ಅತಿಕ್ರಮಣ ಸಾಗುವಳಿದಾರರಿಗೂ ರಸಗೊಬ್ಬರ ವಿತರಿಸಲು ಆಗ್ರಹ

KannadaprabhaNewsNetwork |  
Published : Jun 16, 2026, 02:30 AM IST
15ಎಚ್.ಎಲ್.ವೈ-1(ಎ):  ಅತೀಕ್ರಮಣ ಸಾಗುವಳಿ ಮಾಡುವ ರೈತರಿಗೆ ಹಾಗೂ ಜಿ.ಪಿ.ಎಸ್ ಆದ ರೈತರಿಗೆ ಜಿ.ಪಿ.ಎಸ್ ನಕ್ಷೆಯ ಆದಾರದ ಮೇಲೆ ರಸಗೊಬ್ಬರವನ್ನು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕೆಂಪುಸೇನೆಯು  ಪಟ್ಟಣದಲ್ಲಿ ಪ್ರತಿಭಟನೆಯನ್ನು ನಡೆಸಿ ಮನವಿಯನ್ನು ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹಾಗೂ ಕೃಷಿ ಸಹಾಯಕ ನಿರ್ದೇಶಕ  ಪಿ.ಐ.ಮಾನೆಯವರಿಗೆ ಸಲ್ಲಿಸಿದರು | Kannada Prabha

ಸಾರಾಂಶ

ತಾಲೂಕಿನ ಅತಿಕ್ರಮಣ ಸಾಗುವಳಿದಾರರು, ಪಹಣಿ ಪತ್ರ ಇಲ್ಲದವರಿಗೂ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಕೆಂಪುಸೇನೆಯು ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಹಳಿಯಾಳ

ತಾಲೂಕಿನ ಅತಿಕ್ರಮಣ ಸಾಗುವಳಿದಾರರು, ಪಹಣಿ ಪತ್ರ ಇಲ್ಲದವರಿಗೂ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಕೆಂಪುಸೇನೆಯು ಪ್ರತಿಭಟನೆ ನಡೆಸಿತು.

ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ.ಮಾನೆಗೆ ಕೆಂಪುಸೇನೆಯವರು ಮನವಿ ಸಲ್ಲಿಸಿದರು.

ಪ್ರಸಕ್ತ ವರ್ಷದ ಕೃಷಿ ಹಂಗಾಮಿನಲ್ಲಿ ಪಹಣಿ ಪತ್ರ ಇರುವವರಿಗೆ ಮಾತ್ರ ರಸಗೊಬ್ಬರ ವಿತರಿಸಲಾಗುತ್ತಿದ್ದು, ಇದರಿಂದ ಪಹಣಿ ಪತ್ರ ಇಲ್ಲದ ರೈತರಿಗೆ ಅನ್ಯಾಯವಾಗುತ್ತಿದೆ. ಅದಕ್ಕಾಗಿ ಅತಿಕ್ರಮಣ ಸಾಗುವಳಿ ಮಾಡುವ ರೈತರಿಗೆ ಜಿಪಿಎಸ್ ನಕ್ಷೆಯ ಆಧಾರದ ಮೇಲೆ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಾಲೂಕಿನಲ್ಲಿ ನೂರಾರು ರೈತರು ತಮ್ಮ ಕುಟುಂಬದ ನಿರ್ವಹಣೆಗಾಗಿ ಅತಿಕ್ರಮಣವಾಗಿ ಸಾಗುವಳಿ ಮಾಡುತ್ತಾ ಭತ್ತ, ಗೋವಿನಜೋಳ, ಕಬ್ಬು ಇತ್ಯಾದಿ ಬೆಳೆಗಳನ್ನು ಬೆಳೆದು ಬದುಕನ್ನು ಸಾಗಿಸುತ್ತಿದ್ದಾರೆ. ಸಾಗುವಳಿದಾರರಿಗೆ ಅತಿಕ್ರಮಣ ಜಮೀನುಗಳ ಜಿ.ಪಿ.ಎಸ್ ನಕ್ಷೆಯನ್ನು ಮಾತ್ರ ಮಾಡಿಕೊಡಲಾಗಿದೆ. ಹೀಗಿರುವಾಗ ಪ್ರಸಕ್ತ ವರ್ಷದಿಂದ ಪಹಣಿ ಪತ್ರ ಇರುವರಿಗೆ ಮಾತ್ರ ರಸಗೊಬ್ಬರವನ್ನು ವಿತರಿಸಲಾಗುತ್ತಿದೆ. ಇದರಿಂದ ಅತಿಕ್ರಮಣ ಸಾಗುವಳಿದಾರ ರೈತರಿಗೆ ರಸಗೊಬ್ಬರ ಪಡೆಯಲು ಅವಕಾಶವು ನೀಡಲಾಗಿಲ್ಲ. ಸರ್ಕಾರದ ಈ ಹೊಸ ನಿಯಮಾವಳಿಯಿಂದ ಅತಿಕ್ರಮಣ ಸಾಗುವಳಿದಾರರಿಗೆ ಸಮಸ್ಯೆ ಉಂಟಾಗಿದೆ.

ಅತಿಕ್ರಮಣ ಸಾಗುವಳಿದಾರರಿಗೆ ರಸಗೊಬ್ಬರ ಇಲ್ಲದೇ ಬೇಸಾಯ ಮಾಡುವುದು ದೊಡ್ಡ ಸವಾಲಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಮತ್ತು ತಾಲೂಕಾಡಳಿತವು ಈ ಗಂಭೀರವಾದ ಸಮಸ್ಯೆಯನ್ನು ಕೂಲಕುಂಶವಾಗಿ ಪರಿಶೀಲಿಸಿ ಅತಿಕ್ರಮಣ ಸಾಗುವಳಿದಾರರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ದಲಿತ ಸಂಘರ್ಷ ಸಮಿತಿ ಕೆಂಪುಸೇನೆಯ ರಾಜ್ಯ ಉಪಾಧ್ಯಕ್ಷ ವಿ.ಬಿ. ರಾಮಚಂದ್ರ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು. ತಾಲೂಕು ಅಧ್ಯಕ್ಷ ಬಸ್ತ್ಯಾಂವ್ ಸಿದ್ಧಿ, ಕಾರ್ಯಾಧ್ಯಕ್ಷ ಶಕೀಲ ಚೌಕಿದಾರ, ಪ್ರಮುಖರಾದ ರಾಜು ಕುರುಬೂರ, ಪರಶುರಾಮ ಅಂಗಡಿ, ಗಣೇಶ ಅಂಬೋಳಿ, ರವಿ ಮಾದರ, ಮೇಲವಿನ್ ಫರ್ನಾಂಡೀಸ್, ಮಂಜುಳಾ ವಡ್ಡರ,ಚಂದ್ರು ಆನೇನವರ, ಮಂಜುನಾಥ ಕಾಮ್ರೇಕರ, ನಾಗೇಂದ್ರ ಗೌಡಾ, ಸುಭಾಸ್ ವಡ್ಡರ, ಮನೋಹರ ವಾಲೇಕರ, ಮಂಜುನಾಥ ನಾಗೇಂದ್ರ ಅಂಗೋಳಿ, ಮ್ಯಾನುವೆಲ್ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಡಿಕೇರಿ: 3 ಲಕ್ಷ ರು. ಮೌಲ್ಯದ ಸವಲತ್ತು ವಿತರಣೆ
ಹವಾಮಾನ ವೈಪರೀತ್ಯ: ಜಿಲ್ಲೆಯಲ್ಲಿ ಭತ್ತ ಕೃಷಿ ಭಾರಿ ಕುಸಿತ