ಸಭೆ ಅರ್ಧಕ್ಕೆ ಎದ್ದು ಹೋದ ಟಿ.ಎಂ. ಶಾಹಿದ್ ತೆಕ್ಕಿಲ್

KannadaprabhaNewsNetwork |  
Published : Nov 27, 2026, 02:00 AM IST
ಶಿಗ್ಗಾಂವಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಮಾತನಾಡಿದರು. | Kannada Prabha

ಸಾರಾಂಶ

ಪೂರ್ಣ ಪ್ರಮಾಣದಲ್ಲಿ ಸಭೆಗೆ ಅಧಿಕಾರಿಗಳು ಬಂದಿಲ್ಲ. ಯಾವುದೇ ಮಾಹಿತಿ ಕೇಳಿದರೂ ಸರಿಯಾದ ಮಾಹಿತಿ ಇಲ್ಲ, ಅಧಿಕಾರಿಗಳ ಹತ್ತಿರ ಪರಸ್ಪರ ಸಂಬಂಧವಿಲ್ಲ. ಅಧಿಕಾರಿಗಳು ತಮ್ಮ ಆಡಳಿತ ನಡೆಸುವಲ್ಲಿ ನಿಷ್ಕೃೀಯರಾಗಿದ್ದಾರೆ ಎಂದು ತಾಲೂಕಿನ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಸಭೆಯ ಅರ್ಧಕ್ಕೆ ಎದ್ದು ಹೋರ ನಡೆದ ಘಟನೆ ನಡೆಯಿತು.

ಶಿಗ್ಗಾಂವಿ: ಪೂರ್ಣ ಪ್ರಮಾಣದಲ್ಲಿ ಸಭೆಗೆ ಅಧಿಕಾರಿಗಳು ಬಂದಿಲ್ಲ. ಯಾವುದೇ ಮಾಹಿತಿ ಕೇಳಿದರೂ ಸರಿಯಾದ ಮಾಹಿತಿ ಇಲ್ಲ, ಅಧಿಕಾರಿಗಳ ಹತ್ತಿರ ಪರಸ್ಪರ ಸಂಬಂಧವಿಲ್ಲ. ಅಧಿಕಾರಿಗಳು ತಮ್ಮ ಆಡಳಿತ ನಡೆಸುವಲ್ಲಿ ನಿಷ್ಕೃೀಯರಾಗಿದ್ದಾರೆ ಎಂದು ತಾಲೂಕಿನ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಸಭೆಯ ಅರ್ಧಕ್ಕೆ ಎದ್ದು ಹೋರ ನಡೆದ ಘಟನೆ ನಡೆಯಿತು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾನು ಬೆಂಗಳೂರಿನಿಂದ ಇಲ್ಲಿನ ಅಧಿಕಾರಿಗಳ ಹತ್ತಿರ ಹಣ(ಹಪ್ತಾ) ವಸೂಲಿಗೆ ಬಂದಿಲ್ಲ. ಕಾರ್ಮಿಕರ ಬದುಕು ಬವಣೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಾಮಾಣಿಕವಾಗಿ ಮಾಹಿತಿ ಪಡೆದು ಪರಿಹಾರ ನೀಡುವ ಉದ್ದೇಶದಿಂದ ಬಂದಿದ್ದೇನೆ. ಆದರೆ ವ್ಯವಸ್ಥಿತವಾಗಿ ಸಭೆ ಆಯೋಜನೆ ಮಾಡಿಲ್ಲ. ಸರಿಯಾದ ಸಮಯಕ್ಕೆ ಎಲ್ಲ ಅಧಿಕಾರಿಗಳು ಬಂದಿಲ್ಲ. ಅನೇಕ ಅಧಿಕಾರಿಗಳು ಸಭೆಗೆ ಗೈರಾಗಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು ಎಂದರು.

ನಾವು ಬರುವುದಾಗಿ ಪೂರ್ವದಲ್ಲಿಯೇ ತಿಳಿಸಿದರೂ ಸಭೆಗೆ ಕೆಲವು ಅಧಿಕಾರಿಗಳು ಬಂದಿಲ್ಲ. ಸಭೆಯನ್ನು ತಾಲೂಕು ಆಡಳಿತ ವ್ಯವಸ್ಥಿತವಾಗಿ ಆಯೋಜಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಂತಹ ಅಧಿಕಾರಿಗಳಿಂದ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಹೇಗೆ ಸಾಧ್ಯವಿದೆ ? ಎಂದು ದೂರಿದರು.

ನಾಡಿನ ಏಳಿಗೆಯಲ್ಲಿ ಕಾರ್ಮಿಕರ ಶ್ರಮವಿದೆ, ಅವರ ಬೆವರಿನ ಹನಿಯಿಂದ ನಾವೆಲ್ಲರೂ ಚೆನ್ನಾಗಿದ್ದೇವೆ. ಅಂತಹ ಕಾರ್ಮಿಕರನ್ನು ದ್ವಿತೀಯ ಪ್ರಜೆಯಾಗಿ ನೋಡಬೇಡಿರಿ. ಕಾರ್ಮಿಕರಿದ್ದರೆ ಮಾತ್ರ ಪ್ರತಿ ರಂಗಗಳು ಬೆಳವಣಿಗೆಯಾಗುತ್ತವೆ. ಶ್ರಮ ವಹಿಸಿ ದುಡಿಯುವ ಕಾರ್ಮಿಕರಿಗೆ ತಮ್ಮ ಅಧಿಕಾರದ ಅವಧಿಯಲ್ಲಿ ಸ್ವಲ್ಪ ಮಾನವೀಯತೆ ತೋರಿರಿ. ಸರ್ಕಾರ ಅವರಿಗೆ ನೀಡುವ ಸೌಲಭ್ಯಗಳನ್ನು ಅರ್ಹ ಕಾರ್ಮಿಕರಿಗೆ ಪ್ರಾಮಾಣಿಕವಾಗಿ ತಲುಪಿಸಿರಿ. ಅಲ್ಲದೆ ಸರಕಾರದ ಹೊಸ ಯೋಜನೆಗಳ ಕುರಿತು ಕಾರ್ಮಿಕರಿಗೆ ಮಾಹಿತಿ ನೀಡಿರಿ. ಅದರಿಂದ ಇನ್ನಷ್ಟು ಪ್ರಯೋಜನಗಳನ್ನು ಪಡೆಯಲು ಅನುಕೂಲವಾಗುತ್ತಿದೆ ಎಂದು ಸಲಹೆ ನೀಡಿದರು.

ತಾಲೂಕಿನ ಮಹಿಳಾ ಗಾರ್ಮೆಂಟ್, ಫ್ಯಾಕ್ಟರಿಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಾಹಿತಿಯನ್ನು ತಕ್ಷಣ ತಲುಪಿಸಿರಿ. ಬಾಲಕಾರ್ಮಿಕರ ಕುರಿತು ಮಾಹಿತಿ ನೀಡಿರಿ. ಕಾರ್ಮಿಕರ ಮಕ್ಕಳ ಶಿಕ್ಷಣ ನೀಡುವ ಕುರಿತು ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸವಣೂರ ಉಪವಿಭಾಗಾಧಿಕಾರಿ ಪ್ರಕಾಶ ಕೋಡೆ, ತಾ.ಪಂ. ಇಒ ಮಂಜುನಾಥ ಸಾಳೋಂಕಿ, ಸಿಡಿಪಿಒ ಗಣೇಶಗೌಡ ಲಿಂಗನಗೌಡ, ಅರಣ್ಯ ಇಲಾಖೆ ಅಧಿಕಾರಿ ಪಂಚಾಕ್ಷರಯ್ಯ ತೆಗ್ಗಿಹಳ್ಳಿ, ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ, ಆರೋಗ್ಯ ಇಲಾಖೆ ತಾಲೂಕು ವೈದ್ಯಾಧಿಕಾರಿ ಸತೀಶ, ಶಿಕ್ಷಣ ಇಲಾಖೆಯ ನಾಗಪ್ಪ ಬೆಂತೂರ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂವಿಧಾನ ಆಶಯಗಳ ಅರಿತು ಪಾಲಿಸುವುದು ಪ್ರತಿ ಪ್ರಜೆಯ ಕರ್ತವ್ಯ-ನಾಗರಾಜ
ಸಂವಿಧಾನ ದೇಶದ ಸರ್ವೋಚ್ಚ ಕಾನೂನು: ಪ್ರೊ. ರಾಬರ್ಟ್ ಜೋಸ್