ಕಳೆದ 40 ವರ್ಷಗಳಿಂದ ಓಡಾಡುತ್ತಿದ್ದ ರಸ್ತೆಗೆ ಏಕಾಏಕಿ ಕಾಂಪೌಂಡ್ ನಿರ್ಮಿಸಿದ್ದು ಮನೆಗಳಿಗೆಕನ್ನಡಪ್ರಭ ವಾರ್ತೆ, ಕಡೂರು
ಪಟ್ಟಣದ ಪುರಸಭೆ ವ್ಯಾಪ್ತಿಯ 20ನೇ ವಾರ್ಡ್‍ನಲ್ಲಿ ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಗಳು ನಿರ್ಮಿಸಿರುವ ಅಕ್ರಮ ಕಾಂಪೌಂಡನ್ನು ತೆರವುಗೊಳಿಸುವಂತೆ ಕೆ.ಹೊಸಹಳ್ಳಿ ಗ್ರಾಮಸ್ಥರು ಪುರಸಭೆ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಕೆ.ಹೊಸಹಳ್ಳಿ ರವಿಕುಮಾರ್ ಮಾತನಾಡಿ, ಕಳೆದ 40 ವರ್ಷಗಳಿಂದ ಓಡಾಡುತ್ತಿದ್ದ ರಸ್ತೆಗೆ ಭಾನುವಾರ ಏಕಾಏಕಿ ಕಾಂಪೌಂಡ್ ನಿರ್ಮಿಸಿದ್ದು ಮನೆಗಳಿಗೆ ತೆರಳಲು ದಾರಿ ಇಲ್ಲವಾಗಿದೆ. ಸಾರ್ವಜನಿಕರು ಬಳಸುತ್ತಿದ್ದ ಈ ರಸ್ತೆಗೆ ಮಹಿಳೆಯೊಬ್ಬರು ಕಾಂಪೌಂಡ್ ನಿರ್ಮಾಣ ಮಾಡಿದ ಕಾರಣ ಆ ಭಾಗದ ಮನೆಗಳಿಗೆ ಓಡಾಡಲು ತೊಂದರೆಯಾಗಿದೆ ಕೂಡಲೇ ಇದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್ ಪ್ರತಿಕ್ರಿಯೆ ನೀಡಿ ಈ ರಸ್ತೆ, ನಿವೇಶನದ ಕುರಿತು ಈ ಹಿಂದೆಯೂ ತಕರಾರಿದ್ದು, ವಾಸ್ತವದಲ್ಲಿ ಈ ರಸ್ತೆಯ ಜಾಗ ಮಂಗಳ ಅವರದ್ದಲ್ಲ ಪುರಸಭೆ ಜಾಗ. ಸ್ಥಳ ಪರಿಶೀಲನೆ ಮಾಡಿ ದಾಖಲೆ ಪರಿಶೀಲಿಸಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಹಿಂದಿನ ಮುಖ್ಯಾಧಿಕಾರಿ ಈಸ್ವತ್ತು ನೀಡಿದ್ದಾರೆ. ಅವರ ದಾಖಲೆ ಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ ರಸ್ತೆ ತೆರವು ಮಾಡಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪ್ರಸ್ತುತ ಪುರಸಭೆಯಲ್ಲಿ ಆಡಳಿತ ಮಂಡಳಿಯಿಲ್ಲ. ಹಾಗಾಗಿ ಪುರಸಭಾ ಸದಸ್ಯರು ಯಾವ ನಿರ್ಧಾರ ತೆಗೆದುಕೊಳ್ಳಲೂ ಆಗುತ್ತಿಲ್ಲ. ಸದ್ಯ ಪುರಸಭೆ ಆಡಳಿತಾಧಿಕಾರಿ ಆದ ಉಪ ವಿಭಾಗಾಧಿಕಾರಿ ಈ ಪ್ರಕರಣ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಈ ಬಗ್ಗೆ ನಾವು ಕೂಡ ಶಾಸಕ ಕೆ.ಎಸ್. ಆನಂದ್ ಬಳಿ ಮಾತನಾಡುತ್ತೇವೆ. ಒಟ್ಟಾರೆ ಜನರಿಗೆ ತೊಂದರೆ ಆಗಬಾರದೆಂಬುದು ನಮ್ಮ ಆಶಯ.3 ದಿನ ಕಾಲಾವಕಾಶ ನೀಡಿ ಎಂದರು.ವಾರ್ಡ್ ಸದಸ್ಯ ಗೋವಿಂದರಾಜ್, ಅನೇಕ ವರ್ಷಗಳಿಂದ ಸಾರ್ವಜನಿಕರು ಬಳಸುತ್ತಿದ್ದ ಈ ರಸ್ತೆಯನ್ನು ಅತಿಕ್ರಮಿಸಿ ರುವುದರಿಂದ ಓಡಾಟಕ್ಕೆ ತೊಂದರೆಯಾಗಿದೆ. ಈ ಸಮಸ್ಯೆ ಬಗೆಹರಿಸಲು ಮುಖ್ಯಾಧಿಕಾರಿ ಕ್ರಮ ಕೈಗೊಳ್ಳಬೇಕು ಜೊತೆಗೆ ಉಪವಿಭಾಗಾಧಿಕಾರಿಗಳು ಮುಂದಾಗಬೇಕು ಎಂದರು.
ಕೆ.ಹೊಸಹಳ್ಳಿ ಗ್ರಾಮಸ್ಥರಾದ ರವಿಕುಮಾರ್, ಯತೀಶ್, ಮಂಜಪ್ಪ, ಚಂದ್ರಪ್ಪ, ಹಾಲಪ್ಪ, ಮಹೇಶ್ವರಮ್ಮ, ಸಾವಿತ್ರಮ್ಮ, ದ್ರಾಕ್ಷಾಯಣಮ್ಮ, ಲತಾ, ಕಾಂತಮ್ಮ, ಭಾಗ್ಯ, ಪುರಸಭೆ ಸದಸ್ಯರಾದ ಯಾಸೀನ್, ಮೋಹನ್‍ಕುಮಾರ್, ಮರುಗುದ್ದಿ ಮನು ಮತ್ತು ಶಂಕರ್, ಚಿನ್ನರಾಜ್, ಕಾಂತರಾಜ್, ಮಂಜುನಾಥ್ ಮತ್ತಿತರರು ಇದ್ದರು. -- ಬಾಕ್ಸ್ --ಪುರಸಭೆ ಮುಖ್ಯಾಧಿಕಾರಿಗೆ ಮನವಿಕೆ.ಹೊಸಹಳ್ಳಿ ಗ್ರಾಮಸ್ಥರ ಪ್ರತಿಭಟನೆಗೆ ಪ್ರತಿಯಾಗಿ ವಿವಾದಿತ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿದ್ದಾರೆ ಎನ್ನಲಾದ ಮಂಗಳ ಮಾತನಾಡಿ, ಅಲ್ಲಿರುವ ಮನೆ ನಮ್ಮ ಪಿತ್ರಾರ್ಜಿತ ಆಸ್ತಿ. ಆಗ ಚಿಕ್ಕಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆ ದಾಖಲೆಗಳಲ್ಲೂ ಜಾಗ ನಮ್ಮ ಹೆಸರಲ್ಲಿಯೇ ಇದೆ. ಇದೇ ಜಾಗಕ್ಕೆ ಪ್ರಸಕ್ತ ವರ್ಷ ಪುರಸಭೆ ನೀಡಿರುವ ಇ-ಸ್ವತ್ತು ಸಹ ಇದೆ ಎಂದ ಅವರು ಕೆಲವರು ಈ ಜಾಗವನ್ನು ಕಬಳಿಸಲು ನಮಗೆ ಉದ್ದೇಶ ಪೂರ್ವಕವಾಗಿ ತೊಂದರೆಕೊಡುತ್ತಿದ್ದಾರೆ.
ಈ ಜಾಗದಲ್ಲಿ ಯಾವುದೇ ರಸ್ತೆಯಿಲ್ಲ. ಕೇವಲ ಅನುಮತಿ ಮೇರೆಗೆ ಜನರು ಓಡಾಡುತ್ತಿದ್ದರು. ಇವೆಲ್ಲ ತಿಳಿದಿದ್ದರೂ ಕೆಲವರು ದೌರ್ಜನ್ಯ ಮಾಡುತ್ತಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಹಲ್ಲೆ ಕೂಡ ಮಾಡಿದ್ದಾರೆ. ಪುರಸಭೆಯವರು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ನ್ಯಾಯಾಲಯದ ಆದೇಶಕ್ಕೆ ನಾವು ಬದ್ದರಾಗಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಗೆ ಮನವಿ ಸಲ್ಲಿಸಿದರು.ವಿವಾದಿತ ರಸ್ತೆ ಜಾಗ ನಿಮ್ಮ ಹೆಸರಿನಲ್ಲಿದೆಯೇ ಎಂಬ ಪ್ರಶ್ನೆಗೆ ಮಂಗಳ ಇಸ್ವತ್ತು ನೀಡಿದ್ದಾರೆ. ಪ್ರಕರಣ ನ್ಯಾಯಾಲಯ ದಲ್ಲಿದೆ ಎಂದು ಉತ್ತರಿಸಿದರು. 18ಕೆಕೆಡಿಯು2.
ಕಡೂರು ಕೆ.ಹೊಸಹಳ್ಳಿ ಗ್ರಾಮಸ್ಥರು ಮನೆಗಳಿಗೆ ತೆರಳುವ ರಸ್ತೆಗೆ ಹಾಕಿರುವ ಕಾಂಪೋಂಡ ತೆರವುಗೊಳಿಸಲು ಪ್ರತಿಭಟನೆ ನಡೆಸಿದರು.17ಕೆಕೆಡಿಯು2ಎ.ಕೆ.
ಹೊಸಹಳ್ಳಿ ವಿವಾದಿತ ರಸ್ತೆಗೆ ಕಾಂಪೌಂಡ್ ನಿರ್ಮಾಣ ಮಾಡಿರುವ ಮಹಿಳೆ ನ್ಯಾಯ ಕೊಡಿಸಿ ಎಂದು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.