ನಾಯಿ, ಹಂದಿ ಹಾವಳಿ ತಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Jul 25, 2025, 12:31 AM IST
24ಎಸ್‌ವಿಆರ್‌02 | Kannada Prabha

ಸಾರಾಂಶ

ಪಟ್ಟಣಕ್ಕೆ ಹತ್ತಿರದಲ್ಲಿರುವ ಕೃಷಿ ಜಮೀನುಗಳಿಗೆ ನುಗ್ಗುವ ಹಂದಿಗಳು ಹೊಲದಲ್ಲಿರುವ ಬೆಳೆಯನ್ನು ಸಂಪೂರ್ಣ ಹಾಳು ಮಾಡುತ್ತಿವೆ. ನಿರಂತರ ಮಳೆಗೆ ನಲುಗುತ್ತಿರುವ ರೈತರಿಗೆ ಹೊಲದಲ್ಲಿ ಹಂದಿಗಳ ಕಾಟ, ಹೊಲಕ್ಕೆ ತೆರಳಲು ಪಟ್ಟಣದಲ್ಲಿ ನಾಯಿಗಳ ಕಾಟ ನಿತ್ಯ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ರೈತರು ನಿತ್ಯ ಪರದಾಡುವಂತಾಗಿದೆ.

ಸವಣೂರು: ಪಟ್ಟಣದಲ್ಲಿ ಹೆಚ್ಚಿರುವ ನಾಯಿ ಹಾಗೂ ಹಂದಿಗಳ ಸಂಖ್ಯೆಗೆ ಕಡಿವಾಣ ಹಾಕಲು ಒತ್ತಾಯಿಸಿ ರೈತರು ಎತ್ತು- ಚಕ್ಕಡಿ ಸಮೇತ ಪುರಸಭೆ ಆವರಣದಲ್ಲಿ ಗುರುವಾರ ಸಾಂಕೇತಿಕ ಪ್ರತಿಭಟನೆ ಕೈಗೊಂಡು, ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಅವರಿಗೆ ಗಡುವು ನೀಡಿದರು. ಪಟ್ಟಣಕ್ಕೆ ಹತ್ತಿರದಲ್ಲಿರುವ ಕೃಷಿ ಜಮೀನುಗಳಿಗೆ ನುಗ್ಗುವ ಹಂದಿಗಳು ಹೊಲದಲ್ಲಿರುವ ಬೆಳೆಯನ್ನು ಸಂಪೂರ್ಣ ಹಾಳು ಮಾಡುತ್ತಿವೆ. ನಿರಂತರ ಮಳೆಗೆ ನಲುಗುತ್ತಿರುವ ರೈತರಿಗೆ ಹೊಲದಲ್ಲಿ ಹಂದಿಗಳ ಕಾಟ, ಹೊಲಕ್ಕೆ ತೆರಳಲು ಪಟ್ಟಣದಲ್ಲಿ ನಾಯಿಗಳ ಕಾಟ ನಿತ್ಯ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ರೈತರು ನಿತ್ಯ ಪರದಾಡುವಂತಾಗಿದೆ.

ಕೂಡಲೇ ಸೂಕ್ತ ಕ್ರಮ ವಹಿಸಿ ಹಂದಿ ಹಾಗೂ ನಾಯಿಗಳ ಸಂಖ್ಯೆಗೆ ಕಡಿವಾಣ ಹಾಕಿ ರೈತರ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಮಾತನಾಡಿ, ಒಂದು ವಾರದಲ್ಲಿ ಹಂದಿಗಳ ಮಾಲೀಕರಿಗೆ ಅಥವಾ ಸಂಬಂಧಪಟ್ಟವರಿಗೆ ತಾಕೀತು ಮಾಡಿ ಹಂದಿಗಳ ಸಂಖ್ಯೆ ನಿಯಂತ್ರಣಕ್ಕೆ ಮುಂದಾಗಲಾಗುವುದು. ನಾಯಿಗಳ ಸಂಖ್ಯೆ ಹೆಚ್ಚಳ ಕುರಿತು ಈಗಾಗಲೇ ಚರ್ಚಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆಯನ್ನು ಕೈಬಿಟ್ಟರು.ಕಾಲುವೆ ಅಭಿವೃದ್ಧಿಗೆ ಹಣ: ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ

ರಟ್ಟೀಹಳ್ಳಿ: ತಾಲೂಕಿನ ಮದಗ- ಮಾಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ₹52.20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತ ಹಿನ್ನೆಲೆ ಪಟ್ಟಣದ ಭಗತ್‍ಸಿಂಗ್ ವೃತ್ತದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ ಮಾತನಾಡಿ, ಈ ಭಾಗದ ಹೆಮ್ಮೆಯ ಮದಗ- ಮಾಸೂರು ಕೆರೆ ಕಾಲುವೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ತಾಲೂಕಿನ ಶಾಸಕ ಯು.ಬಿ. ಬಣಕಾರ ಅವರ ಸತತ ಪರಿಶ್ರಮದಿಂದ ಅನೇಕ ವರ್ಷಗಳ ಬೇಡಿಕೆ ಈಡೇರಿದೆ. ಮದಗ- ಮಾಸೂರು ಕೆರೆಯ ಎಡ ದಂಡೆ ಮತ್ತು ಬಲ ದಂಡೆ ಕಾಲುವೆ ಅಭಿವೃದ್ಧಿಗಾಗಿ ₹52.20 ಕೋಟಿ ಹಣ ಆಡಳಿತಾತ್ಮಕ ಅನುಮೋದನೆ ದೊರೆತಿರುವುದು ಸಂತಸವನ್ನುಂಟು ಮಾಡಿದೆ ಎಂದರು.ಸಾಹಿತಿ ನಿಂಗಪ್ಪ ಚಳಗೇರಿ, ಹನುಮಂತಗೌಡ ಭರಮಣ್ಣನವರ, ವೀರನಗೌಡ ಪ್ಯಾಟಿಗೌಡ್ರ, ವಸಂತ ದ್ಯಾವಕ್ಕಳವರ, ರಮೇಶ ಭೀಮಪ್ಪನವರ, ಜಗದೀಶ ದೊಡ್ಡಮನಿ, ನಾರಾಯಣಪ್ಪ ಗೌರಕ್ಕನವರ, ವಿಜಯ ಅಂಗಡಿ, ಮಂಜು ಜಾಧವ, ಜಾಕಿರ ಮುಲ್ಲಾ, ಮಕ್ಬುಲ್‍ಸಾಬ ಹಳಿಯಾಳ, ರಮೇಶ ಕಟ್ಟೆಕಾರ ಮುಂತಾದವರು ಇದ್ದರು.

PREV

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು