ವಚನಗಳಲ್ಲಿ ಸಹಾನುಭೂತಿಯ ಚಿಂತನೆ ಇದೆ

KannadaprabhaNewsNetwork |  
Published : Jul 24, 2025, 12:51 AM IST
39 | Kannada Prabha

ಸಾರಾಂಶ

ಯುವ ಜನತೆ ವಚನಗಳನ್ನು ಓದಿ, ಅವುಗಳಲ್ಲಿನ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರುವಚನಕಾರರು ವಚನಗಳ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ಬಿತ್ತರಿಸಿ, ಜೀವನಕ್ಕೆ ನೀತಿ ಸಂಹಿತೆ ಹಾಕಿಕೊಟ್ಟು, ಸಮಾನತೆ, ಸಹಬಾಳ್ವೆ, ಭ್ರಾತೃತ್ವ, ಸಹಾನುಭೂತಿ ಚಿಂತನೆಗಳನ್ನು ಸಾರಿದ್ದಾರೆ ಎಂದು ಕೆ.ಆರ್‌. ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಎ.ವಿ.ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್ತು ಮೈಸೂರು ಘಟಕ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಡಾ.ಫ.ಗು.ಹಳಕಟ್ಟಿಯವರ ಜಯಂತಿ ಪ್ರಯುಕ್ತ ಬದುಕು ಬರಹ ಎಂಬ ವಿಷಯ ಕುರಿತು ಬುಧವಾರ ಅಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯುವ ಜನತೆ ವಚನಗಳನ್ನು ಓದಿ, ಅವುಗಳಲ್ಲಿನ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು. ಡಾ.ಫ.ಗು.ಹಳಕಟ್ಟಿ ಪತ್ರಿಕೋದ್ಯಮ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.ದಯೆ, ಪ್ರೀತಿ, ಅನುಕಂಪ, ಮಾನವೀಯ ಮೌಲ್ಯಗಳ ಸಂದೇಶಗಳು ವಚನಗಳಲ್ಲಿ ಇವೆ. ವಚನಗಳ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.ಕನ್ನಡ ಮತ್ತು ಕರ್ನಾಟಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಫ.ಗು. ಹಳಕಟ್ಟಿ ಅಂತಹ ಮಹಾನ್ ವ್ಯಕ್ತಿಗಳಿಂದ ಕನ್ನಡ ಉನ್ನತ್ತ ಮಟ್ಟಕೆ ಏರಿದೆ. ಮೂಲ ಸಾಮಾಗ್ರಿ ಇಲ್ಲದೇ ಸಾಹಿತ್ಯವನ್ನು ರೂಪಿಸುವುದಕ್ಕೆ ಆಗುವುದಿಲ್ಲ. ಇಂದು ಬುದ್ದಿವಂತರು ಹೆಚ್ಚಾಗಿದ್ದು, ದೇಶದ ಸಮಸ್ಯೆ ಕೂಡ ಅಷ್ಟೇ ಹೆಚ್ಚಾಗಿದೆ. ವಚನಗಳನ್ನು ನಾವೆಲ್ಲ ಭುವನದ ಭಾಗ್ಯ ಎನ್ನಲಾಗುತ್ತದೆ. ಪ್ರಾಣಕ್ಕಿಂತ ದೊಡ್ಡದು ವಚನಗಳು. ಏಕೆಂದರೆ ವಚನಗಳು ಶಿವನ ತತ್ವಗಳು. ಒಂದು ತ್ಯಾಗಮಯ ಜೀವನವನ್ನು ವಚನ, ಸಾಹಿತ್ಯ ಸಂರಕ್ಷಣೆಗಾಗಿ ಯಾರಾದರೂ ಒಂದು ತಪಸ್ಸಿನ ರೀತಿಯಲ್ಲಿಸ ಗಂಧದ ರೀತಿಯಲ್ಲಿ ಸವೆಸಿದ್ದಾರೆ ಎಂದರೆ ಅದು ಡಾ.ಫ.ಗು. ಹಳಕಟ್ಟಿ ಅವರು ಎಂದು ಅವರು ತಿಳಿಸಿದರು.ವಚನಕಾರರು ಜನಮಾನಸದಲ್ಲಿ ಬೆರೆತು ವಚನಗಳನ್ನು ರಚಿಸಿದ್ದಾರೆ. ವಚನಗಳ ನಾಲ್ಕು ಸಾಲುಗಳಲ್ಲಿ ಅಪಾರ ಅರ್ಥವನ್ನು ಒಳಗೊಂಡಿರುತ್ತವೆ. ನಾವು ವಚನ ಆಳವಾಗಿ ಅಧ್ಯಯನ ಮಾಡಿ ಅವುಗಳ ಅರ್ಥ ತಿಳಿದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ನಗರದ ನಿಕಟಪೂರ್ವ ಅಧ್ಯಕ್ಷ ಮ.ಗು. ಸದಾನಂದಯ್ಯ, ಉಪಾಧ್ಯಕ್ಷ ಎಂ. ಚಿನ್ನಸ್ವಾಮಿ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ಮಲ್ಲಿಕಾರ್ಜುನ ಸಮಂತ್ರಿ, ಕೆ.ಎಸ್. ಮೋಹನ್ ಕುಮಾರ್, ಮಾಜಿ ಶಾಸಕ ತೋಂಟದಾರ್ಯ, ಮಂಗಳಾ ಮುದ್ದುಮಾದಪ್ಪ, ಅಧ್ಯಾಪಕರು ಹಾಗೂ ಸಿಬ್ಬಂದಿ ಇದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ