ಕನ್ನಡಪ್ರಭ ವಾರ್ತೆ ಕೋಲಾರಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಪ್ಯಾಕೇಜ್ ಕಾಮಗಾರಿಗಳಿಂದ ಆಗುತ್ತಿರುವ ಅನ್ಯಾಯ ಹಾಗೂ ಗುತ್ತಿಗೆ ಮೀಸಲಾತಿ ಆದೇಶ ಹರಿದುಹಾಕಿ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘವು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.ನಗರದ ಅಂಬೇಡ್ಕರ್ ವೃತ್ತದಿಂದ ಬೈಕ್ ರ್‍ಯಾಲಿ ಪ್ರಾರಂಭವಾಗಿ ಕ್ಲಾಕ್ ಟವರ್, ಹೊಸ ಬಸ್ ನಿಲ್ದಾಣ ಮೆಕ್ಕೆ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿದರು.
ಸಣ್ಣ ಗುತ್ತಿಗೆದಾರರಿಗೆ ಅನ್ಯಾಯಘಟನೆಯ ಜಿಲ್ಲಾ ಅಧ್ಯಕ್ಷ ಮಾರ್ಜೆನಹಳ್ಳಿ ಬಾಬು ಮಾತನಾಡಿ, ಜಿಲ್ಲೆಯಲ್ಲಿ ೫ ರಿಂದ ೬ ಕಾಮಗಾರಿಗಳನ್ನು ಒಂದು ಪ್ಯಾಕೇಜ್ ರೀತಿಯಲ್ಲಿ ಕಾಮಗಾರಿಗೆ ಟೆಂಡರ್ ಕರೆದಿದ್ದಾರೆ. ಇದರಿಂದ ಮೀಸಲು ಗುತ್ತಿಗೆದಾರರು ಕಾಮಗಾರಿ ಗುತ್ತಿಗೆ ಪಡೆಯಲು ಸಾಧ್ಯವಿಲ್ಲ. ಬೇರೆ ಜಿಲ್ಲೆಗಳ ಪ್ರಭಾವಿಗಳಿಗೆ ಟೆಂಡರ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ದಲಿತ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಿಂದೆ ಸಿದ್ದರಾಮಯ್ಯ ಸುಮಾರು ಒಂದು ಕೋಟಿವರೆಗೂ ಮೀಸಲಾತಿ ಆಧಾರದಲ್ಲಿ ಗುತ್ತಿಗೆ ನೀಡಿದ್ದರು. ಈಗ ಅಧಿಕಾರಿ ವರ್ಗ ಗುತ್ತಿಗೆ ಪ್ಯಾಕೇಜ್ ಮಾಡಿ ಪರಿಶಿಷ್ಟರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.ಪ್ಯಾಕೇಜ್ ಗುತ್ತಿಗೆ ರದ್ದು ಮಾಡಿದಲಿತರ ಅಭಿವೃದ್ಧಿಗೆ ಅವಕಾಶಗಳಿಗಾಗಿ ಸರ್ಕಾರವೇ ಸಾಮಾಜಿಕ ನ್ಯಾಯದಡಿ ಗುತ್ತಿಗೆದಾರರಿಗೆ ಮೀಸಲಾತಿ ನೀಡಿದೆ. ಆದರೆ ಅಧಿಕಾರಿಗಳು ನಮಗೆ ವಂಚಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಪಾಲಿಗೆ ಮರಣ ಶಾಸನವಾಗಿದೆ. ಸರ್ಕಾರ ಕೊಟ್ಟಿರುವ ಪರವಾನಿಗೆ ವಾಪಸ್ ನೀಡಿದ್ದು ಮೀಸಲಾತಿಯ ಪ್ರತಿಯನ್ನು ಹರಿದು ಹಾಕಲಾಗಿದೆ. ಕೂಡಲೇ ಪ್ಯಾಕೇಜ್ ಕಾಮಗಾರಿ ರದ್ದು ಮಾಡಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರುಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ಉಪಾಧ್ಯಕ್ಷ ವೆಂಕಟರೆಡ್ಡಿ, ಹಿಂದುಳಿದ ವರ್ಗದ ಜಯರಾಮ್, ತಾಲೂಕು ಅಧ್ಯಕ್ಷರಾದ ಮೋಹನ್ ಕಾಂತ್, ರಾಮಪ್ಪ, ಗಣೇಶ್, ಗೋವಿಂದರಾಜು, ಅಮರೇಶ್, ಕೃಷ್ಣಪ್ಪ, ಮುಖಂಡರಾದ ಅಂಬರೀಷ್, ಪ್ರಕಾಶ್, ನರಸಿಂಹ ಮೂರ್ತಿ ಇದ್ದರು.