ಮಂಜೂರಾದ ನಿವೇಶನಗಳಿಗೆ ಹಕ್ಕುಪತ್ರ ನೀಡಲು ಆಗ್ರಹ

KannadaprabhaNewsNetwork |  
Published : Jul 24, 2025, 12:52 AM IST
ತಾಲೂಕಿನ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ಮಂಜೂರಾದ ನಿವೇಶನಗಳ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರಾಷ್ಟ್ರೀಯ ಕಿಸಾನ್‌ ಸಂಘದ ಮಹಿಳಾ ಘಟಕದ ಸಂಚಾಲಕಿ ಎಚ್‌,ಕೆ ಚಂದ್ರಕಲಾ ನೇತೃತ್ವದಲ್ಲಿ ತಹಸೀಲ್ದಾರರವರಿಗೆ ಮನವಿ ನೀಡಲಾಯಿತು.  | Kannada Prabha

ಸಾರಾಂಶ

ನ್ಯಾಮತಿ: ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿ ಕಾರ್ಮಿಕರಿಗೆ ಹಾಗೂ ಸಣ್ಣ ಕೃಷಿಕರಿಗೆ ಆಶ್ರಯ ಯೋಜನೆಯಲ್ಲಿ ಮಂಜೂರು ಮಾಡಿದ್ದ ಖಾಲಿ ನಿವೇಶನಗಳ ವಿಚಾರವಾಗಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಕಿಸಾನ್‌ ಸಂಘದ ಮಹಿಳಾ ಘಟಕ ತಹಸೀಲ್ದಾರ್‌ರವರಿಗೆ ಮನವಿ ನೀಡಿದೆ.

ಕಿಸಾನ್‌ ಸಂಘ ಮನವಿನ್ಯಾಮತಿ: ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿ ಕಾರ್ಮಿಕರಿಗೆ ಹಾಗೂ ಸಣ್ಣ ಕೃಷಿಕರಿಗೆ ಆಶ್ರಯ ಯೋಜನೆಯಲ್ಲಿ ಮಂಜೂರು ಮಾಡಿದ್ದ ಖಾಲಿ ನಿವೇಶನಗಳ ವಿಚಾರವಾಗಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಕಿಸಾನ್‌ ಸಂಘದ ಮಹಿಳಾ ಘಟಕ ತಹಸೀಲ್ದಾರ್‌ರವರಿಗೆ ಮನವಿ ನೀಡಿದೆ.

ತಾಲೂಕಿನ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕೂಲಿ ಕಾರ್ಮಿಕರಿಗೆ ಮತ್ತು ಸಣ್ಣ ಕೃಷಿಕರಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಿದ್ದು ಇತ್ತೀಚೆಗೆ ಕೆಲವರಿಂದ ಗೊಂದಲ ಸೃಷ್ಠಿಯಾಗಿ ಫಲಾನುಭವಿಗಳು ಆತಂಕ ಪಟ್ಟಿದ್ದರು. ಇದನ್ನು ಪರಿಗಣಿಸಿದ ರಾಷ್ಟ್ರೀಯ ಕಿಸಾನ್‌ ಸಂಘದ ಮಹಿಳಾ ಘಟಕವು ಗೊಂದಲಕ್ಕೆ ತೆರೆ ಎಳೆಯುವಂತೆ ಒತ್ತಾಯಿಸಿ ಮಹಿಳಾ ಘಟಕದ ಸಂಚಾಲಕಿ ಎಚ್‌.ಕೆ.ಚಂದ್ರಕಲಾ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗೆ ಮನವಿ ನೀಡಿ, ತಾಲೂಕಿನ ತಹಸೀಲ್ದಾರ್‌ರವರಿಗೂ ಮನವಿ ಸಲ್ಲಿಸಿದರು.

ಈ ವೇಳೆ ರಾಷ್ಟ್ರೀಯ ಕಿಸಾನ್‌ ಸಂಘದ ಮಹಿಳಾ ಘಟಕದ ಸಂಚಾಲಕಿ ಎಚ್‌.ಕೆ.ಚಂದ್ರಕಲಾ ಮಾತನಾಡಿ, ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ 1991-92ನೇ ಸಾಲಿನಲ್ಲಿ 103 ಫಲಾನುಭವಿಗಳಿಗೆ ಕ್ರಮಬದ್ದವಾಗಿ ವಸತಿ ರಹಿತರಿಗೆ ನಿವೇಶನವನ್ನು ಹಂಚಿಕೆ ಮಾಡಿದೆ ಆದರೆ ಖಾತೆ ಹಾಗೂ ನಿವೇಶನ ರಹಿತ ಸಂಖ್ಯೆ ವಸತಿ ಮಂಜೂರು ಮಾಡದ ಕಾರಣ ಮನೆಗಳನ್ನು ನಿರ್ಮಾಣ ಮಾಡಲಾಗಿಲ್ಲ ಎಂದರು.

ಗೌಡ್ರ ಶಾಂತರಾಜ್‌, ಯಶೋಧ, ನೇತ್ರಾವತಿ, ಜ್ಯೋತಿ, ದಾಕ್ಷಾಯಣಮ್ಮ, ಬಸವರಾಜ್‌ ಗುಂಡೋಳ್‌, ಶಂಭು, ಷಡಾಕ್ಷರಪ್ಪ, ಗದ್ದಿಗಪ್ಪ, ನಂಜುಡಪ್ಪ ಮತ್ತಿತರರು ಇದ್ದರು.ಚಿತ್ರ: ನ್ಯಾಮತಿಯ ನಿವೇಶನಗಳಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ರಾಷ್ಟ್ರೀಯ ಕಿಸಾನ್‌ ಸಂಘದ ಮಹಿಳಾ ಘಟಕದ ಸಂಚಾಲಕಿ ಎಚ್‌,ಕೆ ಚಂದ್ರಕಲಾ ನೇತೃತ್ವದಲ್ಲಿ ತಹಸೀಲ್ದಾರ್‌ಗೆ ಮನವಿ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''