ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಿಸಲು ಒತ್ತಾಯ

KannadaprabhaNewsNetwork |  
Published : Oct 27, 2026, 02:30 AM IST
ಪೊಟೋ-ಲಕ್ಷ್ಮೇಶ್ವರದ ಹಳೇ ಬಸ್ ಕ್ರಾಸ್ ಹತ್ತಿರ ಮಹರ್ಷಿ ವಾಲ್ಮೀಕಿ ವೃತ್ತ ನಾಮಫಲಕವನ್ನು ಕಿತ್ತು ಹಾಕಿದ ಅಧಿಕಾರಿಗಳ ವಿರುದ್ಧ ವಾಲ್ಮೀಕಿ ನಾಯಕ ಸಮಾಜದವರು ಆಕ್ರೋಶ ಹೊರ ಹಾಕಿದರು | Kannada Prabha

ಸಾರಾಂಶ

ಪಟ್ಟಣದ ಹಳೇ ಬಸ್ ನಿಲ್ದಾಣದ ಕ್ರಾಸ್‌ನಲ್ಲಿ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ವಿವಿಧೋದ್ದೇಶಗಳ ಸಂಘದ ವತಿಯಿಂದ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಿಸಬೇಕು ಎಂದು ಪುರಸಭೆಗೆ ಮನವಿ ಸಲ್ಲಿಸಿದ್ದರು. ಅದರ ಪ್ರಕಾರ ಸೋಮವಾರ ವಾಲ್ಮೀಕಿ ಜಯಂತಿಯಂದು ಸಂಘದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಅಲ್ಲಿ ಮಹರ್ಷಿ ವಾಲ್ಮೀಕಿ ಅವರ ಫಲಕ ಪ್ರತಿಷ್ಠಾಪಿಸಲು ಮುಂದಾದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪಟ್ಟಣದ ಹಳೇ ಬಸ್ ನಿಲ್ದಾಣದ ಕ್ರಾಸ್‌ನಲ್ಲಿ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ವಿವಿಧೋದ್ದೇಶಗಳ ಸಂಘದ ವತಿಯಿಂದ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಿಸಬೇಕು ಎಂದು ಪುರಸಭೆಗೆ ಮನವಿ ಸಲ್ಲಿಸಿದ್ದರು. ಅದರ ಪ್ರಕಾರ ಸೋಮವಾರ ವಾಲ್ಮೀಕಿ ಜಯಂತಿಯಂದು ಸಂಘದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಅಲ್ಲಿ ಮಹರ್ಷಿ ವಾಲ್ಮೀಕಿ ಅವರ ಫಲಕ ಪ್ರತಿಷ್ಠಾಪಿಸಲು ಮುಂದಾದರು. ಆದರೆ ವಿಷಯ ತಿಳಿಯುತ್ತಲೇ ಪುರಸಭೆಯವರು ಫಲಕ ತೆರವುಗೊಳಿಸಿದರು. ಇದರಿಂದಾಗಿ ರೊಚ್ಚಿಗೆದ್ದ ಸಮಾಜ ಬಾಂಧವರು ತಹಶೀಲ್ದಾರ ಕಚೇರಿಯಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸುವುದಿಲ್ಲ. ನಾವು ವೃತ್ತ ನಿರ್ಮಿಸಬೇಕು ಎಂದು ಉದ್ದೇಶಿಸಿರುವ ಜಾಗೆಯಲ್ಲಿಯೇ ಜಯಂತಿ ಆಚರಿಸುತ್ತೇವೆ ಎಂದು ಪಟ್ಟು ಹಿಡಿದರು. ಇದರಿಂದಾಗಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ವೇಳೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಣ್ಣ ಯಂಗಾಡಿ, ಕಾರ್ಯದರ್ಶಿ ಹನಮಂತ ಜಾಲಿಮರದ, ಪ್ರಕಾಶ ಬೆಂತೂರ, ರಾಜು ಓಲೇಕಾರ ಮಾತನಾಡಿ, ಪುರಸಭೆಯವರು ಮೊದಲು ನಾಮಫಲಕ ಅಳವಡಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಅಳವಡಿಸಿದ ನಂತರ ಅವರೇ ಅದನ್ನು ತೆರವುಗೊಳಿಸಿದ್ದು ಖಂಡನೀಯ. ಮೊದಲೇ ಮಾಹಿತಿ ಕೊಟ್ಟಿದ್ದರೆ ನಾವು ನಾಮಫಲಕ ಹಾಕುತ್ತಿರಲಿಲ್ಲ. ಇದು ಇಡೀ ವಾಲ್ಮೀಕಿ ಸಮಾಜಕ್ಕೆ ಮಾಡಿದ ಅವಮಾನ ಮಾಡಿದಂತಾಗಿದೆ’ ಎಂದು ಆಕ್ರೋಶ ಹೊರ ಹಾಕಿದರಲ್ಲದೆ ಈ ಬಗ್ಗೆ ಪುರಸಭೆ ಅಧಿಕಾರಿಗಳು ಸ್ಪಷ್ಟನೆ ನೀಡುವವರೆಗೆ ನಾವು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು. ಅದಕ್ಕೆ ಸಮಾಜದ ಎಲ್ಲರೂ ಒಪ್ಪಿಗೆ ಸೂಚಿಸಿದರು. ಯಾರದೋ ಮಾತು ಕೇಳಿ ಪುರಸಭೆ ಅಧಿಕಾರಿಗಳು ನಾಮಫಲಕ ತೆರವುಗೊಳಿಸಿದ್ದಾರೆ. ಅಲ್ಲಿ ವೃತ್ತ ನಿರ್ಮಿಸಲು ಬೇಡ ಅಂದವರ ಹೆಸರನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರೆ ಮಾತನಾಡಿ, ನಾಮಫಲಕ ತೆರವುಗೊಳಿಸುವಂತೆ ನಮಗೆ ಯಾರೂ ಹೇಳಿಲ್ಲ. ಸದ್ಯ ನೀತಿಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಯಾವುದೇ ನಾಮಫಲಕ ಅಳವಡಿಸಲು ಅವಕಾಶ ಇಲ್ಲ. ಈ ಕಾರಣಕ್ಕಾಗಿ ತೆರವುಗೊಳಿಸಿದ್ದೇವೆ ಎಂದು ಹೇಳಿದರು. ಅವರ ಉತ್ತರಕ್ಕೆ ತೃಪ್ತರಾಗದ ಸಮಾಜ ಬಾಂಧವರು ನ. ೧ರಂದು ನಿಗದಿತ ಜಾಗೆಯಲ್ಲಿಯೇ ನಾಮಫಲಕ ಅಳವಡಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಪಿಎಸ್‌ಐ ಆನಂದ ಕ್ಯಾರಕಟ್ಟಿ ಸಮಾಜ ಬಾಂಧವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ನಂತರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡರು.

ಸಮಾರಂಭದಲ್ಲಿ ಕೆ.ಒ. ಹೂಲಿಕಟ್ಟಿ, ಎನ್.ಎನ್. ನೆಗಳೂರ, ರಾಜು ಓಲೇಕಾರ, ನಾಗರಾಜ ಹಾವಳಕೇರಿ, ಚನ್ನಬಸಪ್ಪ ಬೆಡಸೂರ, ಸಚಿನಕುಮಾರ ಮೇಲ್ಮರಿ, ದೇವಪ್ಪ ವಾಲಿಕಾರ, ಬಸಪ್ಪ ವಾಲೀಕಾರ, ಫಕ್ಕೀರಪ್ಪ ಕಟಗಿ, ಕಲ್ಲಪ್ಪ ಗಂಗಣ್ಣವರ, ಹೊಳಲಪ್ಪ ತಳವಾರ, ಅಶೋಕ ತಳವಾರ, ನಿಂಗಪ್ಪ ಜಂತ್ಲಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿ-ಧರ್ಮ ಮೀರಿದ ಮಾನವೀಯತೆ ಬೆಳೆಸೋಣ: ಲಾಡ್ಲೆಮಷಾಕ್ ದೋಟಿಹಾಳ
ರಾಮಾಯಣ ಮೂಲಕ ಅಮೂಲ್ಯ ಸಂದೇಶ ನೀಡಿದ ವಾಲ್ಮೀಕಿ: ಪರಣ್ಣ ಮುನವಳ್ಳಿ