ಹಾನಗಲ್ಲ: ಬಾಳಂಬೀಡ ಏತ ನೀರಾವರಿ ಕಾಮಗಾರಿ ಕಳಪೆಯಾಗಿದ್ದು ತನಿಖೆಗೊಳಪಡಿಸಬೇಕು, ಸರ್ಕಾರಿ ಕೆರೆ ರಾಜಕಾಲುವೆಗಳ ಅತಿಕ್ರಮಣ ತೆರವುಗೊಳಿಸಬೇಕು, ಸರ್ಕಾರಿ ದಾರಿ ಅತಿಕ್ರಮಣ ತೆರವುಗೊಳಿಸಬೇಕು ಎಂದು ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ತಾಲೂಕು ತಹಸೀಲ್ದಾರ್‌ರಿಗೆ ಒತ್ತಾಯಿಸಿದೆ.
ಅಲ್ಲದೆ ತಾಲೂಕಿನಲ್ಲಿರುವ ಅತಿಕ್ರಮಣಗೊಂಡು ಕೆರೆಗಳು ಹಾಗೂ ಸರ್ಕಾರಿ ರಸ್ತೆಗಳನ್ನು ತೆರವುಗೊಳಿಸಬೇಕು. ಈ ಕೆರೆಗಳ ಒತ್ತುವರಿ ಹಾಗೂ ರಸ್ತೆಗಳ ಅತಿಕ್ರಮಣದಿಂದ ರೈತರು ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದು, ಕೂಡಲೇ ರೈತರನ ಅನುಕೂಲಕ್ಕಾಗಿ ಈ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಪಾಟೀಲ, ತಾಲೂಕು ಅಧ್ಯಕ್ಷ ಮಹರುದ್ರಪ್ಪ ಕೂಸನೂರ, ತಾಲೂಕು ಮಹಿಳಾ ಅಧ್ಯಕ್ಷೆ ಶೀಲಾ ಭದ್ರಾವತಿ, ನಸೀಮಾಬಾನು ಲೋಹಾರ, ಖುರ್ಷಿದ ಕಬ್ಬೂರ, ಮಾಲಿಂಗಪ್ಪ ಬಿದರಮಳಿ, ಪುಷ್ಪಾ ಅಗಸೀಬಾಗಿಲು, ತೌಸಿಫ್ ಹಸನಾಬಾದಿ, ಚನ್ನಬಸಯ್ಯ ದೊಡ್ಡಕಂತಿಮಠ, ಬಸವಣ್ಣಪ್ಪ ಬಸಾಪುರ, ರಾಜಣ್ಣ ಕುದರೀಹಾಳ ಮೊದಲಾದವರು ಈ ಸಂದರ್ಭದಲ್ಲಿದ್ದರು.