ಅನ್ಯ ಜಿಲ್ಲೆಯವರ ವಿವಾಹ ನೋಂದಣಿ ಪೊಲೀಸರ ಗಮನಕ್ಕೆ ತರಲು ಆಗ್ರಹ

KannadaprabhaNewsNetwork |  
Published : Jul 17, 2025, 12:30 AM IST
ರಾಣಿಬೆನ್ನೂರಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ನೇತೃತ್ವದಲ್ಲಿ ಸಾರ್ವಜನಿಕರು ಉಪನೋಂದಣಾಧಿಕಾರಿ ವಿಶ್ವನಾಥ ಸುಭೇದಾರ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬೇರೆ ಜಿಲ್ಲೆಗಳು ಮತ್ತು ಬೇರೆ ತಾಲೂಕಿನಿಂದ ವಿವಾಹ ನೋಂದಣಿಗೆ ಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮತ್ತು ಅದಕ್ಕೆ ಸಂಬಂಧಪಟ್ಟ ತಾಲೂಕಿನ ಮುಖಂಡರ ಗಮನಕ್ಕೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ರಾಣಿಬೆನ್ನೂರು: ನಗರದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಬೇರೆ ಜಿಲ್ಲೆ ಮತ್ತು ತಾಲೂಕುಗಳ ಬರುವ ವಿವಾಹ ನೋಂದಣಿಯನ್ನು ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು ಎಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ನೇತೃತ್ವದಲ್ಲಿ ಸಾರ್ವಜನಿಕರು ಉಪ ನೋಂದಣಾಧಿಕಾರಿ ವಿಶ್ವನಾಥ ಸುಭೇದಾರ ಅವರಿಗೆ ಮನವಿ ಸಲ್ಲಿಸಿದರು. ಪ್ರೀತಿ, ಪ್ರೇಮದ ಹೆಸರಲ್ಲಿ ಹೆಣ್ಣುಮಕ್ಕಳು ಮೋಸ ಹೋಗುತ್ತಿದ್ದಾರೆ. ಇದರಿಂದ 18 ವರ್ಷ ಹೊತ್ತು ಹೆತ್ತು ಬೆಳೆಸಿದ ಕುಟುಂಬಗಳಿಗೆ ಮೋಸ ಮಾಡಿ ಪ್ರೀತಿ ವ್ಯಾಮೋಹದ ಬಲೆ ಹಾಕಿ ಒಂದು ವರ್ಷ ಕೂಡ ಬಾಳುವೆ ಮಾಡದೆ ಎಷ್ಟೋ ಪ್ರಕರಣಗಳು ಬಿಡುಗಡೆಯಾಗುತ್ತಿವೆ. ಇದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಇದನ್ನು ತಡೆಗಟ್ಟಬೇಕಾದರೆ ನಾವು ಒಳ್ಳೆಯದು ಕೆಟ್ಟದ್ದು ವಿಚಾರ ಮಾಡಬೇಕು. ಕಾನೂನು ಇದೆ ಎಂದು ದುರುಪಯೋಗ ಮಾಡಿಕೊಳ್ಳಬಾರದು.

ಆದ್ದರಿಂದ ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಗಳು ಮತ್ತು ಬೇರೆ ತಾಲೂಕಿನಿಂದ ವಿವಾಹ ನೋಂದಣಿಗೆ ಬಂದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮತ್ತು ಅದಕ್ಕೆ ಸಂಬಂಧಪಟ್ಟ ತಾಲೂಕಿನ ಮುಖಂಡರ ಗಮನಕ್ಕೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ತಾಲೂಕು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಮಂಜಪ್ಪ ಗಂಗಾಪುರ, ಬಸಪ್ಪ ಕಡೂರ, ನಾಗರಾಜ ಪೂಜಾರ, ರಮೇಶ ಪೂಜಾರ, ಕೊಟ್ರೇಶ ಸಣ್ಣಕೊಟ್ರಪ್ಪನವರ, ಪರಸಪ್ಪ ಮಣಜ್ಜೇರ, ಅಣ್ಣಪ್ಪ ಉಜ್ಜೇರ, ದುರ್ಗಪ್ಪ ಉಜ್ಜೇರ, ಹೊನ್ನಪ್ಪ ಮೀಸೇರ, ಶಿವರಾಜ ಅಣ್ಣೇರ, ಪ್ರಭುದೇವ ಉಜ್ಜೇರ, ಪರಮೇಶ ಪೂಜಾರ, ಗಾಳೆಪ್ಪ ಕಲ್ಲೇಜ್ಜರ ಮತ್ತಿತರರಿದ್ದರು.ಇಂದಿನಿಂದ ಹಲಸು, ಮಾವು ಮೇಳ

ರಾಣಿಬೆನ್ನೂರು: ಕೃಷಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಜು. 17ರಿಂದ 21ರ ವರೆಗೆ ಹಲಸು ಮತ್ತು ಮಾವು ಮೇಳ ಆಯೋಜಿಸಲಾಗಿದೆ ಎಂದು ಆಯೋಜಕ ನವೀನ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದು ದಿನಗಳ ಕಾಲ ನಡೆಯುವ ಮೇಳದಲ್ಲಿ ರೈತರು ತಾವು ಬೆಳೆದ ಉತ್ಪನ್ನಗಳನ್ನು ಹಾಗೂ ಮಾವು ಮತ್ತು ಹಲಸಿನ ಸಸಿಗಳ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಹಲಸಿನ ಹಣ್ಣಿನಿಂದ ತಯಾರಿಸಿದ ಜಿಲೇಬಿ ಗ್ರಾಹಕರ ಮನ ಸೆಳೆಯಲಿದೆ.ಇದಲ್ಲದೆ ಸಿರಿ ಧಾನ್ಯಗಳು, ರಾಗಿ ಉತ್ಪನ್ನಗಳು, ಆಯುರ್ವೇದ ಔಷಧಿಗಳು, ಚನ್ನಪಟ್ಟಣದ ಗೊಂಬೆಗಳು ಸೇರಿದಂತೆ ಹಲವಾರು ಉತ್ಪನ್ನಗಳು ಮೇಳದಲ್ಲಿ ದೊರೆಯಲಿವೆ ಎಂದರು. ವೆಂಕಟೇಶ ಕನಕೇರಿ, ಹರೀಶ ಸುದ್ದಿಗೋಷ್ಠಿಯಲ್ಲಿದ್ದರು.

PREV

Latest Stories

ಧರ್ಮಸ್ಥಳ ಗ್ರಾಮ ಕೇಸ್‌: ಇಬ್ಬರು ಐಪಿಎಸ್‌ಗಳು ಎಸ್‌ಐಟಿಯಿಂದ ಔಟ್‌?
ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ