ಶೃಂಗೇರಿಯಲ್ಲಿ ಅಂಬೇಡ್ಕರ್ ಭವನ ಜಾಗ ಉಳಿಸಲು ಆಗ್ರಹ

KannadaprabhaNewsNetwork |  
Published : Oct 14, 2026, 01:45 AM IST
ೇ್ | Kannada Prabha

ಸಾರಾಂಶ

ಶಾರದಾ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿದ್ದ ಜಾಗದಲ್ಲಿ ಸಂತೇ ಮಾರುಕಟ್ಟೆ ನಿರ್ಮಾಣ ವಿರೋಧಿಸಿ ಪಟ್ಟಣದಲ್ಲಿ ಬಿಎಸ್ಪಿ ದಲಿತ ಸಂಘಟನೆಗಳು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದವು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಶಾರದಾ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿದ್ದ ಜಾಗದಲ್ಲಿ ಸಂತೇ ಮಾರುಕಟ್ಟೆ ನಿರ್ಮಾಣ ವಿರೋಧಿಸಿ ಪಟ್ಟಣದಲ್ಲಿ ಬಿಎಸ್ಪಿ ದಲಿತ ಸಂಘಟನೆಗಳು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದವು.

ಅ.7 ರಿಂದ ಪಪಂ ಎದುರು ಅನಿರ್ದಿಷ್ಟಾವಧಿ, ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸಂಘಟನೆಗಳು ಸೋಮವಾರ ವೆಲ್ ಕಂ ಗೇಟ್‌ನಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ, ಬೈಕ್ ಜಾಥಾ ನಡೆಸಿ ವಿರೋಧ ವ್ಯಕ್ತಪಡಿಸಿದವು.

ತಮಟೆ ಬಾರಿಸುವ ಮೂಲಕ ಸಾಗಿದ ಮೆರವಣಿಗೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಸಮಾವೇಶಗೊಂಡಿತು. ಈ ವೇಳೆ ಮಾತನಾಡಿದ ಕೊಪ್ಪದ ಬಿಎಸ್ ಪಿ ಮುಖಂಡ ಆನಂದ್ ಅಂಬೇಡ್ಕರ್ ಭವನಕ್ಕೆ ಮೀಸಟ್ಟಿದ್ದ ಜಾಗ ಬೇರೆ ಉದ್ದೇಶಕ್ಕೆ ಬಳಸವುದು ಖಂಡನೀಯ. ದಲಿತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ. ಸಮುದಾಯದ ಹಿತ ಬಲಿಕೊಡಬೇಡಿ. ಜಾಗವನ್ನು ನಾವು ಬಿಟ್ಟು ಕೊಡುವುದಿಲ್ಲ ಎಂದರು.

ಶೃಂಗೇರಿ ಘಟಕದ ಶೀಲಾ ಸುಖೇಶ್ ಮಾತನಾಡಿ ನಾವು ಕಳೆದ ಹಲವು ವರ್ಷಗಳಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಯಾವುದೇ ರೀತಿ ಸ್ಪಂದನೆಯೇ ಸಿಗುತ್ತಿಲ್ಲ. ಈಗ ಯಾರದ್ದೋ ಒತ್ತಡಕ್ಕೆ ಮಣಿದು ನಮ್ಮ ಸಮುದಾಯಕ್ಕೆ ಮೀಸಲಿಟ್ಟಿದ್ದ ಜಾಗ ಕಬಳಿಸಲು ಹೊರಟಿದ್ದಾರೆ. ಶೃಂಗೇರಿ ತಹಸೀಲ್ದಾರ್ ನಮ್ಮ ಸಮಸ್ಯೆಗೆ ಸ್ಪಂದಿಸಿ ಜಾಗವನ್ನು ಮೀಸಲಿಡಬೇಕು. ಅಲ್ಲಿವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.

ಸ್ಥಳಕ್ಕೆ ತಹಸೀಲ್ದಾರ್, ಎಸಿ, ಶಾಸಕರು ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಸ್ಥಳಕ್ಕೆ ಉಪವಿಭಾಗಧಿಕಾರಿ ಪುರುರಾಜ್ ಸಿಂಗ್ ಭೇಟಿ ನೀಡಿ ಮನವೊಲಿಸಲು ಯತ್ನಿಸಿದಾಗ ಕೆಲ ಕಾಲ ವಾಗ್ವಾದ ಉಂಟಾಯಿತು. ನಂತರ ಮನವಿ ಸ್ವೀಕರಿಸಿದ ಅವರು ಒಂದು ವಾರ ಕಾಲಾವಕಾಶ ನೀಡಿ.ಅಲ್ಲಿವರೆಗೆ ಸ್ಥಳದಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ ಎಂಬ ಭರವಸೆ ನೀಡಿದರು. ಪ್ರತಿಭಟನಾಕಾರರು ಬರವಣಿಗೆ ಮೂಲಕ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ದೆಹಲಿಯಲ್ಲಿರುವ ಶಾಸಕ ಟಿ.ಡಿ ರಾಜೇಗೌಡ ದೂರವಾಣಿ ಮೂಲಕ ಮಾತನಾಡಿ ಅಂಬೇಡ್ಕರ್ ಭವನ ಜಾಗದಲ್ಲಿ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರವಿದೆ. ಆ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಉಪವಿಭಾಗಧಿಕಾರಿ ತಹಸೀಲ್ದಾರ್‌ಗೆ ಆ ಜಾಗದ ಸುತ್ತ ಬೇಲಿ ನಿರ್ಮಿಸಿ, ನಾಮಫಲಕ ಅಳವಡಿಸುವಂತೆ ಸೂಚಿಸಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಬಿಎಸ್ ಪಿ ಮುಖಂಡ ಕೆ.ಎಂ.ಗೋಪಾಲ್,ವಾಸು ಕೂತಗೋಡು, ಶಾರದಾ ಗೋಪಾಲ್, ಬಿಜೆಪಿಯ ಹಾದಿ ಗೋಪಾಲ್ ,ಕಾಂಗ್ರೇಸ್‌ನ ರಮೇಶ್ ಭಟ್, ಕೆ.ಎಂ. ರಾಮಣ್ಣ, ಜೆಡಿಎಸ್ ನ ಜಿ.ಜಿ. ಮಂಜುನಾಥ್, ಪಪಂ ಮಾಜಿ ಸದಸ್ಯ ರಫಿಕ್ ಅಹಮದ್, ಬಿಎಸ್ ಪಿಯ ಸದಾನಂದ ಯಡದಳ್ಳಿ, ತಾಲೂಕು ದಸಂಸ ಸಂಚಾಲಕ ಶಂಕರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸಮಾಧಾನ ಬದಿಗಿಟ್ಟು ಲಿಂಬಿಕಾಯಿ ಪರ ಪ್ರಚಾರ: ಕುಬೇರಪ್ಪ
ಗೊಂಬೆಗಳ ಪ್ರದರ್ಶನ ಸಂಸ್ಕೃತಿ, ಸಂಸ್ಕಾರಗಳ ಭಾವನಾತ್ಮಕ ಬೆಸುಗೆ: ಶಕುಂತಲಾ ಆನಂದ್