ದಯಾನಂದ ಅಮಾನತು ವಾಪಸ್‌ ಪಡೆಯಲು ಹೆಚ್ಚಿದ ಆಗ್ರಹ

KannadaprabhaNewsNetwork |  
Published : Jun 10, 2025, 12:27 PM IST
ಫೋಟೋ 9ಪಿವಿಡಿ1ಪಾವಗಡ,ಪೊಲೀಸ್‌ ಕಮಿಷನರ್‌ ದಯಾನಂದ ಅವರ ವಿರುದ್ಧ ಕೈಗೊಂಡಿದ್ದ ಅಮಾನತ್‌ ಕ್ರಮ ವಿರೋಧಿಸಿ ಇಲ್ಲಿನ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಮತ್ತು ಯುವ ಘಟಕ ಪ್ರಗತಿಪರ ಸಂಘಟನೆಗಳಿಂದ ತಹಸೀಲ್ದಾರ್ ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.ಫೋಟೋ 9ಪಿವಿಡಿ2ರಾಜ್ಯ ಪೊಲೀಸ್‌ ಅಯುಕ್ತ ದಯಾನಂದ ಅವರ ಅಮಾನತ್‌ ಕ್ರಮ ವಿರೋಧಿಸಿ ಇಲ್ಲಿನ ವಾಲ್ಮೀಕಿ ನಾಯಕ ಹಾಗೂ ರೈತ,ಜನಪ ಸಂಘಟನೆಗಳ ವತಿಯಿಂದ ರಸ್ತೆ ತಡೆ ನಡೆಸಿದರು. | Kannada Prabha

ಸಾರಾಂಶ

ಐಪಿಎಲ್‌ ಕ್ರಿಕೆಟ್‌ ವಿಜಯೋತ್ಸವದ ಭದ್ರತಾ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ದಯಾನಂದ ಅವರನ್ನು ಅಮಾನತು ಪಡಿಸಿದ್ದನ್ನು ವಿರೋಧಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಮತ್ತು ಯುವ ಘಟಕ, ರೈತ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಸೋಮವಾರ ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಐಪಿಎಲ್‌ ಕ್ರಿಕೆಟ್‌ ವಿಜಯೋತ್ಸವದ ಭದ್ರತಾ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ದಯಾನಂದ ಅವರನ್ನು ಅಮಾನತು ಪಡಿಸಿದ್ದನ್ನು ವಿರೋಧಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಮತ್ತು ಯುವ ಘಟಕ, ರೈತ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಸೋಮವಾರ ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ಐಪಿಎಲ್ ಲೀಗ್ ನಲ್ಲಿ ಗೆದ್ದಿರುವ ಹಿನ್ನಲೆ ಇತ್ತೀಚೆಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಿರೀಕ್ಷೆಯು ಮೀರಿ ಸೇರಿದ್ದ ಜನಸಂದಣಿಯಲ್ಲಿ 11 ಜನ ಕಾಲ್ತುಳಿತದಿಂದ ಮೃತಪಟ್ಟಿದ್ದರು. ಈ ವಿಚಾರದ ಸಲುವಾಗಿ ಪೊಲೀಸ್ ಇಲಾಖೆ ಮತ್ತು ಭದ್ರತೆಗೆ ಸಂಬಂಧಪಟ್ಟಂತೆ ಕ್ರಮವಹಿಸಿದ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ ಇವರನ್ನು ಅಮಾನತುಗೊಳಿಸಿದ್ದ ಕ್ರಮ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಎಸ್‌ಎಸ್‌ಕೆ ವೃತ್ತದವರೆವಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿದರು. ನಗರದ ಬಳ್ಳಾರಿ ರಸ್ತೆಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಸೊಗಡು ವೆಂಕಟೇಶ್‌ ಮಾತನಾಡಿ, ಐಪಿಎಲ್‌ ವಿಜಯೋತ್ಸದ ಸಂಬಂಧಪಟ್ಟಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದ್ದು ಇದರ ಹೊಣೆ, ರಾಜ್ಯವನ್ನಾಳುವ ಸಿಎಂ ಹಾಗೂ ಡಿಸಿಎಂ ಹೊರಬೇಕು. ಸರ್ಕಾರದ ಆದೇಶದಂತೆ ಸೂಕ್ತ ಬಂದೋ ಬಸ್ತ್ ಒದಗಿಸಿದ್ದರೂ ಏನು ತಪ್ಪು ಮಾಡದ ಪೊಲೀಸ್‌ ಕಮಿಷನರ್‌ ದಯಾನಂದವರನ್ನು ಅಮಾನತುಗೊಳಿಸಿದ ಕ್ರಮ ಖಂಡನೀಯ ಎಂದು ಕಿಡಿಕಾರಿದರು.

ರಾಜ್ಯ ರೈತ ಸಂಘದ, ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಪೊಲೀಸ್‌ ಕಮಿಷನರ್‌ ದಯಾನಂದ ಅವರ ವಿರುದ್ಧದ ಕ್ರಮ ಆವೈಜ್ಞಾನಿಕದಿಂದ ಕೂಡಿದೆ. ಕೂಡಲೇ ಅಮಾನತು ಆದೇಶ ಪಾಪಸ್ಸು ಪಡೆದು ಅವರನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ಆಗ್ರಹಿಸಿದರು.

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ದೇವಲಕರೆ ಪಾಳೇಗಾರ ಲೋಕೇಶ್, ಮುಖಂಡರಾದ ಓಂಕಾರ್ ನಾಯಕ, ಬೇಕರಿ ನಾಗರಾಜ್, ನರಸಿಂಹ ಕೃಷ್ಣ, ನಾರಾಯಣಪ್ಪ, ವಳ್ಳೂರು ನಾಗೇಶ್‌, ಭಾಸ್ಕರ್ ನಾಯಕ,ಸಿ ಕೆ ತಿಪ್ಪೇಸ್ವಾಮಿ, ಅಂಜನ್ ನಾಯಕ, ನರಸಿಂಹಲು, ಬ್ಯಾಡನೂರು ಶಿವು, ಬಲ್ಲೇನಹಳ್ಳಿ ರಾಮು,ತಿರುಮಲೇಶ್, ಬಲರಾಮ್. ಶ್ರೀನಿವಾಸ್ ನಾಯಕ,ನಾಗರಾಜು,ಲೋಕೇಶ್ ನಾಯಕ, ಶಿವಪ್ಪ,ಅನಂತನಾಯಕ,ರಾಮು,ಬಲರಾಮ್,ಕನ್ಮಮೇಡಿ ಕೃಷ್ಣಮೂರ್ತಿ .ಬಿಎಸ್ಪಿ ಮಂಜುನಾಥ್, ರಂಗಮ್ಮ ಅಂಬಿಕಾ, ರೂಪ,ಕರವೇ ಲಕ್ಷ್ಮೀನಾರಾಯಣ,ಮಾರುತಿ,ತಿಮ್ಮಯ್ಯ,ನರಸಿಂಹ ನಾಯಕ, ಹೋಬಳೇಶ್, ಹನುಮಂತರಾಯ,ದಾಸ ಭೋಜರಾಜು,ಅಶ್ವಥ ಕಣಿವೆನಹಳ್ಳಿ ಮಂಜಪ್ಪ ಇತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ