ಹಾವೇರಿ: ರಾಣಿಬೆನ್ನೂರು ತಾಲೂಕಿನಲ್ಲಿ ಖಾಸಗಿ ಫೈನಾನ್ಸ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದು, ರೈತ ಕಾರ್ಮಿಕರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಬಡವರಿಗೆ ಕಿರುಕುಳ ಕೊಡುತ್ತಿವೆ. ಈ ಕೂಡಲೇ ಖಾಸಗಿ ಫೈನಾನ್ಸ್‌ಗಳ ಕಿರುಕುಳಕ್ಕೆ ಕಡಿವಾಣ ಹಾಕಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ರಾಣಿಬೆನ್ನೂರು ತಾಲೂಕು ಘಟಕದಿಂದ ಎಸ್‌ಪಿ ಯಶೋದಾ ವಂಟಗೋಡಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ತಾಲೂಕಾಧ್ಯಕ್ಷ ಹನುಮಂತಪ್ಪ ಕಬ್ಬಾರ, ರಾಣಿಬೆನ್ನೂರು ತಾಲೂಕಿನಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಗಳು ನಾಯಿಕೊಡಿಯಂತೆ ಹುಟ್ಟಿಕೊಂಡಿದ್ದು, ಬೇರೆ ಜಿಲ್ಲೆಗಳಿಂದಲೂ ಕೆಲವರು ಬಂದು ಬಡವರಿಗೆ ಲೋನ್ ಕೊಟ್ಟು, ದುಪ್ಪಟ್ಟು ಬಡ್ಡಿಯನ್ನು ವಸೂಲಿ ಮಾಡುತ್ತಾರೆ.
ಕೊಡದೇ ಇದ್ದ ಸಂದರ್ಭದಲ್ಲಿ ಸಂಜೆ 7ರಿಂದ ರಾತ್ರಿ 11 ಗಂಟೆಯವರೆಗೆ ಮನೆ ಬಾಗಿಲಿಗೆ ಬಂದು ಸಾಲ ಕಟ್ಟುವಂತೆ ಕಿರುಕುಳ ನೀಡುತ್ತಿದ್ದಾರೆ. ಇಲ್ಲಸಲ್ಲದ ಮಾತುಗಳನ್ನಾಡಿ ಮರ್ಯಾದೆಯನ್ನು ಹರಾಜು ಮಾಡುತ್ತಿದ್ದಾರೆ. ಮನೆಯ ಗಂಡುಮಕ್ಕಳ ಎದುರಿಗೆ ಗೂಂಡಾ ವರ್ತನೆಯನ್ನು ತೋರುತ್ತಾರೆ. ಆದ್ದರಿಂದ ಬಡವರಿಗೆ ಸಾಲ ಕಟ್ಟುವಂತೆ ಕಿರುಕುಳ ನೀಡುವ ಖಾಸಗಿ ಫೈನಾನ್ಸ್‌ಗಳ ವಿರುದ್ಧ ಕ್ರಮ ಕೈಗೊಂಡು, ಕಡಿವಾಣ ಹಾಕುವಂತೆ ಒತ್ತಾಯಿಸಿದರು.ಈ ವೇಳೆ ರಾಜೇಶ ಅಂಗಡಿ, ಮಂಜುನಾಥ ಸಂಬೋಜಿ, ಮಾಲತೇಶ ಮಡಿವಾಳರ, ಜಗದೀಶ ಬಳ್ಳಾರಿ, ಲಲಿತಾ ಲಮಾಣಿ, ಶೈಲಾ ಹರನಗಿರಿ, ಕೊಟ್ರಮ್ಮ ಕಾಯಕದ, ಬಸವರಾಜ ಮೇಗಳಗೇರಿ, ನೀಲಮ್ಮ ಮೇಗಳಗೇರಿ, ಶಿಲ್ಪಾ ಲಮಾಣಿ, ಅಮಿದ ಶಿಡೇನೂರ, ಮುನ್ನಾ ಹರಿಹರ, ಗಂಗಮ್ಮ ಪವಾರ, ರೇಷ್ಮಾ ಹೊನ್ನಳ್ಳಿ, ಆಲ್ತಾಫ ಗಂಧದ ಸೇರಿದಂತೆ ಇತರರು ಇದ್ದರು. ಕ್ಷಯರೋಗಿಗಳಿಗೆ ಆಹಾರ ಕಿಟ್ ವಿತರಣೆರಾಣಿಬೆನ್ನೂರು: ಇಲ್ಲಿಯ ಪಂಪಾ ನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ- 01ರಲ್ಲಿ ಗುರುವಾರ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ನಿಕ್ಷಯಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ತಾಲೂಕು ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಸಿದ್ದೋಜಿರಾವ್ ಸೂರ್ಯವಂಶಿ ಅವರು ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ಗಳನ್ನು ವಿತರಿಸಿದರು.ಈ ಸಮಯದಲ್ಲಿ ಸಿದ್ದೋಜಿರಾವ್ ಸೂರ್ಯವಂಶಿ ಮಾತನಾಡಿ, ಸಾರ್ವಜನಿಕರು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ಈ ನಿಕ್ಷಯಮಿತ್ರ ಎಂಬ ಯೋಜನೆಯಡಿ ಕ್ಷಯರೋಗಿಗಳಿಗೆ ಸಹಾಯಹಸ್ತ ನೀಡಬೇಕು ಎಂದರು.
ಆಸ್ಪತ್ರೆಯ ಪ್ರಯೋಗಾಲಯ ತಂತ್ರಜ್ಞ ಹರೀಶ ಸಣ್ಣಬೊಮ್ಮಾಜಿ, ಫಾರ್ಮಸಿ ನಾಗರಾಜ ತಾವಡೆ, ಬಿ.ಎಂ. ನಾಗರಾಜ್, ನಿಜಾಮುದ್ದಿನ್ ಹುಬ್ಬಳ್ಳಿ, ಎಸ್‌ಟಿಎಸ್ ಜಗದೀಶ ಪಾಟೀಲ, ಗಿರೀಶ ಮುರನಾಳ, ರಾಜೇಶ್ವರಿ ಸೇರಿದಂತೆ ಇತರರಿದ್ದರು.