ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಆಗಲಿ ಎನ್ನುವವರ ಸಂಖ್ಯೆ ಶೇ.73ರಷ್ಟಿದ್ದರೆ, ಬೇಡ ಎನ್ನುವವರ ಸಂಖ್ಯೆ ಕೇವಲ 23 ರಷ್ಟು ಮಾತ್ರ. ಸ್ವಯಂ ಪ್ರೇರಣೆಯಿಂದ ಕೈಗಾರಿಕೆಗೆ ಭೂಮಿ ಕೊಡಲು ಮುಂದೆ ಬಂದಿರುವ, ಬರುವ ರೈತರಿಗೆ ಬೆದರಿಕೆ ಹಾಕುವುದು, ಸರ್ವೇಗೆ ಬರುವ ಅಧಿಕಾರಿಗಳ ಮೇಲೆ ತನ್ನ ಬಳಿಯಿರುವ ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಿಸುವುದು ಇವರ ಕೆಲಸವಾಗಿದೆ ಎಂದು ಅವರು ದೂರಿದರು.
ನಡಿಪಿನಾಯಕನಹಳ್ಳಿ ಗ್ರಾಮದ ರೈತ ಚೆನ್ನಕೃಷ್ಣಪ್ಪ 2024ರಲ್ಲಿ ತಾನು ಖರೀದಿಸಿರುವ ಭೂಮಿಯ ಅಳತೆ ಮಾಡಿಸಲು ಸರ್ವೇಯರ್‌ಗಳನ್ನು ಕರೆದುಕೊಂಡು ಹೋಗಿದ್ದಾಗ ಕೆಐಎಡಿಬಿಗೆ ಭೂಮಿ ಕೊಡಲು ಮುಂದಾಗಿದ್ದಾರೆ ಎಂದು ತಿಳಿದು ಬೈರೇಗೌಡರ ಕಡೆಯವರಾದ ಅಜಿತ್ ಕುಮಾರ್, ದೇವರಾಜ್, ಭರತ್ ತಂಡ ಹಲ್ಲೆ ಮಾಡಿದೆ. ಈ ಸಂದರ್ಭದಲ್ಲಿ ಚೆನ್ನಕೃಷ್ಣಪ್ಪ ಜಾತಿ ನಿಂದನೆ ದೂರು ಕೊಟ್ಟರೆ ಪೊಲೀಸರು ದೂರು ದಾಖಸಿಲ್ಲ. ಪೊಲೀಸರ ಎದುರೇ ಪೆಟ್ರೋಲ್ ಹಾಕಿ ಸುಡುವ ಬೆದರಿಕೆ ಹಾಕಿದ್ದಾರೆ. ಆಗ ಸಬ್ ಇನ್‌ಸ್ಪೆಕ್ಟರ್ ನಾಗರಾಜ್ ಸುಟ್ಟು ಹಾಕು ಎಫ್‌ಐಆರ್ ಮಾಡುತ್ತೇನೆ ಎನ್ನುತ್ತಾರೆ. ಹೀಗಾಗಿ ಬೈರೇಗೌಡ ನಿರಂತರವಾಗಿ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಪೊಲೀಸ್ ಕ್ರಮ ಆಗಿಲ್ಲ. ರೈತ ಸಂಘದ ಮುಖಂಡರು ರೈತರ ಕೆಲಸ ಮಾಡಬೇಕೇ ವಿನಃ ರೌಡಿ ವರ್ತನೆ ತೋರುವುದಲ್ಲ. ಇದೇನಾ ರೈತರ ಹೋರಾಟ ಎಂದು ಪ್ರಶ್ನಿಸಿದರು.ಶಿಡ್ಲಘಟ್ಟ ತಾಲೂಕು ಕಚೇರಿ ಎದುರು ಕೆಐಎಡಿಬಿ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ಬಹಿರಂಗವಾಗಿ ಕೆಐಎಡಿಬಿಗೆ ಭೂಮಿ ಕೊಡುವ ರೈತರನ್ನು ಹೆದರಿಸಿ, ನೀವು ಭೂಮಿ ಕೊಟ್ಟರೆ ನಾವು ನಕ್ಸಲೈಟ್ ಆಗಬೇಕಾಗುತ್ತದೆ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಇದಕ್ಕೆ ಇಡೀ ತಾಲೂಕು ಕಚೇರಿ ಸಾಕ್ಷಿಯಿದೆ. ರೈತರನ್ನು ರೈತರ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಬೈರೇಗೌಡ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇವರನ್ನು ರೌಡಿಶೀಟರ್ ಮಾಡಬೇಕು ಎಂದು ಒತ್ತಾಯಿಸಿದರು.
ಏ.29 ರಂದು ಜಿಲ್ಲಾಡಳಿತ ಭವನದ ಎದುರು ನಡೆದ ಹೈಡ್ರಾಮಕ್ಕೆ ನೇರ ಕಾರಣ ಇದೇ ಭೈರೇಗೌಡರ ಚೇಲಾಗಳಾದ ಭರತ್, ಅಜಿತ್, ದೇವರಾಜ್ ಆಗಿದ್ದಾರೆ. ಕಾನೂನು ಪಾಲನೆಗೆ ನಿಂತಿದ್ದ ಪೊಲೀಸ್ ಅಧಿಕಾರಿಯ ಕೊರಳಪಟ್ಟಿ ಹಿಡಿದು ಎಳೆದಾಡಿದ್ದೇ ಘಟನೆಗೆ ಮೂಲ ಕಾರಣವಾಗಿದೆ. ಬ್ಯಾರಿಕೇಡ್‌ಗಳನ್ನು ಎಸೆದಿದ್ದು ಕೂಡ ಇದೇ ರೈತರೇ ಆಗಿದ್ದಾರೆ. ಆದರೆ ಮಾಧ್ಯಮಗಳಿಗೆ ಪೊಲೀಸರು ಹೊಡೆದಂತೆ ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆಗೆ ಭಂಗ ತಂದಿರುವ, ರೈತರಿಗೆ ಬೆದರಿಕೆ ಹಾಕುವ ರೈತಸಂಘದ ಭೈರೇಗೌಡ ಮತ್ತು ಸಹಚರರ ಮೇಲೆ ರೌಡಿಶೀಟರ್ ಖಾತೆ ತೆರೆಯಬೇಕು ಎಂದು ಆಗ್ರಹಿಸಿದರು.
ಸಿಕೆಬಿ-2... ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ರಾಮಾಂಜಿನಪ್ಪ ಮಾತನಾಡಿದರು.