ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಾರ್ವಕನಿಕರಿಂದ ಆಗ್ರಹ

KannadaprabhaNewsNetwork |  
Published : Jun 19, 2025, 11:51 PM IST
18 ಬೀರೂರು1ಬೀರೂರಿನ ಸಂತೆ ಮೈದಾನ ರಸ್ತೆಯಲ್ಲಿ ಹೆಚ್ಚಿದ ಬೀದಿ ನಾಯಿಗಳು ಎಲ್ಲೆಂದರಲ್ಲಿ ಗುಂಪಾಗಿ ನಿಂತಿರುವುದು. | Kannada Prabha

ಸಾರಾಂಶ

ಬೀರೂರು, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು ಕಡಿವಾಣ ಹಾಕಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

- ಪುರಸಭೆ: ವಿಫಲ। ನಾಯಿಗಳಿಂದ ಶಾಲಾ ಮಕ್ಕಳಿಗೆ , ವೃದ್ಧರಿಗೆ ತೊಂದರೆ

ಕನ್ನಡಪ್ರಭ ವಾರ್ತೆ,ಬೀರೂರುಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು ಕಡಿವಾಣ ಹಾಕಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಪಟ್ಟಣದ ಹೊಸ ಅಜ್ಜಂಪುರ ರಸ್ತೆ, ಹಾಲಪ್ಪ ಬಡಾವಣೆ, ಶಿವಾಜಿ ನಗರ,ಬಳ್ಳಾರಿ ಕ್ಯಾಂಪ್, ಸಂತೆ ಮೈದಾನದ ಬಡಾವಣೆಯಲ್ಲಿ ಮಿತಿಮೀರಿದ ನಾಯಿಗಳ ಹಿಂಡು ರಸ್ತೆಯಲ್ಲಿ ಸಾಗುವ ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರ ಮೇಲೆ ಮುಗಿಬಿದ್ದು ವಾಹನ ಸವಾರರರಿಗೆ ಪೆಟ್ಟು ಬಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಮನೆಯಿಂದ ಹೊರಹೋಗುವಾಗ ಮತ್ತು ಹಿಂದಿರುಗುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಐದಾರು ಮಂದಿ ಸೇರಿ ಒಟ್ಟಿಗೆ ಹೊರಹೋಗುವ ಪರಿಸ್ಥಿತಿ ಇದೆ ಎಂದು ಸ್ಥಳೀಯ ಮಹಿಳೆಯರು ದೂರಿದರು.ಪುರಸಭೆಯ 23 ವಾರ್ಡಗಳ ವ್ಯಾಪ್ತಿಯಲ್ಲಿ 10ರಿಂದ 20ನಾಯಿಗಳ ತಂಡಗಳಿವೆ. ಪ್ರತಿ ತಂಡದಲ್ಲಿ 7ರಿಂದ 10 ನಾಯಿಗಳು ಸದಾ ಹೊಸ ಅಜ್ಜಂಪುರ ರಸ್ತೆಯಲ್ಲಿ ಬೀಡು ಬಿಟ್ಟಿರುತ್ತವೆ. ಇಲ್ಲಿಯೇ ಅತಿ ಹೆಚ್ಚು ಕೋಳಿ ಅಂಗಡಿಗಳಿದ್ದು ಚರಂಡಿಯಲ್ಲಿ ಬಿದ್ದ ತ್ಯಾಜ್ಯ ಮತ್ತು ಮಾಂಸಕ್ಕಾಗಿ ಕಿತ್ತಾಡಿಕೊಂಡು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರು ಮತ್ತು ಪಾದಚಾರಿಗೆ ತೊಂದರೆ ಕೊಡುತ್ತಿವೆ. ನಾಯಿಗಳ ಕಾಟಕ್ಕೆ ಹೆದರಿ ಈ ರಸ್ತೆಯಲ್ಲೆ ಸಂಚರಿಸಲು ಭಯವಾಗುತ್ತದೆ ಎನ್ನುತ್ತಾರೆ ಸ್ಥಳೀಯ ಶಿವಣ್ಣಸಂತೆ ಮೈದಾನದಲ್ಲಿ ಪುರಸಭೆ ನೀಡಿರುವ ಮಟನ್ ಶಾಪ್ ನಲ್ಲಿ ಪ್ರತಿ ನಿತ್ಯ ಕುರಿ ಕಡಿದು ವ್ಯಾಪಾರ ಮಾಡುತ್ತಾರೆ. ಪಕ್ಕದಲ್ಲಿಯೇ ಈ ತ್ಯಾಜ್ಯ ಹಾಕುವುದರಿಂದ ನಾಯಿಗಳ ಹಾವಳಿ ಹೆಚ್ಚಿದ್ದು ಪುರಸಭೆಯವರು ಆ ಅಂಗಡಿಯವರಿಗೆ ತ್ಯಾಜ್ಯವನ್ನು ಪಟ್ಟಣದಿಂದ ಹೊರಹಾಕಿಸಿದರೇ ನಾಯಿಗಳ ನಿಯಂತ್ರಣವಾಗುತ್ತದೆ ಎನ್ನುತ್ತಾರೆ ಮಲ್ಲಿಕಾರ್ಜುನ್.ಹಾಲಪ್ಪ ಬಡಾವಣೆಯಲ್ಲಿ ಕಳೆದ ಮಂಗಳವಾರ ಸಂಜೆ ನನ್ನ ಮಗಳು ಶಾಲೆಯಿಂದ ಮನೆಗೆ ಬರುವಾಗ ಬೀದಿ ನಾಯಿ ಕಡಿ ಯಲು ಅಟ್ಟಾಡಿಸಿಕೊಂಡು ಬಂದಿದೆ. ಹೀಗಾದರೇ ಮಕ್ಕಳ, ಪೋಷಕರ ಪಾಡೇನು. ಪುರಸಭೆಯರು ಪ್ರಾಣಿ ದಯಾ ಸಂಘದವರಿಗೆ ಮನವರಿಗೆ ಮಾಡಿ ಇಂತಹ ಮಕ್ಕಳ ಮೇಲೆಗುವ ಪ್ರಣಿಗಳನ್ನು ನಿಯಂತ್ರಣ ಮಾಡಲಿ. ರಾಧಮ್ಮ ಗೃಹಿಣಿ.ಪ್ರಾಣಿಗಳ ಹುಟ್ಟು ತಡೆಯುವಿಕೆ ನಿಯಮದ ಪ್ರಕಾರ ಯಾವುದೇ ಪ್ರಾಣಿಗಳನ್ನು ಸಾಯಿಸುವಂತಿಲ್ಲ, ಹಾವಳಿ ನೀಡುವ ನಾಯಿ ಗಳನ್ನು ಹಿಡಿದು ಸಂತಾನ ಹರಣ ಮಾಡಿ ಅವು ವಾಸಿಸುವ ಸ್ಥಳದಲ್ಲಿಯೇ ಬಿಡಬೇಕೆಂಬ ನಿಯಮವಿದೆ. ರೇಬಿಸ್ ಮತ್ತು ಹುಚ್ಚು ಹಿಡಿದ ನಾಯಿಗಳನ್ನು ಸಾಯಿಸಬಹುದು, ಈ ಬಗ್ಗೆ ಪುರಸಭೆ ಅಭಿಯಂತರರು ನಾಯಿಗಳ ಸಂತಾನ ಹರಣ ಮಾಡಲು ಟೆಂಡರ್ ಕರೆಯಲಾಗಿದ್ದು ಯಾರು ಮುಂದೆ ಬಂದಿಲ್ಲ, ಈ ಬಗ್ಗೆ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳು ತ್ತೇನೆ. ಪುರಸಭೆ ಪರಿಸರ ಅಭಿಯಂತರ ನೂರುದ್ದೀನ್.ಕೂಡಲೆ ಪುರಸಭೆ ಆಡಳಿತ ಮಧ್ಯಪ್ರವೇಶಿಸಿ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ, ನಾಗರಿಕರ ನೆಮ್ಮದಿ ಜೀವನಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.18 ಬೀರೂರು1ಬೀರೂರಿನ ಸಂತೆ ಮೈದಾನ ರಸ್ತೆಯಲ್ಲಿ ಹೆಚ್ಚಿದ ಬೀದಿ ನಾಯಿಗಳು ಎಲ್ಲೆಂದರಲ್ಲಿ ಗುಂಪಾಗಿ ನಿಂತಿರುವುದು.

PREV

Recommended Stories

ಬೀದಿನಾಯಿ, ಬಿಡಾಡಿ ದನದ ಉಪಟಳ ತಡೆಗೆ ನಿರ್ಣಯ
ಕೊಟ್ಟ ಮಾತಿನಂತೆ ವಂದೇ ಭಾರತ ರೈಲು ತಂದಿದ್ದೇನೆ