ಹೊನ್ನಾವರ: ಅವೈಜ್ಞಾನಿಕ ಕಸ್ತೂರಿರಂಗನ್ ವರದಿಯ ಕುರಿತು ಸರ್ಕಾರಕ್ಕೆ ಗಾಂಭೀರ್ಯತೆ ಅರಿವಿದೆ. ಸರ್ಕಾರದ ನಿಲುವು ಜನಪರವಾಗಿರುವುದು ಅಲ್ಲದೇ, ಕರಡು ಕಸ್ತೂರಿರಂಗನ್ ವರದಿ ವಿರೋಧಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಉತ್ತರ ಕನ್ನಡದಲ್ಲಿ ವರದಿಯಿಂದ ಜನರ ಮೂಲ ಸೌಕರ್ಯ ಮತ್ತು ಅರಣ್ಯವಾಸಿಗಳ ಹಕ್ಕಿಗೆ ಆತಂಕ ಉಂಟಾಗುವುದು ಎಂದರು.ಜೆ.ಎಂ. ಶೆಟ್ಟಿ ಮಾತನಾಡಿ, ವರದಿ ಜಾರಿಯಿಂದ ಜನರ ಜೀವನಕ್ಕೆ ಬಾಧಕ ಉಂಟಾಗುವುದು ಎಂದರು.ಅವೈಜ್ಞಾನಿಕ ವರದಿ: ಕಸ್ತೂರಿರಂಗನ್ ವರದಿ ಅವೈಜ್ಞಾನಿಕವಾಗಿದ್ದು, ಸೆಟ್‌ಲೈಟ್ ಚಿತ್ರಣದ ಮೂಲಕ ತಯಾರಿಸಿದ ವರದಿಯು ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ. ಅಲ್ಲದೇ ಗ್ರಾಮದ ಶೇ. 20ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವಿವೈವಿಧ್ಯ ಪರಿಸರ ಸೂಕ್ಷ್ಮವಾಗಿರುವ ಮಾನದಂಡದ ಅಡಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸುವುದು ಅವೈಜ್ಞಾನಿಕ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ನಿಯೋಗದಲ್ಲಿ ಪಧಾದಿಕಾರಿಗಳಾದ ದೇವರಾಜ್ ಗೊಂಡ, ಬಾಲಚಂದ್ರ ಶೆಟ್ಟಿ ಆಚವೆ, ಮಹಾಬಲೇಶ್ವರ್ ನಾಯ್ಕ ಬೇಡ್ಕಣಿ, ಸಂಕೇತ ಹೊನ್ನಾವರ, ದಿನೇಶ ನಾಯ್ಕ ಸಿದ್ದಾಪುರ, ವಿನೋದ ನಾಯ್ಕ ಯಲಕೊಟಗಿ, ಚಂದು ಬೆಳಕೆ, ಸುರೇಶ ಕರ್ನಾಕೊಲ್, ಆಯೂಬ್ ಉಮ್ಮರ್ ಬೆಟ್ಟುಳಿ, ಜಿ.ಕೆ. ಗೌಡ ಮುಂತಾದವರು ಉಪಸ್ಥಿತರಿದ್ದರು.