ಭಟ್ಕಳ ನವಾಯತ್ ಕಾಲನಿಯಲ್ಲಿ ಮುರಿನಕಟ್ಟೆ ಪುನಃ ಸ್ಥಾಪಿಸಲು ಆಗ್ರಹ

KannadaprabhaNewsNetwork |  
Published : May 22, 2026, 02:30 AM IST
ಭಟ್ಕಳದ ನವಾಯತ್ ಕಾಲನಿಯ ಮುರಿನಕಟ್ಟೆಯನ್ನು ಪುನಃ ಸ್ಥಾಪಿಸುವಂತೆ ಹಿಂಜಾವೇ ಕಾರ್ಯಕರ್ತರು ಆಗ್ರಹಿಸಿದರು. | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ತೆರವು ಮಾಡಲಿರುವ ಪಟ್ಟಣದ ನವಾಯತ್‌ ಕಾಲನಿಯಲ್ಲಿರುವ ಮುರಿನಕಟ್ಟೆಯನ್ನು ಅದೇ ಸ್ಥಳದಲ್ಲಿ ಪುನಃ ಸ್ಥಾಪಿಸುವಂತೆ ಗುರುವಾರ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಪ್ರತಿಭಟನೆಕನ್ನಡಪ್ರಭ ವಾರ್ತೆ ಭಟ್ಕಳ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ತೆರವು ಮಾಡಲಿರುವ ಪಟ್ಟಣದ ನವಾಯತ್‌ ಕಾಲನಿಯಲ್ಲಿರುವ ಮುರಿನಕಟ್ಟೆಯನ್ನು ಅದೇ ಸ್ಥಳದಲ್ಲಿ ಪುನಃ ಸ್ಥಾಪಿಸುವಂತೆ ಗುರುವಾರ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯದರ್ಶಿ ನಾಗೇಶ ನಾಯ್ಕ, ರಾಷ್ಟ್ರೀಯ ಹೆದ್ದಾರಿಗಾಗಿ ತೆರವುಗೊಂಡ ಮುರಿನಕಟ್ಟೆಯನ್ನು ಮರುಸ್ಥಾಪಿಸಿ ನೀಡುತ್ತೇವೆ ಎಂದೂ ವರ್ಷಗಳಿಂದ ತಾಲೂಕಾಡಳಿತ ಹೇಳಿಕೊಂಡು ಬರುತ್ತಿದೆ. ಆದರೆ, ಇನ್ನೂ ತನಕ ಅದಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿಲ್ಲ. ಮುರಿನಕಟ್ಟೆ ಹಿಂದೂಗಳ ಪಾಲಿನ ಪವಿತ್ರ ಸ್ಥಾನವಾಗಿದೆ ಮತ್ತು ಪ್ರತಿವರ್ಷ ಮಾರಿ ಅಮ್ಮನ ಹೊರೆಯನ್ನು ಈ ಸ್ಥಳದಲ್ಲಿಯೇ ಪೂಜಿಸಲಾಗುತ್ತದೆ. ಈಗ ಈ ಕಟ್ಟೆಯ ಎದುರು ಮನೆ ಕಟ್ಟುತ್ತಿದ್ದಾರೆ. ಮುಂದೆ ಇದೇ ಕಾರಣ ನೀಡಿ ಕಟ್ಟೆಯನ್ನು ಇಲ್ಲಿಂದ ಸ್ಥಳಾಂತರ ಮಾಡಿದರೂ ಆಶ್ಚರ್ಯವಿಲ್ಲ ಎಂದರು. ಮುರಿನಕಟ್ಟೆ ನಮ್ಮ ಆಚರಣೆಯ ಪವಿತ್ರ ಸ್ಥಳವಾಗಿದ್ದು, ತಾಲೂಕಡಳಿತ ಕೂಡಲೇ ಇದೇ ಸ್ಥಳದಲ್ಲಿ ಕಟ್ಟೆ ಕಟ್ಟಿಕೊಡಬೇಕು. ಇಲ್ಲವಾದಲ್ಲಿ ನಾವೇ ಮುಂದೆ ನಿಂತು ಕಟ್ಟೆ ಕಟ್ಟುತ್ತೇವೆ ಎಂದು ಹೇಳಿದರು.

ಪ್ರತಿಭಟನಾಕಾರನ್ನು ಸಮಾಧಾನಿಸಿದ ನಗರ ಠಾಣೆಯ ಇನ್‌ಸ್ಪೆಕ್ಟರ್ ದಿವಾಕರ, ಮುಂದಿನ ಎರಡು ದಿನಗಳ ಒಳಗೆ ಸಭೆ ಕರೆದು ತಾಲೂಕಾಡಳಿತದಿಂದ ಕಟ್ಟೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯ ತನಕ ಯಾರು ಉದ್ರಿಕ್ತರಾಗಬಾರದು ಎಂದು ವಿನಂತಿಸಿಕೊಂಡರು. ಅವರ ಮಾತಿಗೆ ಒಪ್ಪಿದ ಪ್ರತಿಭಟನಾಕಾರರು ಮುಂದಿನ ಸೋಮವಾರದೊಳಗೆ ಕಟ್ಟೆ ನಿರ್ಮಾಣ ಮಾಡದೇ ಇದ್ದಲ್ಲಿ ನಾವೆ ಮುಂದೆ ನಿಂತು ಕಟ್ಟೆ ನಿರ್ಮಿಸುವುದಾಗಿ ಎಚ್ಚರಿಸಿದರು. ಸ್ಥಳೀಯರಾದ ಶ್ರೀನಿವಾಸ ನಾಯ್ಕ ಹನುಮಾನ ನಗರ, ಚಂದ್ರ ನಾಯ್ಕ, ವೆಂಕಟ್ರಮಣ ನಾಯ್ಕ, ನಾಗೇಶ ನಾಯ್ಕ, ಜಗದೀಶ ನಾಯ್ಕ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಜೀತ್ ನಾಯ್ಕರ ವಿನೂತನ ಕಲ್ಪನೆ ಮಾದರಿ: ಸುರೇಶ ನಾಯ್ಕ
ಅಕ್ರಮ ಗೋಸಾಗಾಟ, ಗೋಹತ್ಯೆ ನಿಯಂತ್ರಣಕ್ಕೆ ಆಗ್ರಹ