ಮಡಿಕೇರಿ: ಅಕ್ಟೋಬರ್ 8ರಂದು ಮಹಿಳಾ ದಸರಾ ಸಂಭ್ರಮ

KannadaprabhaNewsNetwork | Published : Sep 21, 2024 2:00 AM

ಸಾರಾಂಶ

ಮಡಿಕೇರಿ ನಗರ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಅ. 8 ರಂದು 7ನೇ ವರ್ಷದ ಮಹಿಳಾ ದಸರಾ ಆಯೋಜಿಸಲಾಗಿದೆ. ವೈವಿಧ್ಯಮಯ ಸ್ಪರ್ಧೆಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ ಮತ್ತು ಮಹಿಳಾ ದಸರಾ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ನಗರ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಅ. 8 ರಂದು 7ನೇ ವರ್ಷದ ಮಹಿಳಾ ದಸರಾ ಆಯೋಜಿಸಲಾಗಿದೆ. ವೈವಿಧ್ಯಮಯ ಸ್ಪರ್ಧೆಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ ಮತ್ತು ಮಹಿಳಾ ದಸರಾ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ತಿಳಿಸಿದ್ದಾರೆ.

ಮಹಿಳಾ ದಸರಾ ಅಂಗವಾಗಿ ಜಿಲ್ಲೆಯ ಮಹಿಳೆಯರಿಗಾಗಿಯೇ ವೈವಿಧ್ಯಮಯ ಸ್ಪರ್ಧೆಗಳು, ಕಾರ್ಯಕ್ರಮಗಳು ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಮಡಿಕೇರಿ ನಗರಸಭೆ ಸದಸ್ಯೆಯರು, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆಯಲಿವೆ.

ಸ್ಪರ್ಧೆ ವಿವರ:

ಮೆಹಂದಿ ಹಾಕುವುದು, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಒಂಟಿಕಾಲಿನ ಓಟ,, ಕಪ್ಪೆ ಜಿಗಿತ, ಕೇಶವಿನ್ಯಾಸ, ಗಾರ್ಭ ನೖತ್ಯ, ಸೀರಿಗೆ ನಿಖರ ಬೆಲೆ ಹೇಳುವುದು, 60 ವರ್ಷ ಮೇಲ್ಪಟ್ಟವರಿಗೆ ಅಜ್ಜಿ ಜತೆ ಮೊಮ್ಮಕ್ಕಳ ನಡಿಗೆ, ವಾಲಗತ್ತಾಟ್, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು, ಬಲೂನ್ ಗ್ಲಾಸ್ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಮೇಕಪ್ ಮಾಡುವ ಸ್ಪರ್ಧೆ, ಕೇಶವಿನ್ಯಾಸ, ಮೆಹಂದಿ ಸ್ಪರ್ಧೆಗಳಿಗೆ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಅ.8ರಂದು ಮಹಿಳಾ ದಸರಾ ದಿನದಂದೇ ಸ್ಪರ್ಧಿಗಳು ಹೆಸರು ನೋಂದಾಯಿಸಬಹುದು.

ಈ ಸಂಬಂಧಿತ ಪೂರ್ವಭಾವಿ ತಯಾರಿ ಸಭೆಯಲ್ಲಿ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಖಜಾಂಚಿ ಅರುಣ್ ಶೆಟ್ಟಿ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಾಯಕ ಶಿಶು ಅಭಿವೖದ್ದಿ ಯೋಜನಾಧಿಕಾರಿ ಸಿ.ಪಿ ಸವಿತಾ, ನಗರಸಭೆಯ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಉಪಾಧ್ಯಕ್ಷೆಯರಾದ ಸವಿತಾ ರಾಕೇಶ್, ಲೀಲಾ ಶೇಷಮ್ಮ, ಸದಸ್ಯೆ ಸಬಿತಾ, ಮೂಡ ಸದಸ್ಯೆ ಮೀನಾಜ್ ಪ್ರವೀಣ್, ಸಾಂಸ್ಕೃತಿಕ ಸಮಿತಿ ಸದಸ್ಯೆಯರಾದ ವೀಣಾಕ್ಷಿ, ಭಾರತಿ ರಮೇಶ್, ಮಹಿಳಾ ದಸರಾ ಸದಸ್ಯೆಯರಾದ ಕನ್ನಿಕೆ, ಪ್ರೇಮ, ಸ್ವಣ೯ಲತಾ, ಶೃತಿ ಹಾಜರಿದ್ದರು, ಹೆಚ್ಚಿನ ಮಾಹಿತಿಗೆ ಸಂಪರ್ಕ ಕುಡೆಕಲ್ ಸವಿತಾ ಸಂತೋಷ್ - 9535898352, 9483785810.

Share this article