ಕೀಟಗಳ ಸಮಗ್ರ ನಿರ್ವಹಣೆ ಕುರಿತು ರೈತರಿಗೆ ತರಬೇತಿ

KannadaprabhaNewsNetwork |  
Published : Sep 05, 2026, 01:45 AM IST
4ಎಚ್ಎಸ್ಎನ್6 :  | Kannada Prabha

ಸಾರಾಂಶ

ತೆಂಗಿನ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳು, ಅವುಗಳ ಹಾನಿಯ ಲಕ್ಷಣಗಳು ಹಾಗೂ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ೪ನೇ ವರ್ಷದ ಬಿ.ಎಸ್ಸಿ. ಕೃಷಿ ವಿದ್ಯಾರ್ಥಿನಿ ಚಿತ್ರಾ ಎಲ್. ಅವರು ಚೌಡೇನಹಳ್ಳಿ ಭಾಗದಲ್ಲಿ ತೆಂಗಿನ ಬೆಳೆಗೆ ಪ್ರಮುಖವಾಗಿ ಬಾಧಿಸುತ್ತಿರುವ ಕಪ್ಪು ಮೂತಿ ಜೀರುಂಡೆ, ಕೆಂಪು ಮೂತಿ ತಾಳೆ ಹುಳು, ಮೈಟ್ಸ್ /ನುಸಿ ಹಾಗೂ ಬಿಳಿನೊಣ ಮುಂತಾದ ಕೀಟಗಳ ಕುರಿತು ವಿವರಿಸಿದರು. ಕೀಟಬಾಧೆಯಿಂದ ತೆಂಗಿನ ಮರಗಳಲ್ಲಿ ಕಂಡುಬರುವ ಲಕ್ಷಣಗಳನ್ನು ಪವರ್‌ಪಾಯಿಂಟ್ ಪ್ರಸ್ತುತಿ ಹಾಗೂ ಕೀಟಬಾಧಿತ ಜೀವಂತ ಮಾದರಿಗಳ ಮೂಲಕ ರೈತರಿಗೆ ಪ್ರಾಯೋಗಿಕವಾಗಿ ತಿಳಿಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ದಂಡಿಗನಹಳ್ಳಿ ಹೋಬಳಿಯ ಚೌಡೇನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ೨೦೨೬-೨೭ರ ಅಂಗವಾಗಿ ಹಾಸನ ಕೃಷಿ ಕಾಲೇಜಿನ ವಿದ್ಯಾರ್ಥಿಗಳಿಂದ ತೆಂಗಿನ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ ೨ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹಾಸನ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೌಮ್ಯ ಇ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತೆಂಗಿನ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳು, ಅವುಗಳ ಹಾನಿಯ ಲಕ್ಷಣಗಳು ಹಾಗೂ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ೪ನೇ ವರ್ಷದ ಬಿ.ಎಸ್ಸಿ. ಕೃಷಿ ವಿದ್ಯಾರ್ಥಿನಿ ಚಿತ್ರಾ ಎಲ್. ಅವರು ಚೌಡೇನಹಳ್ಳಿ ಭಾಗದಲ್ಲಿ ತೆಂಗಿನ ಬೆಳೆಗೆ ಪ್ರಮುಖವಾಗಿ ಬಾಧಿಸುತ್ತಿರುವ ಕಪ್ಪು ಮೂತಿ ಜೀರುಂಡೆ, ಕೆಂಪು ಮೂತಿ ತಾಳೆ ಹುಳು, ಮೈಟ್ಸ್ /ನುಸಿ ಹಾಗೂ ಬಿಳಿನೊಣ ಮುಂತಾದ ಕೀಟಗಳ ಕುರಿತು ವಿವರಿಸಿದರು. ಕೀಟಬಾಧೆಯಿಂದ ತೆಂಗಿನ ಮರಗಳಲ್ಲಿ ಕಂಡುಬರುವ ಲಕ್ಷಣಗಳನ್ನು ಪವರ್‌ಪಾಯಿಂಟ್ ಪ್ರಸ್ತುತಿ ಹಾಗೂ ಕೀಟಬಾಧಿತ ಜೀವಂತ ಮಾದರಿಗಳ ಮೂಲಕ ರೈತರಿಗೆ ಪ್ರಾಯೋಗಿಕವಾಗಿ ತಿಳಿಸಲಾಯಿತು.

ಇದೇ ಸಂದರ್ಭದಲ್ಲಿ ತೆಂಗಿನಲ್ಲಿ ಸಾಮಾನ್ಯವಾಗಿ ‘ನುಸಿ ರೋಗ’ ಎಂದು ಕರೆಯಲಾಗುವ ಸಮಸ್ಯೆಯ ಕುರಿತು ರೈತರಲ್ಲಿದ್ದ ತಪ್ಪು ಕಲ್ಪನೆಯನ್ನು ನಿವಾರಿಸಲಾಯಿತು. ಇದು ವಾಸ್ತವವಾಗಿ ಯಾವುದೇ ರೋಗವಲ್ಲ; ಎರಿಯೊಫಿಡ್ ಮೈಟ್ ಎಂಬ ಅತಿ ಸೂಕ್ಷ್ಮ ಕೀಟದಿಂದ ಉಂಟಾಗುವ ಹಾನಿಯಾಗಿದೆ ಎಂದು ರೈತರಿಗೆ ಸ್ಪಷ್ಟವಾಗಿ ತಿಳಿಸಲಾಯಿತು. ಈ ಮೈಟ್‌ಗಳು ಬರಿಗಣ್ಣಿಗೆ ಕಾಣಿಸುವುದಿಲ್ಲ ಹಾಗೂ ಸೂಕ್ಷ್ಮದರ್ಶಕದ ಮೂಲಕ ಮಾತ್ರ ಸ್ಪ?ವಾಗಿ ಗುರುತಿಸಬಹುದಾಗಿದೆ ಎಂದು ವಿವರಿಸಲಾಯಿತು. ಹೀಗಾಗಿ ಸಮಸ್ಯೆಯ ನಿಖರ ಕಾರಣವನ್ನು ಗುರುತಿಸಿ ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳುವಂತೆ ರೈತರಿಗೆ ಸಲಹೆ ನೀಡಲಾಯಿತು.ತೆಂಗಿನ ಕೀಟಗಳ ನಿಯಂತ್ರಣದಲ್ಲಿ ಸಾಂಸ್ಕೃತಿಕ, ಯಾಂತ್ರಿಕ, ಜೈವಿಕ ಹಾಗೂ ರಾಸಾಯನಿಕ ನಿರ್ವಹಣಾ ಕ್ರಮಗಳನ್ನು ಸಮನ್ವಯಗೊಳಿಸಿ ಬಳಸುವಂತೆ ತಿಳಿಸಲಾಯಿತು. ಸಾಧ್ಯವಾದಷ್ಟು ಜೈವಿಕ ಹಾಗೂ ಪರಿಸರ ಸ್ನೇಹಿ ವಿಧಾನಗಳಿಗೆ ಆದ್ಯತೆ ನೀಡಬೇಕು ಮತ್ತು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕೀಟಬಾಧೆ ತೀವ್ರವಾಗಿರುವ ಸಂದರ್ಭಗಳಲ್ಲಿ ಮಾತ್ರ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಯಿತು. ರಾಸಾಯನಿಕ ನಿಯಂತ್ರಣ ಅಗತ್ಯವಾದ ಸಂದರ್ಭದಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮುಂತಾದ ಅಧಿಕೃತ ಸಂಸ್ಥೆಗಳು ಶಿಫಾರಸು ಮಾಡಿರುವ ಕೀಟನಾಶಕಗಳನ್ನು ಮಾತ್ರ ಶಿಫಾರಸು ಮಾಡಿದ ಪ್ರಮಾಣದಲ್ಲಿ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಬಳಸುವಂತೆ ರೈತರಿಗೆ ಸೂಚಿಸಲಾಯಿತು.

ತರಬೇತಿಯ ವೇಳೆ ರೈತರು ತಮ್ಮ ತೋಟಗಳಲ್ಲಿ ಕಂಡುಬರುವ ಕೀಟಬಾಧೆ ಹಾಗೂ ನಿರ್ವಹಣಾ ಕ್ರಮಗಳ ಕುರಿತು ವಿವಿಧ ಪ್ರಶ್ನೆಗಳನ್ನು ಕೇಳಿದರು. ಸಂಪನ್ಮೂಲ ವ್ಯಕ್ತಿ ಡಾ. ಸೌಮ್ಯ ಇ. ಅವರು ರೈತರ ಸಂದೇಹಗಳನ್ನು ನಿವಾರಿಸಿ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿ ತೆಂಗಿನ ಬೆಳೆಯ ಕೀಟಗಳ ಗುರುತಿಸುವಿಕೆ ಮತ್ತು ನಿರ್ವಹಣೆಯ ಕುರಿತು ಉಪಯುಕ್ತ ತಾಂತ್ರಿಕ ಮಾಹಿತಿಯನ್ನು ಪಡೆದುಕೊಂಡರು. ಕೀಟವನ್ನು ಸರಿಯಾಗಿ ಗುರುತಿಸಿ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳುವುದರಿಂದ ತೆಂಗಿನ ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೂ ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ರೈತರಿಗೆ ನೀಡಲಾಯಿತು.-----

ಫೋಟೋ:

ಚೌಡೇನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ೨೦೨೬-೨೭ರ ಅಂಗವಾಗಿ ಹಾಸನ ಕೃಷಿ ಕಾಲೇಜಿನ ವಿದ್ಯಾರ್ಥಿಗಳಿಂದ ತರಬೇತಿ ಆಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಒಪಿ ರಾಸಾಯನಿಕ ಮಿಶ್ರಿತ ಬಣ್ಣದ ಗಣಪತಿ ಮಾರಾಟ ನಿಷೇಧ
ಬಿಸಲವಾಡಿ ಗ್ರಾಮದಲ್ಲಿ ನೂತನ ಶ್ರೀರಾಮ ಮಂದಿರ ಉದ್ಘಾಟನೆ