ಭೋವಿ (ವಡ್ಡರ) ಅಲ್ಲದವರಿಗೆ ಎಸ್‌ಸಿ ಪ್ರಮಾಣಪತ್ರ ನೀಡದಂತೆ ಆಗ್ರಹ

KannadaprabhaNewsNetwork |  
Published : Oct 08, 2026, 02:30 AM IST
ಕುಷ್ಟಗಿ ತಾಲೂಕು ಭೋವಿ (ವಡ್ಡರ) ಸಮಾಜ ಸಂಘದ ವತಿಯಿಂದ ಭೋವಿ (ವಡ್ಡರ) ಸಮುದಾಯಕ್ಕೆ ಸೇರದ ಬೋವಿ, ಭೋಯಿ ವ್ಯಕ್ತಿಗಳಿಗೆ ಭೋವಿ (ವಡ್ಡರ) ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬಾರದು ಎಂದು ಆಗ್ರಹಿಸಿ ತಹಸೀಲ್ದಾರ್‌ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಭೋವಿ (ವಡ್ಡರ) ಸಮುದಾಯಕ್ಕೆ ಸೇರದ ಬೋವಿ, ಭೋಯಿ ವ್ಯಕ್ತಿಗಳಿಗೆ ಭೋವಿ (ವಡ್ಡರ) ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬಾರದು ಎಂದು ಆಗ್ರಹಿಸಿ ಕುಷ್ಟಗಿ ತಾಲೂಕು ಭೋವಿ (ವಡ್ಡರ) ಸಮಾಜ ಸಂಘದ ವತಿಯಿಂದ ತಹಸೀಲ್ದಾರ್‌ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಕುಷ್ಟಗಿ: ಭೋವಿ (ವಡ್ಡರ) ಸಮುದಾಯಕ್ಕೆ ಸೇರದ ಬೋವಿ, ಭೋಯಿ ವ್ಯಕ್ತಿಗಳಿಗೆ ಭೋವಿ (ವಡ್ಡರ) ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬಾರದು ಎಂದು ಆಗ್ರಹಿಸಿ ಕುಷ್ಟಗಿ ತಾಲೂಕು ಭೋವಿ (ವಡ್ಡರ) ಸಮಾಜ ಸಂಘದ ವತಿಯಿಂದ ತಹಸೀಲ್ದಾರ್‌ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಸಂಘದ ಪ್ರಮುಖರು ಮಾತನಾಡಿ, ಭೋವಿ (ವಡ್ಡರ) ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದ್ದು, ತಲೆತಲಾಂತರಗಳಿಂದ ಕಲ್ಲು ಹೊಡೆಯುವುದು, ಮನೆ ನಿರ್ಮಾಣ ಸೇರಿದಂತೆ ಶ್ರಮಾಧಾರಿತ ಕಾಯಕ ಮಾಡಿಕೊಂಡು ಬಂದಿದೆ. ಆದರೆ, ಜಾತಿ ಹೆಸರಿನ ಸಾಮ್ಯತೆಯನ್ನು ಬಳಸಿಕೊಂಡು ಕೆಲವರು ಭೋವಿ (ವಡ್ಡರ) ಪ್ರಮಾಣಪತ್ರ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅನರ್ಹರಿಗೆ ಪ್ರಮಾಣಪತ್ರ ನೀಡುವುದರಿಂದ ಸಮುದಾಯದ ನಿಜವಾದ ಅರ್ಹರಿಗೆ ಶಿಕ್ಷಣ, ಉದ್ಯೋಗ ಹಾಗೂ ಸರ್ಕಾರದ ಸೌಲಭ್ಯಗಳಲ್ಲಿ ಅನ್ಯಾಯವಾಗಲಿದೆ ಎಂದು ತಿಳಿಸಿದ ಅವರು, ನಿಯಮ ಮೀರಿ ಪ್ರಮಾಣಪತ್ರ ನೀಡಿದಲ್ಲಿ ಕಾನೂನುಬದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಹೊಸಮನಿ, ಕೊಪ್ಪಳ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಪರಸಪ್ಪ ಅಮರಾವತಿ, ಮಾಜಿ ಸದಸ್ಯ ಪರಶುರಾಮ ನಾಗರಾಳ, ನಾಮನಿರ್ದೇಶಿತ ಸದಸ್ಯ ಹನುಮೇಶ ಭೋವಿ, ಯುವ ಮುಖಂಡರಾದ ನಾಗರಾಜ ಭೋವಿ, ರಾಮು ಪೂಜಾರಿ, ಮುತ್ತಣ್ಣ ಹೊಸಮನಿ, ಮುತ್ತಣ್ಣ ಅಮರಾವತಿ, ಸಮಾಜದ ಪ್ರಮುಖರಾದ ಈಶಪ್ಪ ಭೋವಿ, ಯಮನಪ್ಪ ಕಳ್ಳಿಕಟ್ಟಿಗಿ, ಹನುಮಂತಪ್ಪ ಯರದಾಳ್, ವೆಂಕಟೇಶ ಇಂಗಳಗಿ, ಚಿನ್ನಪ್ಪ ನಾಗರಾಳ, ವೀರಣ್ಣ ಹಿರೇಮನಿ, ಹನುಮಂತಪ್ಪ ಹಿರೇಮನಿ, ಯಲ್ಲಪ್ಪ ಭೋವಿ, ಯಮನೂರಪ್ಪ ಭೋವಿ, ಮುತ್ತಣ್ಣ ಹಂಚಿನಾಳ, ರಮೇಶ, ಭೀಮೇಶ ಹಾಗೂ ಭೀಮಣ್ಣ ಭೋವಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್ ಲೋಪ: ರಾಷ್ಟ್ರಪತಿಗೆ ಇಂಡಿಯಾ ಒಕ್ಕೂಟ ಮನವಿ
ಸಂಸ್ಕೃತಿ ಜತೆಗೆ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಿ: ಪರಮೇಶ್ವರ್