ಆಲೂರು ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಒತ್ತಾಯ

KannadaprabhaNewsNetwork |  
Published : Sep 05, 2026, 01:45 AM IST
4ಎಚ್ಎಸ್ಎನ್7 :  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಆಲೂರು ತಾಲೂಕನ್ನು ಸೇರ್ಪಡಿಸಿಲ್ಲ. ಇದರಿಂದ ಬರ ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರದ ಬರ ಪಟ್ಟಿಯಿಂದ ಬರಸಿಡಿಲು ಬಡಿದಂತಾಗಿದೆ. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಬೆಳೆಗಳಿಗೆ ಅಗತ್ಯ ನೀರು ದೊರೆಯದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು.

ಕನ್ನಡಪ್ರಭ ವಾರ್ತೆ ಆಲೂರುಸರ್ಕಾರದ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಆಲೂರು ತಾಲೂಕನ್ನು ಕೈಬಿಡಲಾಗಿದೆ. ಆದರೆ, ಆಲೂರು ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಕಾಫಿ ಬೆಳೆಯೇ ನಾಶವಾಗಿದೆ. ಹಾಗಾಗಿ ಈ ತಾಲೂಕನ್ನು ಬರ ಪಟ್ಟಿಗೆ ಸೇರಿಸುವಂತೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಕೇಶವ ಒತ್ತಾಯಿಸಿದರು. ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ನಮ್ಮ ಭಾಗದಲ್ಲಿ ಈ ವರ್ಷ ಅತಿ ಉಷ್ಣತೆಯಿಂದ ಕಾಫಿ ಹಾಗೂ ಕಾಳು ಮೆಣಸುಗಳು ಒಣಗಿದ್ದು ಬೆಳೆ ಸಂಪೂರ್ಣ ನಾಶವಾಗಿದೆ. ಪ್ರತಿವರ್ಷದಂತೆ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಉತ್ತಮ ಪಸಲು ದೊರೆಯುತ್ತಿತ್ತು. ಆದರೆ ಈ ಬಾರಿ ಮಳೆ ಇಲ್ಲದೆ ಇರುವ ಕಾರಣ ಕೆರೆ ಕಟ್ಟೆಗಳಿಗೂ ನೀರಿಲ್ಲದೆ ರೈತರು ಕಂಗಲಾಗಿದ್ದು, ಕೊಡಲೇ ಸರ್ಕಾರ ಆಲೂರು ತಾಲೂಕನ್ನು ಬರ ಪಟ್ಟಿಗೆ ಸೇರಿಸುವಂತೆ ಒತ್ತಾಯ ಮಾಡಿದರು.

ರಾಜ್ಯ ಸರ್ಕಾರದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಆಲೂರು ತಾಲೂಕನ್ನು ಸೇರ್ಪಡಿಸಿಲ್ಲ. ಇದರಿಂದ ಬರ ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರದ ಬರ ಪಟ್ಟಿಯಿಂದ ಬರಸಿಡಿಲು ಬಡಿದಂತಾಗಿದೆ. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಬೆಳೆಗಳಿಗೆ ಅಗತ್ಯ ನೀರು ದೊರೆಯದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು.

ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಕಾಫಿ ಬೆಳೆಗೆ ಕೊಳೆರೋಗ ವ್ಯಾಪಕವಾಗಿ ಹರಡಿದೆ. ಇದರಿಂದ ಕಾಫಿ ಕಾಯಿಗಳು ಕೊಳೆತು ಉದುರುತ್ತಿದೆ. ಈ ಅನಿರೀಕ್ಷಿತ ರೋಗದಿಂದ ಶೇ. 40-50ರಷ್ಟು ಬೆಳೆ ನಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರು ಸರ್ಕಾರದ ಬರ ಪಟ್ಟಿಗೆ ಸೇರಿಸಿ ಪರಿಹಾರಕ್ಕಾಗಿ ಆಗ್ರಹಿಸಿದರು. ಕಾಫಿ ಗಿಡಗಳೇ ಒಣಗುತ್ತಿವೆ

ಪ್ರತಿ ವರ್ಷದ ಮಳೆಗಿಂತ ಅರ್ಧದಷ್ಟು ಮಳೆಗೆ ಕಾಫಿ ಕೊಳೆರೋಗ ಬಂದಿರುವುದು ಬೆಳೆಗಾರರಿಗೆ ಅಚ್ಚರಿ ಮತ್ತು ಆತಂಕ ಮೂಡಿಸಿದೆ. ಕಾಫಿ ಬೀಜಗಳು ಇನ್ನೂ ಬಲಿಯುವ ಮುನ್ನವೇ ಗಿಡಗಳಲ್ಲಿಯೇ ಕೊಳೆತು ಉದುರಲಾಂಭಿಸಿದೆ. ಬಹುತೇಕ ಗಿಡಗಳಲ್ಲಿ ಕಾಫಿ ಉದುರಿ ಹೋಗಿ ಬರೀ ಗಿಡಗಳಷ್ಟೇ ಉಳಿದಿವೆ. ಇನ್ನು ಕೆಲವು ಗಿಡಗಳಲ್ಲಿ ಎಲೆಗಳ ಸಹಿತ ಉದುರಿ ಹೋಗಿ ಗಿಡಗಳೇ ಒಣಗಿ ಹೋಗುತ್ತಿವೆ. ಶೇಕಡ 40ರಿಂದ 50ರಷ್ಟು ಕಾಫಿ ಕಾಯಿಗಳು ಕರಗಿ ಉದುರಿ ಹೋಗಿದ್ದು ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತೆ ಆಗಿದೆ.ಕಾಫಿ ಬೆಳೆಗಾರರಿಗೆ ಭಾರೀ ನಷ್ಟ:

ಆಲೂರು ಸಕಲೇಶಪುರ ತಾಲೂಕುಗಳಲ್ಲಿ ಇಂದಿಗೂ ಬಿಟ್ಟು ಬಿಟ್ಟು ಮಳೆ ಸುರಿಯುತ್ತಲೇ ಇದೆ. ಇದರಿಂದ ಕಾಫಿ ಕಾಯಿ ಇನ್ನಷ್ಟು ಉದುರಲು ಕಾರಣವಾಗುತ್ತಿದೆ. ಇದೇ ರೀತಿ ಕಾಫಿ ಉದುರಿರುವುದರಿಂದ ಎಕರೆಗೆ 15ರಿಂದ 20 ಚೀಲ ನಷ್ಟವಾಗುವ ಆತಂಕ ಎದುರಾಗಿದೆ. ಇದೇ ಮುಂದುವರಿದರೆ ಬೆಳೆಗಾರರು ದೊಡ್ಡ ನಷ್ಟ ಅನುಭವಿಸಿ ಕಾರ್ಮಿಕರಿಗೆ ಕೂಲಿ ಕೊಡುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ. ಮತ್ತೊಂದೆಡೆ ಕಾಫಿ ಗಿಡಗಳೇ ಒಣಗಿ ಹೋಗುತ್ತಿದ್ದು, 15ರಿಂದ 20 ವರ್ಷಗಳಿಂದ ಬೆಳೆದಿದ್ದ ಗಿಡಗಳು ಒಣಗಿ ಹೋದಲ್ಲಿ ಮತ್ತೆ ಹೊಸದಾಗಿ ಗಿಡನೆಟ್ಟು ಬೆಳೆಯಬೇಕಾದರೆ ಮೂರರಿಂದ ನಾಲ್ಕು ವರ್ಷಗಳೇ ಹಿಡಿಯಲಿವೆ. ಇಷ್ಟೆಲ್ಲಾ ಸಮಸ್ಯೆ ಎದುರಾಗಿದ್ದು ಸರ್ಕಾರಗಳು ಮಾತ್ರ ಯಾವುದೇ ಪರಿಹಾರ ಒದಿಗಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ ಎಂದು ಕಾಫಿ ಬೆಳೆಗಾರ ಅಸಮಾಧಾನ ಹೊರಹಾಕಿದ್ದಾರೆ.ಪತ್ರಿಕಗೋಷ್ಠಿಯಲ್ಲಿ ಹೊಸಕೋಟೆ ಹೋಬಳಿ ತಾಲೂಕು ಅಧ್ಯಕ್ಷ ಸದಾನಂದ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತ ಕುಮಾರ್‌ ಉಪಸ್ಥಿತರಿದ್ದರು.

=====

ಹೇಳಿಕೆ1

ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದೊಳಗೆ ಉತ್ತಮವಾಗಿ ಮಳೆ ಸುರಿಯುತಿತ್ತು. ಆದರೂ ಕಾಫಿಗೆ ಅಷ್ಟೊಂದು ಕೊಳೆರೋಗ ಬಾಧಿಸಿರಲಿಲ್ಲ. ಈ ಬಾರಿ ಇದುವರೆಗೆ ಜಿಲ್ಲೆಯಲ್ಲಿ ಮಳೆ ಸುರಿದಿದ್ದೇ ಕೇವಲ ಕಡಿಮೆ, ಅದಾಗಲೇ ಸಕಲೇಶಪುರ ಆಲೂರು ತಾಲೂಕಿನ ಬಹುತೇಕ ಭಾಗಗಳಲ್ಲಿ ಕೆಲಭಾಗಗಳಲ್ಲಿ ಕಾಫಿಗೆ ಕೊಳೆರೋಗ ಎದುರಾಗಿದೆ. -ಚಿಕ್ಕೋಟೆ ಮಹೇಶ್, ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ

---------------

ಫೋಟೋ ಪ್ಯಾನಲ್‌

ಪತ್ರಿಕಾಗೋಷ್ಠಿಯಲ್ಲಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಕೇಶವ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಒಪಿ ರಾಸಾಯನಿಕ ಮಿಶ್ರಿತ ಬಣ್ಣದ ಗಣಪತಿ ಮಾರಾಟ ನಿಷೇಧ
ಬಿಸಲವಾಡಿ ಗ್ರಾಮದಲ್ಲಿ ನೂತನ ಶ್ರೀರಾಮ ಮಂದಿರ ಉದ್ಘಾಟನೆ