ಗೇರುಸೊಪ್ಪ, ಸರಳಗಿ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

KannadaprabhaNewsNetwork |  
Published : Sep 21, 2024, 02:00 AM IST
ಹದಗೆಟ್ಟ ಸರಳಗಿಯಿಂದ ರಾಷ್ಟ್ರೀಯ ಹೆದ್ದಾರಿ 69 ಸಂಪರ್ಕಿಸುವ ರಸ್ತೆ. | Kannada Prabha

ಸಾರಾಂಶ

ಬಸ್ ಸೌಲಭ್ಯವು ಕಡಿಮೆ ಇದೆ. ಸರಳಗಿಯಲ್ಲಿ ಕೆಲವೊಂದು ವೇಗದೂತ ಬಸ್ ನಿಲುಗಡೆ ಮಾಡುತ್ತಿಲ್ಲ. ಈ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಇಲ್ಲಿನ ಪ್ರಾಥಮಿಕ ಶಾಲೆಗೆ ನಾಲ್ಕೂ ವರ್ಷಗಳಿಂದ ಮುಖ್ಯಾಧ್ಯಾಪಕರಿಲ್ಲ.

ಹೊನ್ನಾವರ: ತಾಲೂಕಿನ ಗೇರುಸೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಯನ್ನು ನೇಮಕ ಮಾಡಬೇಕು. ಗೇರುಸೊಪ್ಪ, ಸರಳಗಿ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕದಂಬ ಸೈನ್ಯದ ಜಿಲ್ಲಾ ಸಂಚಾಲಕ ಪುರಂದರ ನಾಯ್ಕ ಮಾತನಾಡಿ, ಸುಮಾರು 10 ತಿಂಗಳಾದರೂ ಗೇರುಸೊಪ್ಪದ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಸರಳಗಿ ಜನರಿಗೆ ವೈದ್ಯರ ಅವಶ್ಯಕತೆ ತೀರಾ ಇದೆ. ಇದು ಒಂದು ಕುಗ್ರಾಮವಾಗಿದೆ. ಇಲ್ಲಿನ ಜನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ದೂರದ ಆಸ್ಪತ್ರೆಗೆ ಹೋಗುವುದು ಬಹಳ ಕಷ್ಟಕರ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ನಮ್ಮ ಆರೋಗ್ಯಕ ರಕ್ಷಣೆಗೆ ವೈದ್ಯರ ಅವಶ್ಯಕತೆ ಇದೆ. 8ರಿಂದ 10 ದಿನಗಳ ಕಾಲಾವಕಾಶವನ್ನು ನೀಡುತ್ತೇವೆ. ಅಷ್ಟರೊಳಗೆ ವೈದ್ಯರ ನೇಮಿಸಬೇಕು. ಇಲ್ಲವಾದಲ್ಲಿ ಎರಡು ಪಂಚಾಯಿತಿಯ ಸಾರ್ವಜನಿಕರು ಸೇರಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಇತ್ತೀಚಿಗಷ್ಟೇ ಓರ್ವ ಯುವತಿ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತಕ್ಷಣದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು. ಇಂತಹ ಅನೇಕ ಘಟನೆಗಳು ಈ ಹಿಂದೆ ನಡೆದಿವೆ. ಕಾಂಪೌಂಡರ್, ನರ್ಸ್‌ಗಳೇ ಇಲ್ಲಿ ಅನಾರೋಗ್ಯಕ್ಕೆ ಔಷಧಿ ನೀಡಬೇಕಾದ ಸ್ಥಿತಿ ಇದೆ ಎಂದು ಸಮಸ್ಯೆ ತೋಡಿಕೊಂಡರು.

ಗ್ರಾಮಸ್ಥರಾದ ಮಗ್ದೂಮ್ ಇಷಾಕ್ ಸಾಬ್, ಕದಂಬ ಸೈನ್ಯ ಸರಳಗಿ ಘಟಕಾಧ್ಯಕ್ಷ ನಾರಾಯಣ ಉಪ್ಪಾರ, ಪದಾಧಿಕಾರಿಗಳಾದ ಲೋಕೇಶ ಉಪ್ಪಾರ, ರಾಜೇಶ್ ಪ್ರಮೋದ್ ಮತ್ತಿತರರು ಮಾತನಾಡಿ, ವೈದ್ಯರ ನೇಮಕ ಮಾಡಿ ಎಂದು ಡಿಸಿಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ‌. ಈ ಭಾಗದಲ್ಲಿ ಹೆಚ್ಚಿನವರು ಬಡವರೇ ಆಗಿದ್ದಾರೆ. ಕೆಲವರ ಬಳಿ ವಾಹನಗಳಿಲ್ಲ. ದೂರದ ಹೊನ್ನಾವರಕ್ಕೆ ಹೋಗಿ ಚಿಕಿತ್ಸೆ ಪಡೆಯುವುದು ಬಹಳ ಕಷ್ಟ. ಇಲ್ಲಿನ ಜನರ ಪರಿಸ್ಥಿತಿ ತೀರ ಕಷ್ಟಕರವಾಗಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಇಲ್ಲವಾದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಬಸ್ ಸೌಲಭ್ಯವು ಕಡಿಮೆ ಇದೆ. ಸರಳಗಿಯಲ್ಲಿ ಕೆಲವೊಂದು ವೇಗದೂತ ಬಸ್ ನಿಲುಗಡೆ ಮಾಡುತ್ತಿಲ್ಲ. ಈ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಇಲ್ಲಿನ ಪ್ರಾಥಮಿಕ ಶಾಲೆಗೆ ನಾಲ್ಕೂ ವರ್ಷಗಳಿಂದ ಮುಖ್ಯಾಧ್ಯಾಪಕರಿಲ್ಲ. ಸರಳಗಿಯಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆ ತೀರಾ ಹದಗಿಟ್ಟಿದೆ. ಇದರಿಂದ ಸಂಚಾರಕ್ಕೆ ಕಷ್ಟಕರವಾಗಿದೆ ಎಂದು ತಮ್ಮ ಗ್ರಾಮದ ಹಲವು ಸಮಸ್ಯೆಗಳನ್ನು ತೆರೆದಿಟ್ಟರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಹೊನ್ನಪ್ಪ ನಾಯ್ಕ, ಜಯಂತ, ಸುಬ್ರಾಯ, ತಿಪ್ಪಯ್ಯ, ಪ್ರಮೋದ ಉಪ್ಪಾರ, ಮುಕುಂದ, ಹನುಮಂತ, ಶಶಿಕುಮಾರ್, ರಾಮಚಂದ್ರ, ಸುಬ್ರಹ್ಮಣ್ಯ, ನಾಗರಾಜ, ವಿನಾಯಕ, ಗೋವಿಂದ, ಶಿವಾನಂದ, ನಾರಾಯಣ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಗಾಲಿ ಕಾರ್ಖಾನೆ ಉದ್ಯೋಗಿಗೆಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್
ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ