ಶ್ರೀಗಳ ಪುತ್ಥಳಿ ವಿರೂಪಗೊಳಿಸಿದವನನ್ನು ಗಡಿಪಾರು ಮಾಡಿ

KannadaprabhaNewsNetwork |  
Published : Dec 17, 2024, 12:45 AM IST
58 | Kannada Prabha

ಸಾರಾಂಶ

ಸಿದ್ದಗಂಗಾಶ್ರೀಗಳಿಗೆ ಅಪಮಾನ ಮಾಡಿದ ಕಟುಕರಿಗೆ ಸರ್ಕಾರ ಯಾವುದೇ ಮೀನಾ ಮೇಷ ಎಣಿಸದೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಕಾನೂನು ರೂಪಿಸಿ,

ಕನ್ನಡಪ್ರಭ ವಾರ್ತೆ ಸರಗೂರುಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವಿವಿಧ ಸಂಘಟನೆಗಳ ಜೊತೆ ಗೂಡಿ ಬೃಹತ್ ಪ್ರತಿಭಟನೆ ನಡೆಯಿತು.ಬೆಂಗಳೂರಿನ ಗಿರಿನಗರದಲ್ಲಿ ತ್ರಿವಿಧ ದಾಸೋಹಿ ಸಿದ್ದಗಂಗಾಶ್ರೀಗಳ ಪುತ್ಥಳಿ ವಿರೂಪಗೊಳಿಸಿದ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪಟ್ಟಣದ ಜೆಎಸ್ಎಸ್ ಶ್ರೀ ಶಿವರಾತ್ರೀಶ್ವರ ಶಿವಾನುಭವ ಮಂಟಪದಲ್ಲಿ ತಾಲೂಕಿನ ಸಮಾಜದ ಬಾಂಧವರು ಹಾಗೂ ಇನ್ನಿತರರು ವಿವಿಧ ಘೋಷಣೆ ಕೂಗುವ ಮೂಲಕ ಪ್ರತಿಮೆ ವಿರೂಪಗೊಳಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಸರ್ಕಾರ ಕೂಡಲೇ ವ್ಯಕ್ತಿಯನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಪಡುವಲು ವಿರಕ್ತಮಠದ ಶ್ರೀ ಮಹದೇವ ಸ್ವಾಮೀಜಿ ಮಾತನಾಡಿ, ಸಿದ್ದಗಂಗಾಶ್ರೀಗಳಿಗೆ ಅಪಮಾನ ಮಾಡಿದ ಕಟುಕರಿಗೆ ಸರ್ಕಾರ ಯಾವುದೇ ಮೀನಾ ಮೇಷ ಎಣಿಸದೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಕಾನೂನು ರೂಪಿಸಿ, ಯಾವುದೇ ಕಾರಣಕ್ಕೂ ನ್ಯಾಯಾಲಯದಿಂದ ತಪ್ಪಿಸಿಕೊಳ್ಳಲು ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಆ ಮೂಲಕ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು. ದಡದಹಳ್ಳಿ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರು ಲಕ್ಷಾಂತರ ಮಂದಿಗೆ ಅನ್ನ, ಅಕ್ಷರ, ಜ್ಞಾನ ನೀಡುವ ಮೂಲಕ ನಡೆದಾಡುವ ದೇವರಾಗಿದ್ದರು. ಅಂಥ ಮಹಾನ್ ವ್ಯಕ್ತಿಯ ಪ್ರತಿಮೆಗೆ ಅಪಮಾನ ಮಾಡಿರುವುದು ಖಂಡನೀಯ. ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.ಹಂಚೀಪುರ ಮಠದ ಕಿರಿಯ ಸ್ವಾಮೀಜಿ ಶ್ರೀ ತೋಂಟದಾರ್ಯಸ್ವಾಮೀಜಿ ಮಾತನಾಡಿದರು. ಗ್ರೇಡ್-೨ ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಕೆ.ಎಸ್. ವೀರಭದ್ರಪ್ಪ, ಪದಾಧಿಕಾರಿಗಳಾದ ಸಿ.ಕೆ. ಗಿರೀಶ್, ಗಿರಿಕುಮಾರ್, ಗುರುಸ್ವಾಮಿ, ಡಿ.ಜಿ. ಶಿವರಾಜು, ಅಣ್ಣಯ್ಯಸ್ವಾಮಿ, ಗುರುಸ್ವಾಮಿ, ಬಸವ ಬಳಗ ಗಣಪತಿ, ನಂದೀಶ್, ಎಚ್.ಸಿ. ಮಹದೇವಸ್ವಾಮಿ, ಡಿ.ಪಿ. ನಟರಾಜು, ಸಿದ್ದಪ್ಪ, ಮಾದಪ್ಪ, ಬಸವರಾಜು, ಸುಧಾ ಮೃತ್ಯುಂಜಯಪ್ಪ, ಮಂಜುನಾಥ್, ಶಿವಕುಮಾರ್, ಸಿದ್ದಪ್ಪ, ವಿರೂಪಾಕ್ಷ, ಮಹದೇವಪ್ಪ, ರಾಜಣ್ಣ, ನಾಗರಾಜು, ಮಹೇಶ್, ನಂಜಪ್ಪ, ಬಸವಣ್ಣ, ನಿಂಗರಾಜು, ಶ್ರೀಕಂಠ, ಸತೀಶ್, ಮೋಹನ್ ಕುಮಾರ್, ಸಿದ್ದಪ್ಪ, ಪ್ರಕಾಶ್, ಕೆ.ಪಿ ಮಹದೇವಪ್ಪ, ಮುಳ್ಳೂರು ನಾಗರಾಜು, ನಾಗೇಂದ್ರ, ಸೇರಿದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಬಸವ ಬಳಗದ ಪದಾಧಿಕಾರಿಗಳು, ಯುವ ಸಮಿತಿ ಪದಾಧಿಕಾರಿಗಳು, ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಭಕ್ತ ವೃಂದದವರು ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ