-ನೀರಾವರಿ ಇಲಾಖೆ ಹೊರಗುತ್ತಿಗೆ ಸೌಡಿ ನೌಕರರ ಮುಷ್ಕರ
ಕನ್ನಡಪ್ರಭ ವಾರ್ತೆ ಭದ್ರಾವತಿ
ವೇತನ ಮತ್ತು ಪಿ.ಎಫ್ ಹಾಗೂ ಇಎಸ್‌ಐ ವಂತಿಕೆ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಂ.೪ರ ತಾಲೂಕಿನ ಬಿಆರ್‌ಎಲ್‌ಬಿಸಿ ವಿಭಾಗದ ಮಿಲ್ಟ್ರಿ ಕ್ಯಾಂಪ್‌ನಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಅವರ ಕಚೇರಿ ಮುಂಭಾಗ ಇಲಾಖೆಯ ಹೊರಗುತ್ತಿಗೆ ಸೌಡಿ ನೌಕರರು ಮುಷ್ಕರ ನಡೆಸಿದರು.ಬಿಆರ್‌ಎಲ್‌ಬಿಸಿ ವಿಭಾಗದ ಬಿಆರ್‌ಪಿ-ನಂ.೧, ಡಿಬಿ ಹಳ್ಳಿ-ನಂ.೨ ಹಾಗೂ ಭದ್ರಾವತಿ-ನಂ.೩ರಲ್ಲಿ ಒಟ್ಟು ೩೫೦ ಹೊರಗುತ್ತಿಗೆ ಸೌಡಿ ನೌಕರರು ೨-೩ ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹೊರಗುತ್ತಿಗೆ ಸೌಡಿ ನೌಕರರ ಹಲವಾರು ಬೇಡಿಕೆಗಳಿದ್ದು, ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಸಂಘಟನೆ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಬಹುತೇಕ ಬೇಡಿಕೆಗಳು ಬಾಕಿ ಉಳಿದಿವೆ ಎಂದು ಸಂಘಟನೆ ಪ್ರಮುಖರು ಪತ್ರಿಕೆಯೊಂದಿಗೆ ಅಳಲು ತೋರ್ಪಡಿಸಿಕೊಂಡಿದ್ದಾರೆ. ವೇತನ ಮತ್ತು ಪಿ.ಎಫ್ ಹಾಗೂ ಇಎಸ್‌ಐ ವಂತಿಕೆ ಪಾವತಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ.
ಡಿ೧೮-ಬಿಡಿವಿಟಿ ಮತ್ತು (ಎ)