ಪಡಿತರ ವಿತರಣೆ ಗೊಂದಲ ಸರಿಪಡಿಸಲು ಆಗ್ರಹ

KannadaprabhaNewsNetwork |  
Published : Aug 05, 2025, 12:30 AM IST
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಮನವಿ ಸಲ್ಲಿಕೆ | Kannada Prabha

ಸಾರಾಂಶ

ತರೀಕೆರೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತರೀಕೆರೆ ತಾಲೂಕು ಘಟಕದಿಂದ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತರೀಕೆರೆ ತಾಲೂಕು ಘಟಕದಿಂದ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.ತಾಲೂಕಿನ ಆಹಾರ ನಿರೀಕ್ಷಕರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ, ತಾಲೂಕಿನ ಹತ್ತಾರು ಹಿರಿಯ ಜೀವಿಗಳ ಜೊತೆ ಅಟವಾಡುತ್ತಿದ್ದಾರೆ, ಸುಮಾರು 85 ವರ್ಷದ ಮಹಿಳೆಗೆ ಎರಡು ತಿಂಗಳಿನಿಂದ ಪಡಿತರ ವಿತರಣೆ ಮಾಡಿಲ್ಲ. ಕಾರಣ ಕೇಳಿದರೆ ಅವರ ಹೆಬ್ಬೆಟ್ಟು ತೆಗೆದುಕೊಳ್ಳುತ್ತಿಲ್ಲ ಹಾಗಾಗಿ ಕೊಡಲು ಬರುವುದಿಲ್ಲ ಎಂಬ ಮಾತುಗಳನ್ನು ಆಡಿ ಅವರನ್ನು ಕಳುಹಿಸಿದರು. ಆದರೆ ತರೀಕೆರೆ ಪಟ್ಟಣದಲ್ಲಿ ಹತ್ತು ಹಲವು ಇದೇ ತರಹದ ಪ್ರಕರಣಗಳಿದ್ದು ಅವರಿಗೂ ಇದೇ ರೀತಿ ಕಳುಹಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಹಿರಿಯ ನಾಗರಿಕರು ಸರ್ಕಾರದ ಪಡಿತರ ನಂಬಿ ಜೀವನ ನ ಸುತ್ತಿದ್ದು ಈಗ ಅವರ ಜೀವನಕ್ಕೆ ಸಿಲುಕಿದೆ. ದಯಮಾಡಿ ಈ ಅಧಿಕಾರಿಯನ್ನು ಬೇರೆಡೆ ವರ್ಗ ಮಾಡಿಸಿ ಜನಕ್ಕೆ ಸ್ಪಂದಿಸುವ ಅಧಿಕಾರಿಯನ್ನು ನೇಮಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ. ಜಿಲ್ಲಾಧ್ಯಕ್ಷ ಎಚ್. ಗುರುಮೂರ್ತಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದರ್ಶನ್ ಎಂ, ತಾಲೂಕು ಅಧ್ಯಕ್ಷ ಅನಿಲ್. ಚಿಕ್ಕಮಗಳೂರು ಜಿಲ್ಲಾ ನಗರಧ್ಯಕ್ಷ ಧರ್ಮಗೌಡ, ಅಜ್ಜಂಪುರ ತಾಲೂಕು ಅಧ್ಯಕ್ಷ ದೇವರಾಜ್, ಅಜ್ಜಂಪುರ ತಾಲೂಕು ಮಹಿಳಾ ಘಟಕ ಅಧ್ಯಕ್ಷ ನೀಲಾಂಬಿಕ, ತರೀಕೆರೆ ತಾಲೂಕು ಅಧ್ಯಕ್ಷ ನಿಶ್ಚಲ್ ಎಚ್.ಆರ್. ಉಪಾಧ್ಯಕ್ಷ ಶರತ್ ಎನ್. ನಗರಧ್ಯಕ್ಷ ತ್ಯಾಗರಾಜ್, ಕಾರ್ಯದರ್ಶಿ ಅಖಿಲ್, ದುಗ್ಲಾಪುರ ಹೋಬಳಿ ಅಧ್ಯಕ್ಷ ಭರತ್ ಮತ್ತು ಕಿರಣ್ ಕುಮಾರ್, ಶ್ರೀಕಾಂತ್, ಅಭಿಷೇಕ್ ,ಆಕಾಶ್, ಕೃಷ್ಣ, ಸಂಜಯ್, ಚೇತನ್ ಎಮ್ , ಆದರ್ಶ ಟಿ.ಕೆ , ಸಂಜಯ್, ಸಾಗರ್ , ಸಚ್ಚಿನ್, ಏನ್ ಟಿ ಉಮೇಶ್ . ನಂದೀಶ್ ಪದಾಧಿಕಾರಿಗಳು ಉಪಸ್ಥಿತರಿದ್ದರು.-3ಕೆಟಿಆರ್.ಕೆ.1ಃ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ