ರಾಣಿಬೆನ್ನೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಖಾಸಗಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವಹೇಳನಕಾರಿ ಹೇಳಿಕೆ ಖಂಡಿಸಿ ಜಿಲ್ಲಾ ಜೆಡಿಎಸ್ ಘಟಕದ ಕಾರ್ಯಕರ್ತರು ಸೋಮವಾರ ನಗರದ ಪಿ.ಬಿ. ರಸ್ತೆಯ ಪಾಂಡುರಂಗ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ರಾಕೇಶ್ ಶೆಟ್ಟಿ ಪ್ರತಿಕೃತಿ ದಹಿಸಿದರು.
ತಾಲೂಕು ಗ್ರಾಮೀಣ ಘಟಕ ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ, ನಗರ ಘಟಕದ ಅಧ್ಯಕ್ಷ ನಿಂಗಪ್ಪ ಹೊನ್ನಾಳಿ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಲಗೇರಿ, ರಾಜ್ಯ ಕಮಿಟಿ ಸದಸ್ಯೆ ಲಕ್ಷ್ಮೀ ಕದರಮಂಡಲಗಿ, ಉಷಾ ಜಾಡಮಲಿ, ಪೂಜಾ ದೈವಜ್ಞ, ಕಸ್ತೂರಿ ಅರ್ಕಸಾಲಿ, ಪರಮೇಶ ಚಿನ್ನನವರ, ಮಂಜು ಲಿಂಗದಹಳ್ಳಿ, ಶಿವಪುತ್ರಪ್ಪ ನಡುವಿನಮನಿ, ಮಾಲತೇಶ ಬಡಿಗೇರ, ಮೌನೇಶ ಬಡಿಗೇರ, ಶಿವು ಕರಿಯಪ್ಪನವರ, ಸುನ್ನಾಖಾನ್, ಇಬ್ರಾಹಿಂ ಯಲಗಚ್ಚ, ರವೀಂದ್ರ ಶಿವಪ್ಪನವರ, ಈರಣ್ಣಗೌಡ ಕಡೂರ, ಬಸವರಾಜ ಕವಲೆತ್ತು, ಉಮೇಶ ತಳವಾರ, ಮಂಜಣ್ಣ ನಲವಾಗಲ, ನಾಗಭೂಷಣ ಹಲಗೇರಿ, ನಾಗರಾಜ ಲಮಾಣಿ, ಮುಕ್ತಿಯಾರ ರಾಣಿಬೆನ್ನೂರ, ಹನುಮಂತಪ್ಪ ಬಿಷ್ಟಣ್ಣನವರ, ಕುಮಾರ ಚಲವಾದಿ, ಬೀರೇಶ ಬಾರ್ಕಿ, ನಿಂಗಣ್ಣ ಸಣ್ಣಕೊಟ್ರಪ್ಪನವರ, ಗುರುರಾಜ ಗೋಜನವರ, ನಟರಾಜ ಕೋಟಿಹಾಳ, ಪರಶುರಾಮ ಕಸವಾಳ, ಬಸಣ್ಣ ಗಲಗಲಿ, ಶಿವಾನಂದ ಹಲಗೇರಿ, ರುದ್ರಣ್ಣ ಕೋಡಿಹಳ್ಳಿ, ತಿಮ್ಮಣ್ಣ ವೆಂಕಣ್ಣನವರ, ಚಂದ್ರಪ್ಪ ಕ್ಯಾತಮನೂರ ಪ್ರತಿಭಟನೆಯಲ್ಲಿದ್ದರು.