸನಾಳ ತಿಳಿಸಿದರು.ಸ್ಥಳೀಯ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಾತೋಶ್ರೀ ಸಾವಿತ್ರಮ್ಮ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿರುವ ತಾಲೂಕು ಸಾಹಿತಿಗಳ ಕೃತಿಗಳ ಅವಲೋಕನ ಕಾರ್ಯಕ್ರಮದ ಉಪನ್ಯಾಸ- 3ರಲ್ಲಿ ವಿಜ್ಞಾನ ಲೇಖಕ ಪ್ರೊ. ಸಿ.ಡಿ. ಪಾಟೀಲರ ಬದುಕು- ಬರಹ ಕುರಿತು ಉಪನ್ಯಾಸ ನೀಡಿದರು.ಸಿ.ಡಿ. ಪಾಟೀಲ ಅವರು ರಚಿಸಿದ ಮಕ್ಕಳಿಗೆ ಸರಳವಾಗಿ ವಿಜ್ಞಾನದ ಚಟುವಟಿಕೆಗಳನ್ನು ಮಾಡುವ ನಿಟ್ಟಿನಲ್ಲಿ 101 ವಿಜ್ಞಾನ ಪ್ರಯೋಗಗಳು ಎಂಬ ಪುಸ್ತಕವು ವಿದ್ಯಾರ್ಥಿಗಳು ವಿಜ್ಞಾನ ಮಾದರಿಯನ್ನು ತಯಾರಿಸಲು ಉಪಯುಕ್ತವಾಗಿದೆ ಎಂದರು.ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಲೇಖಕ ಪ್ರೊ. ಸಿ.ಡಿ. ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಕವಿ ಬಂಕಾಪೂರ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಅಂದಾನಗೌಡ ಕುಲಕರ್ಣಿ, ಆರ್.ವೈ. ಪಾಟೀಲ, ಕೃಷ್ಣಾ ಸಾಹುಕಾರ, ಡಾ. ಬಿ.ಜಿ. ಜವಳಿ, ಆರ್.ಕೆ. ರಾಯನಗೌಡ್ರ, ಎಂ.ಎಸ್. ಹೊಟ್ಟಿನ, ಮಂಜುನಾಥ ಮುಧೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಮೇಶಗೌಡ ಪಾಟೀಲ ಸ್ವಾಗತಿಸಿದರು. ಪ್ರೊ. ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮ್ಮ ಕೊಟ್ಟೂರಶೆಟ್ಟರ ನಿರೂಪಿಸಿದರು. ವೀಣಾ ಪಾಟೀಲ ವಂದಿಸಿದರು.