ರಾಮನಗರ: ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಂತಹ ಪೊಲೀಸ್ ಟೋಪಿ ಮತ್ತು ಕಾನೂನುಗಳು ಬದಲಾಗಬೇಕು ಎಂದು ಒತ್ತಾಯಿಸಿ ಪೊಲೀಸ್ ಟೋಪಿ ಧರಿಸಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಂತಹ ಪೊಲೀಸ್ ಟೋಪಿ ಮತ್ತು ಕಾನೂನುಗಳು ಈಗಲೂ ಮುಂದುವರೆಯುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವುಗಳ ಬದಲಾವಣೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆದಿಲ್ಲ. ಪೊಲೀಸ್ ಟೋಪಿಯನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಶಕ್ತಿ ಇಲ್ಲ ಎಂದು ಟೀಕಿಸಿದರು.
ಈ ಹಿಂದೆ 1969ರಲ್ಲಿ ನಮ್ಮ ಪೊಲೀಸರಿಗೆ ಚಡ್ಡಿ ಇತ್ತು. ಆಗ ನಾನು ವಿಧಾನಸಭೆ ಸದಸ್ಯನಾಗಿದ್ದೆ. ಮದರಾಸಿನಲ್ಲಿ ಪೊಲೀಸರಿಗಿದ್ದ ಪ್ಯಾಂಟ್ ಮಾದರಿಯನ್ನು ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಮೇಲೆ ಒತ್ತಡ ಹೇರಿ ಜಾರಿಗೆ ತಂದೆವು. ಆಗಿನಿಂದ ಕರ್ನಾಟಕ ಪೊಲೀಸರಿಗೆ ಪ್ಯಾಂಟ್ ವ್ಯವಸ್ಥೆ ಜಾರಿಗೆ ಬಂದಿತು.ಈಗ ಪೊಲೀಸರು ಧರಿಸುತ್ತಿರುವ ಟೋಪಿ ಹೆಲ್ಮೆಟ್ ನಷ್ಟೇ ತೂಕವಿದೆ. ಇದರಿಂದ ಮೆದುಳಿಗೆ ಅಪಾಯವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ತೀರ್ಮಾನ ಮಾಡಿ ಟೋಪಿ ಬದಲಾವಣೆ ಮಾಡಬೇಕು.ಈಗ ರಾಜ್ಯ ಸರ್ಕಾರ ತೆಲಂಗಾಣ ಮಾದರಿ ಟೋಪಿ ತರಲು ಹೊರಟಿದೆ. ಕರ್ನಾಟಕಕ್ಕೆ ಇನ್ನೊಂದು ರಾಜ್ಯದ ಮಾದರಿ ಬೇಡ. ತೂಕ ಕಡಿಮೆ ಇರುವ ಕರ್ನಾಟಕ ರಾಜ್ಯದ ಪ್ರತ್ಯೇಕ ಟೋಪಿ ತಯಾರಾಗಲಿ ಎಂದು ಒತ್ತಾಯಿಸಿದರು.
ರಾಜ್ಯಪಾಲರಿಗೆ ಕರ್ನಾಟಕದ ಬಗ್ಗೆ ಗೌರವ ಇದ್ದರೆ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಕನ್ನಡದಲ್ಲಿಯೇ ಭಾಷಣ ಮಾಡಲಿ. ಕಳೆದ ಮೂರು ವರ್ಷಗಳಿಂದಲೂ ರಾಜ್ಯಪಾಲರು ಹಿಂದಿಯಲ್ಲಿಯೇ ಮಾತನಾಡುತ್ತಿದ್ದಾರೆ. ಈ ಬಾರಿ ನಾಲ್ಕು ಸಾಲುಗಳಾದರು ಸರಿಯೇ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಕೋಟ್ ...................
ಮಹಾರಾಷ್ಟ್ರದಲ್ಲಿ ತ್ರಿಭಾಷಾ ಸೂತ್ರಕ್ಕೆ ಕೊಕ್ ಕೊಟ್ಟು ದ್ವಿಭಾಷಾ (ಮರಾಠಿ ಮತ್ತು ಇಂಗ್ಲೀಷ್) ಸೂತ್ರ ಅನುಸರಿಸುತ್ತಿದ್ದು, ಹಿಂದಿ ಭಾಷೆಯನ್ನು ತಿರಸ್ಕರಿಸಿದ್ದಾರೆ. ಆದರೆ, ನಮ್ಮಲ್ಲಿ ಇನ್ನೂ ರಾಗ ಹಾಡುತ್ತಿದ್ದೇವೆ. ಕರ್ನಾಟಕ ಸರ್ಕಾರ ಕೂಡಲೇ ದ್ವಿಭಾಷಾ ಸೂತ್ರ ಜಾರಿಗೆ ತರಬೇಕು. ಹಿಂದಿ ಹೇರಿಕೆ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿ ಬಳಿ ತಮಟೆ ಚಳವಳಿ ಮಾಡುತ್ತೇವೆ.
1ಕೆಆರ್ ಎಂಎನ್ 4.ಜೆಪಿಜಿ