ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ವೇಳೆ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಡಾ,ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚಿತ್ರಾವತಿ ಜಲಾಶಯಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೆಸರು ನಾಮಕರಣ ಮಾಡುವ ಪ್ರಸ್ತಾಪವು ಅಭಿವೃದ್ಧಿ ರಾಜಕಾರಣದ ಗಂಧ-ಗಾಳಿ ಗೊತ್ತಿಲ್ಲದ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ರಾಜಕೀಯ ಕುಚೇಷ್ಟೆಯಾಗಿದ್ದು, ಈ ಚೇಷ್ಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರವರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದರು.
ಡ್ಯಾಂಗೆ ಶ್ರೀರಾಮ್ ರೆಡ್ಡಿ ಕಾರಣಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಸಿಪಿಐಎಂ ನ ಶಾಸಕರಾಗಿದ್ದ ಕಾಮ್ರೇಡ್ ಜಿ.ವಿ.ಶ್ರೀರಾಮ್ ರೆಡ್ಡಿ ರವರ ದೂರದೃಷ್ಟಿ ಹಾಗೂ ಅವಿರತ ಶ್ರಮದ ಫಲವಾಗಿ ಮತ್ತು ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ನೇತೃ ತ್ವದಲ್ಲಿ ನಡೆದ ನಿರಂತರ ಹೋರಾಟ ದಿಂದ ಅಸ್ತಿತ್ವಕ್ಕೆ ಬಂದಿರುವ ಬಾಗೇ ಪಲ್ಲಿ ತಾಲೂಕಿನ ಜೀವನಾಡಿ ಚಿತ್ರಾವತಿ ಜಲಾಶಯಕ್ಕೆ ,ಬಾಗೇಪಲ್ಲಿ ತಾಲ್ಲೂಕು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲದ ಬಿಜೆಪಿ ಮುಖಂಡರ ಹೆಸರು ನಾಮಕರಣ ಮಾಡಬಾರದು ಎಂದರು.
ಬಾಗೇಪಲ್ಲಿಯ ಕೆಂಬಾವುಟ ಹೋರಾಟದ ಚರಿತ್ರೆಯನ್ನು ಹಾಗೂ ಸಿಪಿಎಂ ಶಾಸಕರ ಅವಧಿಯ ಅಭಿವೃದ್ದಿ ಪರ್ವವನ್ನು ಮಸುಕುಗೊಳಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಜಂಟಿಯಾಗಿ ಹೆಣೆದಿರುವ ರಾಜಕೀಯ ಕುತಂತ್ರದಿಂದ ಕಾಂಗ್ರೆಸ್ ಸಚಿವರು ಬಿಜೆಪಿ ಮುಖಂಡರ ಹೆಸರಲ್ಲಿ ಅಣೆಕಟ್ಟಿಗೆ ನಾಮಕರಣ ಮಾಡುವುದಾಗಿ ಹೇಳುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐಎಂ ಅಭ್ಯರ್ಥಿ ಸೋಲಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಮಾಡಿಕೊಂಡಿದ್ದ ಅನೈತಿಕ ಮೈತ್ರಿಯು, ಈ ನಾಮಕರಣ ಪ್ರಸ್ತಾಪದ ಮೂಲಕ ಮತ್ತೊಮ್ಮೆ ಬಹಿರಂಗಗೊಂಡಿದೆ ಎಂದು ಆರೋಪಿಸಿದರು.
ಪುರಸಭೆ ತೀರ್ಮಾನ ರದ್ದಾಗಲಿ
ಪ್ರತಿಭಟನೆಯಲ್ಲಿ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ ಮುನಿವೆಂಕಟಪ್ಪ, ರಾಜ್ಯ ರೈತಸಂಘ ಪುಟ್ಟಣ್ಣಯ್ಯ ಬಣದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀನಾ ರಾಯನರೆಡ್ಡಿ. ಕೆಪಿಆರ್ ಎಸ್ ನ ಜಿಲ್ಲಾ ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ , ಚನ್ನರಾಯಪ್ಪ ರಮಣ, ಶಿವಪ್ಪ, ಬೈರಾರೆಡ್ಡಿ, ದೇವರಾಜ್, ಕೃಷಪ್ಪ, ರಾಜಪ್ಪ, ದಲಿತ ಹಕ್ಕುಗಳ ಸಮಿತಿಯ ನಾಗರಾಜ್ ,ರಘು ರಾಮರೆಡ್ಡಿ, ಮುನಿಯಪ್ಪ, ರಮಣ, ಈಶ್ವರ ರೆಡ್ಡಿ, ರಮಾಮಣಿ ಮತ್ತಿತರರು ಇದ್ದರು.