ಖಾಸಗಿ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ಕಡಿವಾಣಕ್ಕೆ ಆಗ್ರಹ

KannadaprabhaNewsNetwork | Published : May 20, 2025 1:11 AM
ಶಾಸಗಿ ಶಾಲೆಗಳಿಗೆ ಶುಲ್ಕ ನಿಗದಿಪಡಿಸುವ ಸಂಪೂರ್ಣ ಅಧಿಕಾರವಿದ್ದು, ಅದನ್ನು ಪ್ರಶ್ನಿಸುವುದಿಲ್ಲ. ಅವರು ಎಷ್ಟೇ ಶುಲ್ಕ ನಿಗದಿಪಡಿಸಿದರೂ ಕಟ್ಟಲು ಸಿದ್ಧ. ಆದರೆ ಅದನ್ನು ಮೊದಲೇ ಪ್ರಕಟಿಸಬೇಕು. ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯ ಅನುಮತಿ ಪಡೆದುಕೊಳ್ಳಬೇಕು ಎಂಬ ನಿಯಮವನ್ನು ಯಾವ ಶಾಲೆಗಳೂ ಪಾಲಿಸುತ್ತಿಲ್ಲ. ಆದ್ದರಿಂದ ಎಲ್ಲ ಶಾಲೆಗಳೂ ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕು.
Follow Us

ಕನ್ನಡಪ್ರಭ ವಾರ್ತೆ ಮೈಸೂರು

ಖಾಸಗಿ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ಕಡಿವಾಣಕ್ಕೆ ಹಾಗೂ ವಾರ್ಷಿಕ ಶುಲ್ಕವನ್ನು ಕಂತುಗಳ ರೀತಿಯಲ್ಲಿ ಪಾವತಿಸಲು ಕರ್ನಾಟಕ ಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಖಾಸಗಿ ಶಾಲೆಗಳಲ್ಲಿ ಪೋಷಕರಿಂದ ಹೆಚ್ಚುವರಿಯಾಗಿ ಶುಲ್ಕ ಸಂಗ್ರಹಿಸುತ್ತಿದ್ದು, ಸಂಗ್ರಹಿಸುವ ಶುಲ್ಕ ಹಾಗೂ ಶಾಲಾ ಮಂಡಳಿ ನಿಗದಿಪಡಿಸಿರುವ ಶುಲ್ಕವನ್ನು ಸೂಚನಾ ಫಲಕ ಹಾಗೂ ಶಾಲೆಯ ವೆಬ್‌ಸೈಟ್‌ನಲ್ಲಿ ಮೊದಲೇ ಪ್ರಕಟಿಸಬೇಕು ಎಂದು ಕರ್ನಾಟಕ ಹಿತರಕ್ಷಣ ವೇದಿಕೆಯ ಅಧ್ಯಕ್ಷ ವಿನಯ್ ಕುಮಾರ್ ನೇತೃತ್ವದಲ್ಲಿ ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜು ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.

ಕೆಲವು ಖಾಸಗಿ ಶಾಲೆಗಳು ಅನಧಿಕೃತವಾಗಿ ಶುಲ್ಕ ಪಡೆದುಕೊಳ್ಳುತ್ತಿದ್ದಾರೆ ಎಂಬ ದೂರು ಬಂದಿದೆ, ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಶಾಸಗಿ ಶಾಲೆಗಳಿಗೆ ಶುಲ್ಕ ನಿಗದಿಪಡಿಸುವ ಸಂಪೂರ್ಣ ಅಧಿಕಾರವಿದ್ದು, ಅದನ್ನು ಪ್ರಶ್ನಿಸುವುದಿಲ್ಲ. ಅವರು ಎಷ್ಟೇ ಶುಲ್ಕ ನಿಗದಿಪಡಿಸಿದರೂ ಕಟ್ಟಲು ಸಿದ್ಧ. ಆದರೆ ಅದನ್ನು ಮೊದಲೇ ಪ್ರಕಟಿಸಬೇಕು. ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯ ಅನುಮತಿ ಪಡೆದುಕೊಳ್ಳಬೇಕು ಎಂಬ ನಿಯಮವನ್ನು ಯಾವ ಶಾಲೆಗಳೂ ಪಾಲಿಸುತ್ತಿಲ್ಲ. ಆದ್ದರಿಂದ ಎಲ್ಲ ಶಾಲೆಗಳೂ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಒತ್ತಾಯಿಸಿದರು.

ಕೆಲವು ಖಾಸಗಿ ಶಾಲೆಗಳಲ್ಲಿ ನಿಗದಿಪಡಿಸಿದಂತಹ ವಾರ್ಷಿಕ ಶುಲ್ಕವನ್ನು ಒಂದೇ ಬಾರಿ ಕಟ್ಟುವಂತೆ ಪೋಷಕರಿಗೆ ಒತ್ತಡ ಹೇರಲಾಗುತ್ತಿದೆ. ಇದರಿಂದ ಪೋಷಕರು ಶುಲ್ಕವನ್ನು ಕಟ್ಟಲು ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತಿದೆ

ಹಾಗೂ ಪೋಷಕರಿಗೆ ವಾರ್ಷಿಕ ಶುಲ್ಕವನ್ನು ಮೂರು ಕಂತುಗಳಿಗೆ ಕಟ್ಟುವಂತೆ ಅನುವು ಮಾಡಿಕೊಡಬೇಕಾಗಿ ಖಾಸಗಿ ಶಾಲೆಗಳಿಗೆ ನಿರ್ದೇಶ ನೀಡುವಂತೆ ಒತ್ತಾಯಿಸಿದರು.

ವೇದಿಕೆಯ ಮಂಜುನಾಥ್, ಎಸ್ ಎನ್ ರಾಜೇಶ್, ರವಿಚಂದ್ರ, ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ ಇದ್ದರು.

ಚಂಪಕ ರಾಷ್ಟ್ರೀಯ ಕಲಾ ಉತ್ಸವ: ಭರತನಾಟ್ಯ ಪ್ರಸ್ತುತಿ

ಕನ್ನಡಪ್ರಭ ವಾರ್ತೆ ಮೈಸೂರು

ಚಂಪಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಾಮಕೃಷ್ಣನಗರದ ಚಂಪಕ ಅಕಾಡೆಮಿ ಆವರಣದ ಚಂಪಕ ಸಭಾಂಗಣದಲ್ಲಿ ಚಂಪಕ ರಾಷ್ಟ್ರೀಯ ಕಲಾ ಉತ್ಸವ ಅಂಗವಾಗಿ ಶನಿವಾರ ಸಾಧನೆಗೈದ ಕಲಾವಿದರಿಂದ ಭರತನಾಟ್ಯ ಪ್ರಸ್ತುತಿ ಆಯೋಜಿಸಿತ್ತು.

ಆದಿ ಶಂಕರಾಚಾರ್ಯರಿಗೆ ಗೌರವ ಸಲ್ಲಿಸುವ ಸಲುವಾಗಿ ಚಂಪಕ ಅಕಾಡೆಮಿಯ ಸಂಸ್ಥಾಪಕಿ ಡಾ.ನಾಗಲಕ್ಷ್ಮಿ ನಾಗರಾಜನ್ ಅವರು ಆದಿ ಗುರುಗಳ ಪ್ರಸಿದ್ಧ ಸಂಯೋಜನೆಗಳಿಗೆ ನರ್ತಿಸಿದರು.

ನಂತರ ಕಲಾಸಂದೇಶ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಸಂದೇಶ್ ಭಾರ್ಗವ್ ಅವರ ಶಿಷ್ಯರಿಂದ ಭರತನಾಟ್ಯ, ಸಾಧನೆಗೈದ ವಿದುಷಿಗಳಾದ ಸಿಂಧೂ ನಿರಂಜನ್, ಅನುಷಾ ವರುಣ್, ಶಿಲ್ಪಾ ಕಾಂತರಾಜು, ಡಾ. ಗುಣಶೀಲಾ, ಹರ್ಷಿಣಿ ಪ್ರಜ್ವಲ್, ಅಕ್ಷತಾ ಪ್ರಮೋದ್, ಶ್ರುತಿ, ಲಾವಣ್ಯ ಅವರು ನೃತ್ಯ ಸಾದರಪಡಿಸಿದರು. ಬೆಂಗಳೂರಿನ ಶಾರದ ನಾಟ್ಯ ಕುಟೀರದ ಮಿಲನ್ ಅವರು ತಮ್ಮ ಶಿಷ್ಯರೊಂದಿಗೆ ಭರತನಾಟ್ಯ ಪ್ರದರ್ಶಿಸಿದರು.

ಸಿ‌ಎಫ್‌ಟಿ‌ಆರ್‌ಐ ಲೇ‌ಔಟ್ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷೆ ಕರುಣಾ ವೆಂಕಟರಾಮನ್ ಕಾರ್ಯಕ್ರಮ ಉದ್ಘಾಟಿಸಿದರು.