ಕನ್ನಡಪ್ರಭ ವಾರ್ತೆ ಬಿಳಗಿ
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಘಟಪ್ರಭಾ ಸೇತುವೆ ಹಾಗೂ ಪ್ರಸ್ತುತ ಸೋನ್ನ ಗ್ರಾಮದಿಂದ ಏತನೀರಾವರಿ ಯೋಜನೆ ಮಂಜೂರಾತಿ ಮಾಡುವಲ್ಲಿ ಶ್ರಮಿಸಿದ್ದಾರೆ. ಮತಕ್ಷೇತ್ರದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಎಸ್ಸಿ, ಎಸ್ಟಿ ಸಮುದಾಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ತಾಂಡಾ ನಿಗಮ, ಆದಿಜಾಂಬವ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಡಾ.ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ ಕೈಗೊಂಡಿದ್ದಾರೆ.
ಈ ಬಾರಿ ಸಂಪುಟದಲ್ಲಿ ಶಾಸಕ ಜೆ.ಟಿ.ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಹೆಜ್, ಮಹಾಂತೇಶ, ಎನ್.ಶಂಕರ್, ಬಿ.ಎಚ್.ಸುರೇಶ್, ಭುವನೇಶ, ಎಚ್.ಎನ್.ನೀಲನಾಯಕ, ಬಿ.ಎಲ್.ಭಜಂತ್ರಿ, ಯಂಕಣ್ಣ ನಡುವಿನಮನಿ, ಆನಂದ ದೊಡಮನಿ, ದ್ಯಾಮಣ್ಣ ದೊಡಮನಿ, ನಾಗೇಶ ಚಲವಾದಿ, ಜಿತೇಂದ್ರ ಚಲವಾದಿ, ಚಂದ್ರು ಚಲವಾದಿ, ರಾಮಣ್ಣ ಹಿರೇಮನಿ ಮುಂತಾದವರು ರಾಜ್ಯ ಹಾಗೂ ಹೈ ಕಮಾಂಡ್ ನಾಯಕರಿಗೆ ರಾಜ್ಯ ಸಮಿತಿಯಿಂದ ಮನವಿ ಮಾಡಿದ್ದಾರೆ.