ಕನ್ನಡಪ್ರಭ ವಾರ್ತೆ ಬಂಗಾರಪೇಟೆ
೩೮೦ ಎಂಎಲ್‌ಡಿ ನೀರು ಹರಿಸಿ
ಇದರಿಂದ ಬಂಗಾರಪೇಟೆ ಕ್ಷೇತ್ರಕ್ಕೆ ನೀರು ಬರುತ್ತಿಲ್ಲ. ಮೂರು ವರ್ಷಗಳಿಮದ ಹನಿ ನೀರು ಬಂದಿಲ್ಲ ಇದರಿಂದ ರೈತರಿಗೆ ತೊಂದರೆ ಉಂಟಾಗಿದೆ.ಒಪ್ಪಂದದಂತೆ ೩೮೦ ಎಂಎಲ್‌ಡಿ ನೀರು ಪೂರೈಸಲು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸದನದಲ್ಲಿ ಒತ್ತಾಯಿಸಿದರು. ಕ್ಷೇತ್ರದಲ್ಲಿ ೨೦೦ಕ್ಕೂ ಹೆಚ್ಚಿನ ಕೆರೆಗಳಿವೆ ಅವುಗಳ ಅಭಿವೃದ್ದಿಗೆ ಸರ್ಕಾರ ೭ಕೋಟಿ ಅನುದಾನ ಮಂಜೂರು ಮಾಡಿತ್ತು, ಆದರೆ ಖರ್ಚು ಮಾಡಿರುವುದು ಕೇವಲ ೩.೫೫ಕೋಟಿ ಮಾತ್ರ ಎಂದರು.. ಕೆಸಿವ್ಯಾಲಿ ೨ನೇ ಹಂತದ ಯೋಜನೆಗೆ ಕೋಲಾರ ಕೆರೆಯಿಂದ ಬಂಗಾರಪೇಟೆ ಕ್ಷೇತ್ರದ ಕೆಲವು ಕೆರೆಗಳಿಗೆ ಪೈಪ್ ಲೈನ್ ಮೂಲಕ ನೀರು ಹರಿಸಲು ೪೫೫ ಕೋಟಿಗಳಿಗೆ ಹಿಂದಿನ ಸರ್ಕಾರದಲ್ಲಿ ಹಣ ಮಂಜೂರು ಆಗಿತ್ತು. ಕಾಮಗಾರಿ ಆರಂಭವಾಗಿದೆ, ೨೦೨೪ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಮುಗಿದಿಲ್ಲ ಎಂದರು.ಹಣ ಬಿಡುಗಡೆಗೆ ಒತ್ತಾಯ
ಯೋಜನೆಗೆ ಮಂಜೂರಾಗಿದ್ದ ೪೫೫ ಕೋಟಿಗಳಲ್ಲಿ ೧೪೯ ಕೋಟಿ ಮಾತ್ರ ಹಣ ಬಿಡುಗಡೆಯಾಗಿದ್ದು ಉಳಿದ ಹಣ ೧೨೦ಕೋಟಿ ನೀಡಿಲ್ಲ. ಇದೇ ಕಾರಣ ನೀಡಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗಿದೆ ಬಾಕಿ ಹಣ ಬಿಡುಗಡೆಯಾದರೆ ಕೆರೆಗಳಿಗೆ ನೀರಿನ ಭಾಗ್ಯ ಲಭಿಸಿ ರೈತರು ಸಮೃದ್ದಿಯಾಗಿ ಬೆಳೆಗಳನ್ನು ಬೆಳೆಸುವರು ಎಂದು ಆಗ್ರಹಿಸಿದರು.