ಬಜಾರ್ ರಸ್ತೆ, ಚರಂಡಿ ಸ್ವಚ್ಛಗೊಳಿಸಲು ಆಗ್ರಹ

KannadaprabhaNewsNetwork |  
Published : Jun 11, 2025, 11:26 AM IST
ಪೊಟೋ-ಪಟ್ಟಣದಲ್ಲಿನ ಬಜಾರವ ರಸ್ತೆಯ ವ್ಯಾಪಾರಸ್ಥರ ಸಂಘಃದ ಪದಾಧಿಕಾರಿಗಳು ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಪಟ್ಟಣದ ಬಜಾರ ಸಿ.ಸಿ. ರಸ್ತೆ, ಚರಂಡಿ ಸ್ವಚ್ಛತೆಗೊಳಿಸಲು, ಬೀದಿ ದೀಪ ದುರಸ್ತಿ ಮಾಡುವುದು ಸೇರಿದಂತೆ ವಿವಿಧ ಮೂಲ ಸೌಲಭ್ಯ ಒದಗಿಸುವ ಕುರಿತು ಬಜಾರ್ ವ್ಯಾಪಾರಸ್ಥರ ಸಂಘದಿಂದ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

ಲಕ್ಷ್ಮೇಶ್ವರ: ಪಟ್ಟಣದ ಬಜಾರ ಸಿ.ಸಿ. ರಸ್ತೆ, ಚರಂಡಿ ಸ್ವಚ್ಛತೆಗೊಳಿಸಲು, ಬೀದಿ ದೀಪ ದುರಸ್ತಿ ಮಾಡುವುದು ಸೇರಿದಂತೆ ವಿವಿಧ ಮೂಲ ಸೌಲಭ್ಯ ಒದಗಿಸುವ ಕುರಿತು ಬಜಾರ್ ವ್ಯಾಪಾರಸ್ಥರ ಸಂಘದಿಂದ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರದಲ್ಲಿ - ಪಟ್ಟಣದ ಪ್ರಮುಖ ಬಜಾರ ರಸ್ತೆ ಚಾವಡಿಯಿಂದ ಬ್ರಹ್ಮದೇವರ ಸರ್ಕಲ್‌ವರೆಗೆ ಸಿಸಿ ರಸ್ತೆ ಕಾಮಗಾರಿ ರಸ್ತೆ ಅಗೆದಿದ್ದು, ಎರಡು ತಿಂಗಳಿಂದ ಕಾಮಗಾರಿ ಪ್ರಾರಂಭಿಸಿಲ್ಲ. ಈಗ ಮಳೆಗಾಲ ಪ್ರಾರಂಭವಾಗಿರುವದರಿಂದ ರಸ್ತೆಯಲ್ಲಿ ನೀರು ತುಂಬಿ ಕೆರೆಯಂತಾಗಿವೆ. ಇದರಿಂದಾಗಿ ಸಾರ್ವಜನಿಕರಿಗೆ, ವಯಸ್ಸಾದವರಿಗೆ, ಸಣ್ಣ ಪುಟ್ಟ ವ್ಯಾಪಾಸ್ಥರಿಗೆ ಹಾಗೂ ವಾಹನ ಸಂಚಾರಿಗಳಿಗೆ ಬಹಳ ತೊಂದರೆಯಾಗಿದೆ. ಇದರಿಂದಾಗಿ ಎಲ್ಲ ವ್ಯಾಪಾರಸ್ಥರ ವ್ಯಾಪಾರವು ಕುಂಠಿತವಾಗಿದೆ.

ಆದ್ದರಿಂದ ಒಂದು ವಾರದೊಳಗೆ ರಸ್ತೆ ದುರಸ್ತೆ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಇಲ್ಲವಾದಲ್ಲಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ವ್ಯಾಪಾರಸ್ಥರ ಸಂಘದಿಂದ ಬಜಾರ್‌ ಬಂದ್‌ ಮಾಡಿ ಪುರಸಭೆ ಎದುರು ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಮುಂಗಾರು ಮಳೆ ಪ್ರಾರಂಭವಾಗಿದ್ದು ಊರಿನ ಪ್ರಮುಖ ಚರಂಡಿಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಹಾಗೂ ಕೊಳಚೆ ನೀರು ಸರಾಗವಾಗಿ ಹೋಗಲು ಹರಿದು ಹೋಗುವಂತೆ ಸ್ವಚ್ಛಗೊಳಿಸಬೇಕು. ಬಜಾರ ರಸ್ತೆಯ ಬೀದಿ ದೀಪಗಳು ವಿದ್ಯುತ್ ಸಂಪರ್ಕವಿರುವುದಿಲ್ಲ ಆದಷ್ಟ ಬೇಗನೇ ವಿದ್ಯುತ್ ಸಂಪರ್ಕಗೊಳಿಸಬೇಕು.

ಬೀದಿ ಬದಿ ವ್ಯಾಪಾರಸ್ಥರು ಪುಟ್‌ಪಾತ್‌ ಬಿಟ್ಟು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ವಾಹನ ನಿಲುಗಡೆಗೆ ಹಾಗೂ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಅದಕಾರಣ ಪುಟ್ ಪಾತಿಗೆ ಹೊಂದಿಕೊಂಡು ವ್ಯಾಪಾರ ಮಾಡಲು ತಿಳಿಸಬೇಕು.ಪ್ರಮುಖ ರಸ್ತೆಗಳಾದ ಪಂಪ ಸರ್ಕಲ್‌ದಿಂದ ಹಾವಳಿ ಹನುಮಂತ ದೇವಸ್ಥಾನ ಪಾದಗಟ್ಟಿಯಿಂದ ಹಳೇ ಬಸ್ ನಿಲ್ದಾಣ,ಹಾಗೂ ಮಾನ್ವಿ ಪೆಟ್ರೋಲ ಬಂಕದಿಂದ ವಿದ್ಯಾರಣ್ಯ ಸರ್ಕಲ್‌ದವರೆಗೆ ಹಾಗೂ ಇನ್ನುಳಿದ ಪ್ರಮುಖ ರಸ್ತೆಗಳನ್ನು ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಅಗ್ರಹಿಸಿ ವ್ಯಾಪಾರಸ್ಥರ ಸಂಘ ಅಧ್ಯಕ್ಷ ಬಸವೇಶ ಮಹಾಂತ ಶೆಟ್ಟರ, ಅಶೋಕ್ ಬಟಗುರ್ಕಿ, ಮುಖಂಡ ನಾಗರಾಜ ಚಿಂಚಲಿ ಮುಖ್ಯಾಧಿಕಾರಿಗೆ ತರಾಟೆ ತೆಗೆದುಕೊಂಡು ಒಂದು ವಾರದೊಳಗೆ ಕಾಮಗಾರಿ ಪ್ರಾರಂಭಿಸದಿದ್ದರೆ ಮುಂದಾಗುವ ಘಟನೆ ನೀವೆ ಹೊಣೆ ಎಂದು ಎಚ್ಚರಿಸಿದರು,ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಬಜಾರ್ ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ್ನು ಕರೆಸಿ ಮಾತನಾಡಿ, ಒಂದು ವಾರದೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.ಈ ವೇಳೆ ಮಲ್ಲಣ್ಣ ಮಹಾಂತಶೆಟ್ಟರ, ಧರ್ಮಾಚಂದ ಮುಥಾ, ಆದಿನಾಥ ಬರಿಗಾಲಿ, ಮಹಾಂತೇಶ ಅಗಡಿ, ಸಂತೋಷ ಗೋಗಿ, ಡಿ.ವಿ. ಹಿರೇಮಠ, ದೀಪು ಬಟಗುರ್ಕಿ, ರವಿ ಪುರಾಣಿಕಮಠ, ಶಕ್ತಿ ಕತ್ತಿ, ವೈಭವ ಗೋಗಿ, ನಾಗನಗೌಡ ಪಾಟೀಲ, ಟಾಕಪ್ಪ ಸಾತಪುತೆ, ಜ್ಞಾನಬೋ ಬೋಮಲೆ, ಅನೇಕ ವ್ಯಾಪಾರಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಇತ್ಯರ್ಥಕ್ಕೆ ಕಾಂಗ್ರೆಸ್‌ ಶಾಸಕರಿಂದ ಒತ್ತಡ
ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ