ತಲೇಖಾನ ಗ್ರಾಪಂ ಸದಸ್ಯರಿಂದ ಪಿಡಿಒ ವಿಶ್ವನಾಥಗೆ ಮನವಿ
ಕನ್ನಡಪ್ರಭವಾರ್ತೆ ಮುದಗಲ್
ನರೇಗಾ ಯೋಜನೆಗೆ ಸಂಬಂಧಿಸಿದಂತೆ ತಲೇಖಾನ ಗ್ರಾಪಂದಲ್ಲಿ ತೇಜಸ್ವಿನಿ ಏಜೆನ್ಸಿಗೆ ನರೇಗಾ ಸಾಮಗ್ರಿ ಪೂರೈಕೆ ಗುತ್ತಿಗೆ ನೀಡದಂತೆ ಗ್ರಾಪಂ ಸದಸ್ಯರು ಪಿಡಿಒ ವಿಶ್ವನಾಥಗೆ ಆಗ್ರಹಿಸಿದ್ದಾರೆ.ಈ ಹಿಂದೆ 2020-21, 2021-22 ಹಾಗೂ 2022-23ರಲ್ಲಿ ನಿರ್ವಹಿಸಿದ ನರೇಗಾ ಕಾಮಗಾರಿಗಳಿಗೆ ಸರಿಯಾದ ರೀತಿಯಲ್ಲಿ ಸಾಮಗ್ರಿ ಪೂರೈಸದೆ, ಕಾಮಗಾರಿ ಪೂರ್ಣಗೊಳಿಸುವಲ್ಲಿ ಅಸಹಕಾರ ತೋರಿರುವುದರಿಂದ ಅನೇಕ ಕಾಮಗಾರಿ ಅರೆಬರೆಯಾಗಿವೆ. ಇದಲ್ಲದೆ ಗ್ರಾಪಂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು, ತಮ್ಮ ಏಜೆನ್ಸಿಯಿಂದ ತಾವು ನಿರ್ವಹಿಸಿದ ನರೆಗಾ ಯೋಜನೆ ಬಗ್ಗೆ ದೂರುಸಲ್ಲಿಸುವುದು ಸೇರಿ ಅನೇಕ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಗ್ರಾಪಂ ಅಭಿವೃಧ್ದಿಗೆ ಹಿನ್ನಡೆ ಉಂಟಾಗಿದ್ದರಿಂದ 2024-25ರ ನರೇಗಾ ಯೋಜನೆಗೆ ಕರೆಯಲಾದ ಸಾಮಗ್ರಿ ಪೂರೈಕೆ ಗುತ್ತಿಗೆಯನ್ನು ನೀಡದಂತೆ ತಡೆಹಿಡಿಯಬೇಕೆಂದು ಗ್ರಾಪಂ ಆಡಳಿತಕ್ಕೆ ಸದಸ್ಯರು ಬರೆದ ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.
ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಕನಕಪ್ಪ, ಸದಸ್ಯರಾದ ವೀರನಗೌಡ ತಲೇಖಾನ, ದುರುಗಪ್ಪ ಕಟ್ಟಿಮನಿ, ಪಾಂಡುರಂಗನಾಯ್ಕ, ಹನುಮಂತಪ್ಪ ಗಂಟಿ, ಹನುಮಂತಪ್ಪ ತಲೇಖಾನ, ಮಾನಸಿಂಗ್ ರಾಠೋಡ ಇದ್ದರು. -------------29ಎಂಡಿಎಲ್01ಮುದಗಲ್ ಸಮೀಪದ ತಲೇಖಾನ ಗ್ರಾಪಂದಲ್ಲಿ ತೇಜಸ್ವಿನಿ ಏಜೆನ್ಸಿಗೆ ನರೆಗಾ ಸಾಮಗ್ರಿ ಪೂರೈಕೆ ಗುತ್ತಿಗೆ ನೀಡದಂತೆ ಸದಸ್ಯರು ಆಗ್ರಹಿಸಿ ಮನವಿ ಪತ್ರ ಸಲ್ಲಿಸದರು.