ಪದವಿ ಪೂರ್ವ ಶಿಕ್ಷಣ ಇಲಾಖೆ ಆಸ್ಮಿತೆ ಉಳಿವಿಗೆ ಆಗ್ರಹ

KannadaprabhaNewsNetwork |  
Published : Nov 09, 2025, 03:00 AM IST
8ಕೆಪಿಎಲ್28 ಪದವಿಪೂರ್ವ ಶಿಕ್ಷಣ ಇಲಾಖೆಯ ಅಶ್ಮಿತೆಯನ್ನು ಉಳಿಸುವಂತೆ ಆಗ್ರಹಿಸಿ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ  ಶನಿವಾರ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಪ್ರಾಚಾರ್ಯರ ಮತ್ತು ಉಪನ್ಯಾಸಕರ ಕರ್ತವ್ಯ ಸರ್ಕಾರ ಅನುಮಾನಿಸಿದಂತಾಗಿದೆ.

ಕೊಪ್ಪಳ: ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆ ಉಳಿಸುವಂತೆ ಆಗ್ರಹಿಸಿ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಸಂಘದಿಂದ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಲಾಯಿತು.

ಮನವಿ ಪತ್ರದಲ್ಲಿ, ಕರ್ನಾಟಕದ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯು ಕಳೆದ ಸುಮಾರು ೫೦ ವರ್ಷಗಳಿಂದಲೂ ಇಡೀ ದೇಶಕ್ಕೆ ಮಾದರಿಯಾಗಿದೆ. ಇಂತಹ ಮಾದರಿ ವ್ಯವಸ್ಥೆ ಹೊಂದಿರುವ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಇತ್ತೀಚಿಗೆ ಸರ್ಕಾರ ಅವೈಜ್ಞಾನಿಕ ಆದೇಶ ಮಾಡುವುದರ ಮೂಲಕ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಮನೋಸ್ತೈರ್ಯ ಕುಗ್ಗಿಸಲಾಗುತ್ತಿದೆ. ವಿಶೇಷವಾಗಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಹುದ್ದೆಗಿಂತ ಕೆಳಹಂತದ ಡಯಟ್ ನೌಕರರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಶೈಕ್ಷಣಿಕ ಚಟುವಟಿಕೆಗಳ ಪರಿಶೀಲನೆಗಾಗಿ ನೇಮಿಸಿ ಆದೇಶಿಸಿದೆ. ಇದು ಪ್ರಾಚಾರ್ಯರ ಮತ್ತು ಉಪನ್ಯಾಸಕರ ಕರ್ತವ್ಯ ಸರ್ಕಾರ ಅನುಮಾನಿಸಿದಂತಾಗಿದೆ. ಅಲ್ಲದೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ೯ ಮತ್ತು ೧೦ನೇ ತರಗತಿಗೆ ಪಾಠ ಮಾಡುವಂತಹ ವೃಂದ ಮತ್ತು ನೇಮಕಾತಿ ನಿಯಮ ಬದಲಾಯಿಸಲು ಸರ್ಕಾರ ಹೊರಟಿರುವುದು ಅತ್ಯಂತ ಖೇದಕರ ವಿಷಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲಾಖೆ ಮೇಲ್ವಿಚಾರಣೆ ಮತ್ತು ನೂತನ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ವಿರೋಧಿಸಿ ಕೇಂದ್ರ ಸಂಘಗಳ ನಿರ್ದೇಶನದಂತೆ ಕೊಪ್ಪಳದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಂಘಗಳು ಜಂಟಿಯಾಗಿ ಮನವಿ ಸಲ್ಲಿಸಲಾಯಿತು.

ಸಾಂಕೇತಿಕ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ, ಕೋಶ್ಯಾಧ್ಯಕ್ಷ ಶಾಂತಪ್ಪ ಟಿ.ಸಿ, ಪ್ರಧಾನ ಕಾರ್ಯದರ್ಶಿ ಬಸವರಾಜ್, ಉಪಾಧ್ಯಕ್ಷ ಶಿವಾನಂದ ಮೇಟಿ ಮತ್ತು ಲಲಿತಮ್ಮ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಗೌಡ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಳಗುಂದಿ, ಕಾರ್ಯಧ್ಯಕ್ಷ ಮಾರುತಿ ಲಕ್ಮಾಪುರ, ಸಂಜಯ್ ಬಡಿಗೇರ್, ಎ.ಆರ್. ಶಿವಾನಂದ, ಮಂಜುನಾಥ್ ಸ್ವಾಮಿ, ಅನ್ಸರ್ ಬಾಷು, ಭೀಮಪ್ಪ, ಡಾ. ನಾಗಪುಷ್ಪಲತಾ, ಡಾ. ಲಿಂಗಣ್ಣ ಜಂಗಮರಳ್ಳಿ, ಪತ್ರೆಪ ಛತ್ತರಕಿ, ಅಜಗರ್ ಪಾಷಾ, ಮಹಿಬೂಬಅಲಿ, ಡಾ. ಸೋಮಕ್ಕ, ಪ್ರಿಯದರ್ಶಿನಿ, ಮಾಲಾ ಪಿ, ಅಮರೇಶ ದೇವರಾಳ, ನಾಗರಾಜ್, ಈರಯ್ಯ, ಎನ್.ಪಾಂಡುರಂಗ, ಸರ್ಕಾರಿ ನೌಕರ ಸಂಘದ ನಿರ್ದೇಶಕ ಎಸ್.ವಿ. ಮೇಳಿ, ರಾಜಪ್ಪ ಕೇಸರಬಾವಿ, ಶೇಖಬಾಬು, ಲಕ್ಷ್ಮಣ ಸಿಂಗ್ ವಗರನಾಳ, ಹಿರಿಯ ಪ್ರಾಚಾರ್ಯ ರಾಜಶೇಖರ ಪಾಟೀಲ್ ಸೇರಿದಂತೆ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ವಿವಿಧ ಕಾಲೇಜುಗಳಿಂದ ಸುಮಾರು ೨೫೦ಕ್ಕೂ ಹೆಚ್ಚು ಪ್ರಾಚಾರ್ಯರು, ಉಪನ್ಯಾಸಕರು, ಉಪನ್ಯಾಸಕಿಯರು ಸೇರಿ ಮೆರವಣಿಗೆ ಮೂಲಕ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ