ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಯಲ್ಲಿ ಎದುರಾಗುವ ಸರ್ವರ್ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಬೇಕೆಂದು ಆಗ್ರಹಿಸಿ ಸವಣೂರ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರು ಗುರುವಾರ ತಹಸೀಲ್ದಾರ್ ಕಾರ್ಯಾಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸವಣೂರು: ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಯಲ್ಲಿ ಎದುರಾಗುವ ಸರ್ವರ್ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಬೇಕೆಂದು ಆಗ್ರಹಿಸಿ ಸವಣೂರ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರು ಗುರುವಾರ ತಹಸೀಲ್ದಾರ್ ಕಾರ್ಯಾಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ೬ ತಿಂಗಳಿಂದ ಪಡಿತರ ವಿತರಣೆ ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಿಂದ ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಪ್ರತಿ ತಿಂಗಳು ೨೦ರಿಂದ ೨೨ನೇ ತಾರೀಖಿಗೆ ನಮಗೆ ಬಿಲ್ ಆಗುತ್ತಿದೆ. ಇದ್ದರಿಂದ ನಮಗೆ ಪಡಿತರ ವಿತರಣೆ ಮಾಡಲು ಸಮಯವು ಸಾಕಾಗುತ್ತಿಲ್ಲಾ ಮತ್ತು ಸರ್ವರ ಸಮಸ್ಯೆ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೧೨ ಗಂಟೆವರೆಗೆ ಪಡಿತರ ವಿತರಣೆ ಮಾಡಿದರು ಸಹ ಕೇವಲ ೨೦ರಿಂದ ೩೦ ಕಾರ್ಡುಗಳಿಗೆ ಪಡಿತರ ವಿತರಣೆಯಾಗುತ್ತವೆ ಆದ್ದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಮತ್ತು ಪಡಿತರ ಚೀಟಿದಾರರಿಗೆ ತಲೆನೋವಾಗಿದೆ.ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ತಿಂಗಳು ಅನ್ನಭಾಗ್ಯ ಅಕ್ಕಿಯನ್ನು ೧೦ನೇ ತಾರೀಖಿನ ಒಳಗಾಗಿ ಎತ್ತುವಳಿ ಮಾಡಲು ಕೋರಿಕೆ. ಪಡಿತರ ವಿತರಣೆಗೆ ಕೇವಲ ೪ ದಿನ ಮಾತ್ರ ಉಳಿದಿದೆ. ಆದ್ದರಿಂದ ಸರ್ವರ ದೋಷವನ್ನು ಸರಿಪಡಿಸಿ ಪಡಿತರ ವಿತರಣೆ ಮಾಡಲು ಅನುಕೂಲ ಮಾಡಬೇಕು. ಒಂದು ವೇಳೆ ಸರ್ವರ್ ಸಮಸ್ಯೆಯನ್ನು ಸರಿಪಡಿಸದಿದ್ದರೆ ಮುಂದಿನ ಆಗುಹೋಗುಗಳಿಗೆ ನಾವು ಜವಾಬ್ದಾರರು ಆಗುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಎನ್.ಎಸ್. ಬಾಣದ, ಎಸ್.ಎಸ್. ಕುರವತ್ತಿ, ಸಿ.ಎನ್. ಕುಂಬಾರ, ದುದ್ದುಸಾಬ ಜಕಾತಿ, ಗುರಪ್ಪ ಸಾಲಿ, ಎಂ.ಎಂ.ಇನಾಮದಾರ, ಬಿ.ಎಸ್.ಪರಣ್ಣವರ, ವಿ.ಬಿ.ತೆಗ್ಗೀಹಳ್ಳಿ, ಪಡಿತರ ವಿತರಕರು, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.