ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗೆ ನೀಡದಂತೆ ಒತ್ತಾಯ

KannadaprabhaNewsNetwork |  
Published : Jun 17, 2026, 02:15 AM IST
ವಿದ್ಯುತ್ ವಿತರಣಾ ಕಾರ್ಯಕ್ಕೆ ಟಾಟಾ ಪವರ್ ಲಿಮಿಟೆಡ್ ಕಂಪನಿಗೆ ಪರವಾನಿಗೆ ನೀಡುವ ಕುರಿತು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಂಗಳವಾರ ರಾಣಿಬೆನ್ನೂರು ನಗರದ ಹೆಸ್ಕಾಂ ಕಚೇರಿ ಎದುರು ಸಿಬ್ಬಂದಿಗಳು ಹಾಗೂ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಬೆಸ್ಕಾಂ, ಹೆಸ್ಕಾಂ, ಸೆಸ್ಕಾಂ ಹಾಗೂ ಜೆಸ್ಕಾಂ ವಿದ್ಯುತ್ ವಿತರಣಾ ಕಾರ್ಯಕ್ಕೆ ಟಾಟಾ ಪವರ್ ಲಿಮಿಟೆಡ್ ಕಂಪನಿಗೆ ಪರವಾನಿಗೆ ನೀಡುವ ಕುರಿತು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಹೆಸ್ಕಾಂ ಕಚೇರಿ ಎದುರು ಸಿಬ್ಬಂದಿಗಳು ಹಾಗೂ ರೈತರು ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ಬೆಸ್ಕಾಂ, ಹೆಸ್ಕಾಂ, ಸೆಸ್ಕಾಂ ಹಾಗೂ ಜೆಸ್ಕಾಂ ವಿದ್ಯುತ್ ವಿತರಣಾ ಕಾರ್ಯಕ್ಕೆ ಟಾಟಾ ಪವರ್ ಲಿಮಿಟೆಡ್ ಕಂಪನಿಗೆ ಪರವಾನಿಗೆ ನೀಡುವ ಕುರಿತು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಹೆಸ್ಕಾಂ ಕಚೇರಿ ಎದುರು ಸಿಬ್ಬಂದಿಗಳು ಹಾಗೂ ರೈತರು ಪ್ರತಿಭಟನೆ ನಡೆಸಿದರು.ಜಿಲ್ಲಾ ಕವಿಪ್ರನಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಶಿವಾನಂದ ಬಿ. ಹಾದಿಮನಿ ಮಾತನಾಡಿ, ವಿದ್ಯುತ್ ವಿತರಣೆಯಂತಹ ಮೂಲಭೂತ ಸಾರ್ವಜನಿಕ ಸೇವೆಯನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವುದು ಜನಹಿತಕ್ಕೆ ವಿರುದ್ಧವಾಗಿದ್ದು, ರೈತರು ಮತ್ತು ಸಾಮಾನ್ಯ ಗ್ರಾಹಕರಿಗೆ ಅನಾನುಕೂಲ ಉಂಟುಮಾಡಲಿದೆ. ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಯಾವುದೇ ಕ್ರಮವನ್ನು ತಕ್ಷಣವೇ ಕೈಬಿಡಬೇಕು ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ಸುರೇಶಪ್ಪ ಮೈದೂರು, ಬಸಣ್ಣ ದ್ಯಾವನಕಟ್ಟಿ, ಲೋಕೇಶ್ ಉತಾರ, ಸುರೇಶಣ್ಣ ಧೂಳೆಹೊಳೆ, ಕರಬಸಪ್ಪ ಅಗಸೀಬಾಗಿಲ, ಸಿದ್ದಪ್ಪ ಕುಪ್ಪೇಲೂರು, ರಮೇಶಗೌಡ ಹಾಗೂ ವೀರಭದ್ರಪ್ಪ ಕೊಟ್ಟೂರು, ಮಂಜು ಸಣ್ಣಿಂಗಮ್ಮನವರ, ಮಂಜುನಾಥ ಬಾರ್ಕಿ, ತಿಪ್ಪೇಶ ನಾಯಕ, ಬೀರಪ್ಪ ತಿಪ್ಪಣ್ಣನವರ, ಉಮೇಶ ಹನುಮನಾಳ, ಪರಶುರಾಮ ಹಿರೇಬಿದರಿ, ಪ್ರಶಾಂತ ಬಿಶೆಟ್ಟಿ, ಮಹ್ಮದರಪೀಕ್ ಬೇಳಕೇರಿ, ಬಸವರಾಜ ಗುಳೇದ, ಕಲೀಲಸಾಬ ನದಾಫ್ ಸೇರಿದಂತೆ, ಕವಿಪ್ರನಿ ನೌಕರರ ಸಂಘ ವೃತ್ತ ಸಮಿತಿ ಹಾವೇರಿ, ಸ್ಥಳೀಯ ಸಮಿತಿ ರಾಣಿಬೆನ್ನೂರು ಹಾಗೂ ವಿವಿಧ ಪ್ರಾಥಮಿಕ ಸಮಿತಿಗಳು, ಕಲ್ಯಾಣ ಸಂಘ, ಡಿಪ್ಲೋಮಾ ಇಂಜಿನಿಯರ್ ಸಮಿತಿ, ಎಂಜಿನಿಯರ್ ಅಸೋಸಿಯೇಶನ್, ಲೆಕ್ಕಾಧಿಕಾರಿಗಳ ಸಂಘ, ನಿವೃತ್ತ ನೌಕರರ ಸಂಘ, ವಿದ್ಯುತ್ ಗುತ್ತಿಗೆದಾರರ ಸಂಘ, ತಾಲೂಕು ರೈತ ಸಂಘಟನೆಗಳು ಹಾಗೂ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟದ ಪದಾಧಿಕಾರಿಗಳು ಮತ್ತು ನೂರಾರು ಅಧಿಕಾರಿ-ನೌಕರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಕಾಂಗ್ರೆಸ್ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿ
ನೀರಿನ ಸಂಗ್ರಹ, ಮೂಲಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ