ಗಡ್ಡಿ ಸರ್ಕಾರಿ ಶಾಲೆ ಮುಚ್ಚದಂತೆ ಒತ್ತಾಯ

KannadaprabhaNewsNetwork |  
Published : Mar 30, 2026, 02:00 AM IST
29ುಲು4 | Kannada Prabha

ಸಾರಾಂಶ

ಗಡ್ಡಿಯಲ್ಲಿ ಬಡವರಿಗೆ ಇರುವುದು ಒಂದೇ ಸರ್ಕಾರಿ ಶಾಲೆ.ಈ ಶಾಲೆ ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5 ವರ್ಷದ ಮಕ್ಕಳು 12 ಕಿಲೋ ಮೀಟರ್ ದೂರ ಹೇಗೆ ಹೋಗಬೇಕು

ಗಂಗಾವತಿ: ತಾಲೂಕಿನ ಗಡ್ಡಿ ಗ್ರಾಮದ ಸರ್ಕಾರಿ ಶಾಲೆ ಮುಚ್ಚಬಾರದು ಎಂದು ಆಗ್ರಹಿಸಿ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಗ್ರಾಮದ ಬಸವಣ್ಣನ ಗುಡಿ ಹತ್ತಿರ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿ,ಪೋಷಕರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿಂಧು ಕೌದಿ, ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ನಿಂದ ₹2,500 ಕೋಟಿ ಸಾಲ ತಂದು ಕೆಪಿಎಸ್ ಮಾಗ್ನೆಟ್ ಹೆಸರಲ್ಲಿ ರಾಜ್ಯದಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗಡ್ಡಿ ಶಾಲೆಯೂ ಕೂಡ ಈ ಪಟ್ಟಿಯಲ್ಲಿದೆ.ಕಾರಣ ಈ ಯೋಜನೆ ಕೈಬಿಟ್ಟು ಶಾಲೆ ಮುಂದುವರಿಸಬೇಕೆಂದು ಆಗ್ರಹಿಸಿದರು.

ಸಂಗನಗೌಡ ಪಾಟೀಲ್ ಮಾತನಾಡಿ, ಗಡ್ಡಿಯಲ್ಲಿ ಬಡವರಿಗೆ ಇರುವುದು ಒಂದೇ ಸರ್ಕಾರಿ ಶಾಲೆ.ಈ ಶಾಲೆ ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5 ವರ್ಷದ ಮಕ್ಕಳು 12 ಕಿಲೋ ಮೀಟರ್ ದೂರ ಹೇಗೆ ಹೋಗಬೇಕು? ಹೆಚ್ಚು ಬಡವರ ಮಕ್ಕಳು ದಾಖಲಾತಿ ಇರುವ ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ ಎಂದರು.

ಈ ವೇಳೆ ಯುವಜನ ಸಂಘಟನೆಯ ಮುಖಂಡ ಶರಣು ಪಾಟೀಲ್,ಚನ್ನಬಸವ ಕುಂಬಾರ್, ಹನುಮೇಶ್ ವೀರಯ್ಯ ಹಿರೇಮಠ್, ಸುರೇಶ್ ಗಡ್ಡಿ, ಬಸವರಾಜ್ ತಳವಾರ್,ಎಸ್ ಜಿಎಂಸಿ ಅಧ್ಯಕ್ಷ ಫಕೀರಪ್ಪ ಪೂಜಾರ್, ಸದಸ್ಯ ಗಂಗಮ್ಮ ಉಪ್ಪಾರ್, ಹನುಮಂತಪ್ಪ, ಮುತ್ತಣ್ಣ, ತಿಮ್ಮಣ್ಣ, ನೀಲಮ್ಮ, ನಾಗವ್ವ ಉಪ್ಪಾರ, ರೆನ್ನಮ್ಮ,ದುರ್ಗಮ್ಮ, ಬಾಲಪ್ಪ ಮಾದಿನಾಳ್, ಗಣೇಶಯ್ಯ ಸ್ವಾಮಿ, ಯಮನೂರ್ ಉಪ್ಪಾರ್, ರಜೀಯಾ ಬೇಗಂ, ದ್ಯಾಮಮ್ಮ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಆಗ್ರಹ
ಸಂಶೋಧಕರಿಗೆ ಆಳವಾದ ಅಧ್ಯಯನ ಅಗತ್ಯ