ಹುಬ್ಬಳ್ಳಿಯಲ್ಲಿ ಆಪರೇಷನ್‌ ಫುಟ್‌ಪಾತ್‌!

KannadaprabhaNewsNetwork |  
Published : Jun 17, 2026, 02:15 AM IST
ಮಹಾನಗರ ಪಾಲಿಕೆಯ ವಲಯ ಕಚೇರಿ-4ರ ವ್ಯಾಪ್ತಿಯಲ್ಲಿ ಅಧಿಕಾರಿಗಳು ಫುಟ್‌ಪಾತ್‌ ತೆರವು ಕಾರ್ಯಾಚರಣೆ ನಡೆಸಿದರು. | Kannada Prabha

ಸಾರಾಂಶ

ಹುಬ್ಬಳ್ಳಿ ನಗರದಲ್ಲಿ ಮಾರುಕಟ್ಟೆ ಪ್ರದೇಶ, ರಸ್ತೆ ಅಕ್ಕ-ಪಕ್ಕದ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವ ಡಬ್ಬಾ ಅಂಗಡಿ, ಹಣ್ಣಿನ ವ್ಯಾಪಾರ ಸೇರಿದಂತೆ ವಿವಿಧ ನಾಮಫಲಕ ತೆರವು ಕಾರ್ಯಾಚರಣೆ ಮುಂದುವರಿದಿದ್ದು ಮಂಗಳವಾರ ನವನಗರ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದಲೇ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಹುಬ್ಬಳ್ಳಿ:

ನಗರದಲ್ಲಿ ಮಾರುಕಟ್ಟೆ ಪ್ರದೇಶ, ರಸ್ತೆ ಅಕ್ಕ-ಪಕ್ಕದ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವ ಡಬ್ಬಾ ಅಂಗಡಿ, ಹಣ್ಣಿನ ವ್ಯಾಪಾರ ಸೇರಿದಂತೆ ವಿವಿಧ ನಾಮಫಲಕ ತೆರವು ಕಾರ್ಯಾಚರಣೆ ಮುಂದುವರಿದಿದ್ದು ಮಂಗಳವಾರ ನವನಗರ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದಲೇ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಈ ಮೂಲಕ ಆಪರೇಷನ್‌ ಫುಟ್‌ಪಾತ್‌ ಕಾರ್ಯಾಚರಣೆ ಮುಂದುವರಿಸಿ ಅತಿಕ್ರಮಣದಾರರರಿಗೆ ಬಿಸಿ ಮುಟ್ಟಿಸಿದ್ದಾರೆ. ಹಲವು ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದರು ಪಾಲಿಕೆ ಅಧಿಕಾರಿಗಳು ಮುಲಾಜಿಲ್ಲದೆ ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವಲಯ ಕಚೇರಿ 4ರ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ ನಂಬರ್‌ 27,28ರ ನವನಗರದ ಮಾರುಕಟ್ಟೆ ಪ್ರದೇಶ, ರಸ್ತೆಯ ಇಕ್ಕೆಲಗಳನ್ನು ಅತಿಕ್ರಮಿಸಿಕೊಂಡು ಇಟ್ಟುಕೊಂಡಿದ್ದ ಅಂಗಡಿ, ಡಬ್ಬಾ ಗಾಡಿ, ನಾಮಫಲಕ, ಬ್ಯಾನರ್‌ ಸೇರಿದಂತೆ ಮುಂತಾದ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಮತ್ತೊಮ್ಮೆ ರಸ್ತೆ ಅತಿಕ್ರಮಿಸಿ ಅಂಗಡಿ ಇಟ್ಟುಕೊಂಡರೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಇದೇ ವೇಳೆ ಪಾಲಿಕೆ ಅಧಿಕಾರಿಗಳು ವ್ಯಾಪಾರಸ್ಥರಿಗ ಎಚ್ಚರಿಕೆ ನೀಡಿದರು.

ವಲಯ ವ್ಯಾಪ್ತಿಯ ವಿವಿಧೆಡೆ ಪಾದಚಾರಿ ಮಾರ್ಗ ಅತಿಕ್ರಮಿಸಿದ್ದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತೀವ್ರ ತೊಂದರೆಯಾಗಿತ್ತು. ಇದೀಗ ಅಧಿಕಾರಿಗಳು ತೆರವುಗೊಳಿಸಿದ್ದು, ಈ ಕಾರ್ಯಾಚರಣೆ ಮುಂದುವರಿಸಬೇಕೆಂದು ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ವಲಯ ಕಚೇರಿ 4ರ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲೇಶ ದೇಸೂರ, ಕಿರಿಯ ಅಭಿಯಂತರ ಮಂಜುನಾಥ ದೊಡವಾಡ ಸೇರಿದಂತೆ ಪಾಲಿಕೆ ಅಧಿಕಾರಿಗಳಾದ ಸೌಮ್ಯ, ಪ್ರವೀಣ ಕಲ್ಯಾಣಮಠ, ಮಹಾಂತೇಶ ಮ್ಯಾಗೇರಿ, ಮಹೇಶ ಕಾಟೆ, ಪ್ರಶಾಂತ ಶಿವಮೊಗ್ಗ, ಪೌರಕಾರ್ಮಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಕಾಂಗ್ರೆಸ್ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿ
ನೀರಿನ ಸಂಗ್ರಹ, ಮೂಲಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ