ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಈ ವೇಳೆ ಪ್ರಮುಖರಾದ ಈರಣ್ಣ ಪೂಜಾರ, ಗಂಗಾಧರ ಮೆಣಸಿನಕಾಯಿ ಹಾಗೂ ಮಂಜುನಾಥ ಮಾಗಡಿ ಮಾತನಾಡಿ, ಹಿಂದೂಗಳ ಪ್ರಥಮ ಪೂಜಿತ ಗಣಪತಿಯ ವಿಸರ್ಜನೆಗೆ ಪಟ್ಟಣದ ಹಲವು ಕಡೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡುವ ಮೂಲಕ ಅವರ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಪಟ್ಟಣದಲ್ಲಿ ಪ್ರತಿಷ್ಠಾಪನೆ ಮಾಡುವ ಬೃಹತ್ ಗಣಪತಿ ವಿಗ್ರಹಗಳ ವಿಸರ್ಜನೆಗೆ ಬೃಹತ್ ಗುಂಡಿಗಳನ್ನು ತೋಡಿ ಅವುಗಳ ಸುತ್ತ ಸ್ವಚ್ಛತೆ ಕಾಪಾಡುವುದು ಹಾಗೂ ಗಣಪತಿಯ ವಿಸರ್ಜನೆಗೆ ತೆಗೆದಿರುವ ಗುಂಡಿಗಳನ್ನು ಮತ್ತೆ ಮುಚ್ಚುವ ಕಾರ್ಯ ಮಾಡುತ್ತಿರುವುದು ಹಿಂದೂಗಳ ಭಾವನೆಗೆ ಚ್ಯುತಿ ತರುವ ಕಾರ್ಯ ಮಾಡಿದಂತಾಗುತ್ತದೆ. ಆದ್ದರಿಂದ ಶಾಶ್ವತವಾದ ಗುಂಡಿಗಳನ್ನು ತೆಗೆದು ಗಣಪತಿಯ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಮಾತನಾಡಿ, ಗಣಪತಿಯ ವಿಸರ್ಜನೆಗೆ ಪಟ್ಟಣದಲ್ಲಿ 3 ಕಡೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗುಂಡಿ ತೋಡುವ ಕಾರ್ಯ ಮಾಡಿಕೊಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.ಈ ವೇಳೆ ವಿಜಯ ಕುಂಬಾರ, ಪ್ರವೀಣ ಬೋಮಲೆ, ನವೀನ ಹಿರೇಮಠ, ಅಮಿತ ಗುಡಗೇರಿ, ಅಭಿಷೇಕ ಉಮಚಗಿ, ಪ್ರಶಾಂತ ಗಾಂಜಿ, ಶರಣು ಗಾಂಜಿ, ಗಂಗಾಧರ ಸವಣೂರ, ಹನುಮಂತಪ್ಪ ಶೆರಸೂರಿ, ಸಂತೋಷ ಅಳಗುಂಡಿ, ಆದೇಶ ಸವಣೂರ, ವಿನಾಯಕ ಸಪಡ್ಲ, ಸಾಗರ ಮೆಹರವಾಡೆ, ಅಕ್ಷಯ ಅಚಲಕರ, ಯಶವಂತ ಶಿರಹಟ್ಟಿ, ಗುದ್ನೇಪ್ಪ ಸೊಪ್ಪಿನ ಹಾಗೂ ವಿವಿಧ ಗಣೇಶ ಮಂಡಳಿ ಪದಾಧಿಕಾರಿಗಳು, ಹಿಂದೂ ಸಂಘಟನೆ ಸದಸ್ಯರು ಇದ್ದರು.