ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ತಾಲೂಕಿನಾದ್ಯಂತ ತೀವ್ರ ಬರಗಾಲ ಉಂಟಾದ ಹಿನ್ನೆಲೆ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಧನಂಜಯ ಎಂ. ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಹಿಂದೆಂದೂ ಕಂಡರಿಯದ ಬರಗಾಲ ಆವರಿಸಿದ್ದು, ಬರಗಾಲ ಘೋಷಣೆ ಮಾಡಿದ್ದರೂ ಸಹ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದದ ಸಂಗತಿ. ಹಿಂಗಾರು ಮಳೆಯು ಸಹ ಆಗದೆ ಇರುವುದರಿಂದ ದನಕರುಗಳಿಗೆ ಮೇವು, ಹೊಟ್ಟು ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕುಡಿಯುವ ನೀರನ ಸಮಸ್ಯೆ ಕುರಿತಂತೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಬೋರ್‌ವೆಲ್ ಕೊರೆಸುವುದಕ್ಕೆ ಆದ್ಯತೆ ನೀಡಬೇಕು, ಬ್ಯಾಂಕುಗಳಿಂದ ರೈತರಿಗೆ ಸಾಲ ವಸೂಲಾತಿಗಾಗಿ ಹೆಚ್ಚು ಒತ್ತಾಯ ಮಾಡಲಾಗುತ್ತಿದ್ದು, ತಹಸೀಲ್ದಾರರು ಕೂಡಲೇ ಮದ್ಯಪ್ರವೇಶಿಸಿ ರೈತರಿಗೆ ನೋಟಿಸು ನೀಡದಂತೆ ಸ್ಪಷ್ಟ ನಿರ್ದೇಶನ ನೀಡಬೇಕು, ನೀರಾವರಿ ಭೂಮಿ ಹೊಂದಿದದವರಿಗೆ ಸರಿಯಾದ ವಿದ್ಯುತ್ ಪೊರೈಕೆಯಾಗುತ್ತಿಲ್ಲ, ಪದೇ ಪದೇ ವಿದ್ಯುತ್ ಕಡಿತವಾಗುವುದು, ಟಿಸಿ ನೀಡುವಾಗ ಅನೇಕ ತೊಂದರೆ ಉಂಟಾಗುತ್ತಿದ್ದು, ಇದನ್ನು ನಿಭಾಯಿಸಲು ವಿದ್ಯುತ್ ಇಲಾಖೆಗೆ ಆದೇಶ ಮಾಡಬೇಕು, ತಾಲೂಕಿನಲ್ಲಿ ಬರಗಾಲ ಕಾಮಗಾರಿ ತೀವ್ರವಾಗಿ ಪ್ರಾರಂಭಿಸಬೇಕು, ಗೋಶಾಲೆ ತೆರೆಯುವುದು, ರೈತರಿಗೆ ಮೇವು ಪೊರೈಕೆಗೆ ತಕ್ಷಣ ಕ್ರಮ ಕೈಗೊಳ್ಳುವುದು, ಸರ್ಕಾರ ಮೇವು ಪೊರೈಕೆಗೆ ವಿಧಿಸಿರುವ ಮೊತ್ತವನ್ನು ಕಡಿತಗೊಳಿಸಬೇಕು, ಎಲ್ಲ ರೈತರಿಗೂ ಎಕರೆಗೆ ₹೧೦ ಸಾವಿರಗಳ ಪರಿಹಾರ ಧನ ದೊರೆಯುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿದರು. ಅಲ್ಲದೆ ಅನೇಕ ವಿಷಯಗಳ ಕುರಿತು ಶೀಘ್ರ ಕ್ರಮವಾಗದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.ಈ ವೇಳೆ ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ, ಯುವ ಮುಖಂಡ ನಾಗರಾಜ ಚಿಂಚಲಿ, ಹೊನ್ನಪ್ಪ ಒಡ್ಡರ, ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ, ಪಿ.ಬಿ. ಖರಾಟೆ ಮಾತನಾಡಿ, ಜಾನುವಾರುಗಳಿಗೆ ನೀರು ಹಾಗೂ ಅಗತ್ಯ ಮೇವು ಸಕಾಲಕ್ಕೆ ದೊರೆಯುವಂತೆ ಸಂಬಂಧಿತ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ರೈತರಿಗೆ ಬೆಳೆ ಪರಿಹಾರ ತ್ವರಿತಗತಿಯಲ್ಲಿ ತಲುಪಿಸಲು ಕ್ರಮ ವಹಿಸಬೇಕೆಂದು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಸಂಖ್ಯಾ ಸಂಗ್ರಹಣ ಅಧಿಕಾರಿ ಬಿ.ಎಸ್. ಪಾಟೀಲ, ತೋಟಗಾರಿಕೆ ಇಲಾಖೆಯ ಅಜರುದ್ದೀನ ಗುಳೇದಗುಡ್ಡ, ಶಿರಸ್ತೇದಾರ ಜೆ.ಆರ್. ಮನಿಯಾರ, ಕೃಷಿ ಇಲಾಖೆಯ ಶಿವಕುಮಾರ ಕಾಶಪ್ಪನವರ, ಟಿಎಚ್‌ಓ ಡಾ ಸುಭಾಸ ದಾಯಗೊಂಡ, ಕೃಷಿ ಅಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ, ಪುರಸಭೆ ವ್ಯವಸ್ಥಾಪಕರಾದ ಮಂಜುಳಾ ಹೂಗಾರ, ಹೆಸ್ಕಾಂ ಇಲಾಖೆ ಬಿ.ಆಂಜನೇಯಪ್ಪ, ತಾಪಂ, ಪಶು ಇಲಾಖೆಯ ಅಧಿಕಾರಿಗಳು ಹಾಗೂ ಅಖಿಲ ಕರ್ನಾಟಕ ಕಿಸಾನ ಜಾಗೃತಿ ಸಂಘ ಜಿಲ್ಲಾ ಗೌರವಾಧ್ಯಕ್ಷ ಟಾಕಪ್ಪ ಸಾತಪುತೆ, ಬಸವರಾಜ ಬೆಂಡಿಗೇರಿ, ನಾಮದೇವ ಮಾಂಡ್ರೆ, ಶಿವನಗೌಡ್ರ ಅಡರಕಟ್ಟಿ, ದ್ಯಾಮಣ್ಣ ಕಮತದ, ಶಂಕರ ಬ್ಯಾಡಗಿ, ಚಂದ್ರು ಮಾಗಡಿ, ನಾಗಪ್ಪ ಓಂಕಾರಿ, ಬಸವರಾಜ ಗೋಡಿ, ಬಸವರಾಜ ಕರೆಯತ್ತಿನ, ಮಲ್ಲೇಶ ಗೊಜಗೊಜಿ, ತಾಲೂಕಿನ ಅನೇಕ ರೈತರ ಇದ್ದರು.